Categories
ತೀರ್ಥಹಳ್ಳಿ

ಬಸವಾನಿ ಸೊಸೈಟಿ ನೂತನ ಸಭಾ ಭವನ ಉದ್ಘಾಟನೆಗೆ ಗಣ್ಯರ ದಂಡು – 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಭಾಭವನ, ಕಾರ್ಯಾಲಯ ಕಟ್ಟಡ – ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಇಟ್ಟ ಸಂಸ್ಥೆ

ಬಸವಾನಿ ಸೊಸೈಟಿ ನೂತನ ಸಭಾ ಭವನ ಉದ್ಘಾಟನೆಗೆ ಗಣ್ಯರ ದಂಡು
– 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಭಾಭವನ, ಕಾರ್ಯಾಲಯ ಕಟ್ಟಡ
– ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಇಟ್ಟ ಸಂಸ್ಥೆ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ಬಸವಾನಿ ಸೊಸೈಟಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಭಾನುವಾರ ನಡೆದ ಬಸವಾನಿ ಸೊಸೈಟಿ ನೂತನ ಸಭಾ ಭವನ ಉದ್ಘಾಟನೆಗೆ ಗಣ್ಯರ ದಂಡು ಆಗಮಿಸಿ ಶುಭ ಕೋರಿದ್ದಾರೆ.
ರಾಜ್ಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿರುವ ಸಹಕಾರ ನಾಯಕ ವಿಜಯದೇವ್, ಸುಮಾರು 2. 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸಭಾಭವನ, ಕಾರ್ಯಾಲಯ ಕಟ್ಟಡ ಉದ್ಘಾಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿತು.
ಭಾನುವಾರ ಬಸವಾನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟದ ಉದ್ಘಾಟಿಸಿ ಅವರು ಮಾತನಾಡಿ, ಸಹಕಾರಿ ವ್ಯವಸ್ಥೆ ಗ್ರಾಮೀಣ ಜನರ ವಿಶ್ವಾಸಗಳಿಸಿದೆ. ಸರ್ಕಾರ ಮಾಡಲಾಗದ ಅನೇಕ ಕೆಲಸಗಳನ್ನು ಇಂತಹ ಸಂಸ್ಥೆಗಳು ಮಾಡುತ್ತಿವೆ. ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ರೀತಿಯ ಪ್ರಾಮುಖ್ಯತೆ ನೀಡಿರುವುದು ಸಂಪೂರ್ಣವಾಗಿ ತಿಳಿಯುತ್ತದೆ ಎಂದರು.
ವಿಜಯ್ ದೇವ್ ಅವರು ಪ್ರಾಮಾಣಿಕವಾದ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸರ್ಕಾರ ಸಹಕಾರ ಮಾಡುವುದಕ್ಕೂ ನೀವು ಸಹಕಾರ ಮಾಡುತ್ತಿರುವುದು ತುಂಬಾ ಹೆಮ್ಮೆಯಾಗುತ್ತಿದೆ ಎಂದರು.
ಟೆಂಡ‌ರ್ ಮೊತ್ತಕ್ಕಿಂತ 41 ಲಕ್ಷ ರೂಪಾಯಿ ಹಣ ಉಳಿಸಿರುವುದು ಸಾಮಾನ್ಯ ಸಾಧನೆಯಲ್ಲ. ಯಾರು ಕೂಡ ಕೆಲಸ ಮಾಡುವಾಗ ನಷ್ಟ ಮಾಡಿಕೊಳ್ಳಬೇಕು ಎಂದು ಅಪೇಕ್ಷಿಸುವುದಿಲ್ಲ. ಕಟ್ಟಡದ ಕಾಮಗಾರಿ ಶಿಸ್ತು ಬದ್ಧವಾಗಿ ನಡೆದಿದೆ. ಕಟ್ಟಡ ನಿರ್ಮಾತೃ ಬಸವಾನಿ ವಿಜಯದೇವ್ ಶ್ರಮ ಮತ್ತು ಶ್ರದ್ದೆ ಉಳಿದವರಿಗೆ ಪ್ರೇರಣೆಯಾಗಲಿ ಎಂದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ ಸಂಸ್ಥೆಯ ಸೇವೆ ಬಗ್ಗೆ ಮೆಚ್ಚುಗೆ ಮಾತನಾಡಿದರು.
“ತೀರ್ಥಹಳ್ಳಿಗೆ 388 ಕೋಟಿ ಸಾಲ ವಿತರಿಸಿದ್ದೇವೆ” ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು. ವ್ಯಕ್ತಿಯ ಆಧಾರದ ಮೇಲೆ ಸಹಕಾರಿ ವ್ಯವಹಾರ ನಡೆಯುತ್ತಿದೆ. ಇದರ ಮೇಲೆ ಮೀಸಲಾತಿ ಹೇರಿ ಉಪದ್ರ ನೀಡಬಾರದು” ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಹಕಾರ ನಾಯಕ ಬಸವಾನಿ ವಿಜಯದೇವ್, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ್‌ , ತಹಶೀಲ್ದಾರ್ ರಂಜಿತ್ ಎಸ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಬಸವಾನಿ ಸೊಸೈಟಿಯ ನಿರ್ದೇಶಕರು, ತಾಲೂಕಿನ 23 ಸೊಸೈಟಿ ಅಧ್ಯಕ್ಷರು ಸದಸ್ಯರು, ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.