Categories
ಶಿವಮೊಗ್ಗ

ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಓಡಿಸಿ ಮುಂದೆ ಸಾಗಿದ ಶಾಲಾ ಮಕ್ಕಳು

ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಓಡಿಸಿ ಮುಂದೆ ಸಾಗಿದ ಶಾಲಾ ಮಕ್ಕಳು

* ದಿನೇ ದಿನೇ ಹೆಚ್ಚುತ್ತಿದೆ ಕಾಡಾನೆಗಳ ಸಂಖ್ಯೆ
* ಕಾಡಾನೆಗಳ ಸ್ಥಳಾಂತರ ಯಾವಾಗ,ಜನರನ್ನು ರಕ್ಷಿಸಿ

NAMMUR EXPRESS NEWS
ಎನ್.ಆರ್ ಪುರ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನನಿಬಿಡ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಡಾನೆಗಳು ನಿರಂತರವಾಗಿ ಪ್ರತಿನಿತ್ಯ ದಾಂಧಲೆ ನಡೆಸುತ್ತಿವೆ. ಆನೆಗಳನ್ನು ಓಡಿಸಿ ಎಂದು ಮನವಿ, ಪ್ರತಿಭಟನೆಗಳನ್ನು ಮಾಡಿ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಜನರು ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ.
ಕಾಡಾನೆಗಳಂತೂ ನಾಡನ್ನು ಬಿಟ್ಟು ಹೋಗುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ ಬದಲಾಗಿ ದಿನೇ ದಿನೇ ತಾಲೂಕಿನಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚುತ್ತಿದೆ ಹೀಗಾಗಿ ಜನರು ಇನ್ನೇನಪ್ಪಾ ಮಾಡೋದು ಅಂತ ಜನರು ಜೀವ ಭಯದಿಂದ ಬದುಕುತ್ತಿದ್ದಾರೆ. ನರಸಿಂಹರಾಜಪುರ ತಾಲೂಕಿನ ಕುಸುಬೂರು ಗ್ರಾಮದಲ್ಲಿ ಶಾಲೆಯನ್ನು ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಆನೆಯನ್ನು ಕೂಗಾಡುತ್ತಾ ಶಬ್ದ ಮಾಡಿ ಓಡಿಸಿ ಮನೆಯತ್ತ ತೆರಳಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದ್ದು ಜೀವ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಈ ಆನೆಗಳ ಸ್ಥಳಾಂತರ ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.