Categories
ಶಿವಮೊಗ್ಗ

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಕಲರವ!

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಕಲರವ!
– ಕೃಷ್ಣ ರಾಧೆ ವೇಷ ತೊಟ್ಟು ಸಂಭ್ರಮಿಸಿದ ಮಕ್ಕಳು
– ಮೊದಲ ಬಾರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಯೋಜನೆ
– ತಾಯಿಮನೆ ಆಶ್ರಮದ ಸಹಯೋಗದಲ್ಲಿ ಕಾರ್ಯಕ್ರಮ

NAMMUR EXPRESS NEWS
ಶಿವಮೊಗ್ಗ: ತಾಯಿಮನೆ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ತಾಯಿ ಮನೆ ಸುದರ್ಶನ್ ಅವರ ವಿಭಿನ್ನ ಪ್ರಯತ್ನದಿಂದಾಗಿ ಮೊದಲನೇ ಬಾರಿಗೆ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮಕ್ಕಳು ಕೃಷ್ಣ ಮತ್ತುರಾಧೆ ವೇಷಧರಿಸಿ, ಮಕ್ಕಳ ವಾರ್ಡ್ ಗಳಿಗೆ ಭೇಟಿ ಕೊಟ್ಟರು. ವೈದ್ಯರು ಮತ್ತು ದಾದಿಯರ ಜೊತೆ ಬಾಂಧವ್ಯದೊಂದಿಗೆ ಬೆರೆಯುವ ಮೂಲಕ ಮಕ್ಕಳು ಖುಷಿಯಿಂದ ಆಸ್ಪತ್ರೆಯನ್ನು ಸುತ್ತಾಡಿ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸಿದರು, ಈ ಕಾರ್ಯಕ್ರಮದಲ್ಲಿ ತಾಯಿ ಮನೆ ಸುದರ್ಶನ್, ಶ್ರೀಮತಿ ಗಾನವಿ ಸುದರ್ಶನ್, ಶ್ರೀಮತಿ ಮಂಜುಳಾ ಇನ್ನಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.