Categories
ಶಿವಮೊಗ್ಗ

ಶಿವಮೊಗ್ಗ : ಗೂಗಲ್‌ ಪೇ, ಫೋನ್‌ ಪೇಗೆ ನೊಟೀಸ್‌, ಶಿವಮೊಗ್ಗದ ವ್ಯಾಪಾರಿಗಳಿಗೆ ಗೊಂದಲ..!!

ಟಾಪ್ 3 ನ್ಯೂಸ್

ಶಿವಮೊಗ್ಗ : ಗೂಗಲ್‌ ಪೇ, ಫೋನ್‌ ಪೇಗೆ ನೊಟೀಸ್‌, ಶಿವಮೊಗ್ಗದ ವ್ಯಾಪಾರಿಗಳಿಗೆ ಗೊಂದಲ..!!
– ಚಿಕ್ಕಮಗಳೂರು: ಖಾಸಗಿ ಬಸ್ ಪಲ್ಟಿಯಾಗಿ 25ಕ್ಕೂ ಹೆಚ್ಚು ಜನರಿಗೆ ಗಾಯ..!!
– ಶಿವಮೊಗ್ಗ : ಗಾಂಜಾ ಅಮಲಿ ನಿಂದ ಮೂವರ ವಿರುದ್ದ ಕೇಸ್ ದಾಖಲು..!

NAMMUR EXPRESS NEWS
ಶಿವಮೊಗ್ಗ: UPI ಬಳಸುತ್ತಿರುವ ಬೆಂಗಳೂರಿನ ಸಾವಿರಾರು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೊಟೀಸ್‌ ಜಾರಿ ಮಾಡಿದೆ. ಇದರ ಬೆನ್ನಿಗೆ ಶಿವಮೊಗ್ಗದಲ್ಲಿಯು ವ್ಯಾಪಾರಿಗಳಲ್ಲಿ ಗೊಂದಲ, ಆತಂಕ ಮೂಡಿದೆ. ಶಿವಮೊಗ್ಗದಲ್ಲಿ ವ್ಯಾಪಾರಿಗಳು ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂ ಬಳಕೆಗೆ ಮಿತಿ ವಿಧಿಸಿಕೊಳ್ಳುತ್ತಿದ್ದಾರೆ. ನಗದು ಮೂಲಕ ವ್ಯಾಪಾರ ಆರಂಭಿಸುತ್ತಿದ್ದಾರೆ. ಕೆಲವು ವ್ಯಾಪಾರಿಗಳು ಯು.ಪಿ.ಐ ಬಳಕೆಗೆ ಮಿತಿ ವಿಧಿಸುತ್ತಿದ್ದಾರೆ. ನಗದು ಮೂಲಕವೆ ವ್ಯಾಪಾರ ಮಾಡುತ್ತಿದ್ದಾರೆ. ತೀರಾ ಹಣವೇ ಇಲ್ಲ ಎಂದವರಿಂದ ಅನಿವಾರ್ಯವಾಗಿ ಯು.ಪಿ.ಐ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಒಂದಷ್ಟು ವ್ಯಾಪಾರಿಗಳು ನಗದು ಮೂಲಕವೇ ವ್ಯಾಪಾರ ನಡೆಸುತ್ತೇವೆ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದಾರೆ. ಗೂಗಲ್‌ ಪೇ ಸ್ವೀಕರಿಸುವುದಿಲ್ಲ ಎಂದು ಬೋರ್ಡ್‌ ಹಾಕಿದ್ದಾರೆ. ಗೂಗಲ್‌ ಪೇಯನ್ನು ಒಬ್ಬರ ಹೆಸರಿನ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡುವುದು, ಫೋನ್‌ ಪೇಯನ್ನು ಮತ್ತೊಬ್ಬರ ಹೆಸರಿನ ಖಾತೆಗೆ ಲಿಂಕ್‌ ಮಾಡುವುದು. ಒಂದೇ ಬ್ಯಾಂಕ್‌ ಖಾತೆಗೆ ಹೆಚ್ಚಿನ ಮೊತ್ತ ಸೇರದಂತೆ ತಡೆಯಬಹುದು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ 65 ಸಾವಿರ ವರ್ತಕರ ಮಾಹಿತಿಯನ್ನು ಯು.ಪಿ.ಐ ಪ್ಲಾಟ್‌ಫಾರಂಗಳಿಂದ ಪಡೆದುಕೊಂಡಿದ್ದಾರೆ. ಈ ಪೈಕಿ 15 ಸಾವಿರ ವರ್ತಕರಿಗೆ ನೊಟೀಸ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಸುಮಾರು 6 ಸಾವಿರ ವರ್ತಕರಿಗೆ ನೊಟೀಸ್‌ ನೀಡಲಾಗಿದೆ. ಕೆಲವರಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ.

– ಚಿಕ್ಕಮಗಳೂರು: ಖಾಸಗಿ ಬಸ್ ಪಲ್ಟಿಯಾಗಿ 25ಕ್ಕೂ ಹೆಚ್ಚು ಜನರಿಗೆ ಗಾಯ..!!

ಚಿಕ್ಕಮಗಳೂರು : ಖಾಸಗಿ ಬಸ್ ಪಲ್ಟಿ, 25ಕ್ಕೂ ಹೆಚ್ಚು ಜನರಿಗೆ ಗಾಯ ಮೂಡಿಗೆರೆ ತಾಲೂಕಿನ ದೇವನ ಗೂಲ್ ಗ್ರಾಮದ ಬಳಿ ಘಟನೆ ಬೆಂಗಳೂರಿನಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದ ಬಸ್ ಕುದುರೆಮುಖದ ನೇತ್ರಾವತಿ ಪೀಕ್ ಟ್ರಾಕಿಂಗ್ ಗೆ ಬಂದಿದ್ದ ಯುವಕ-ಯುವತಿಯರು ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡುವ ಯುವಕ ಯುವತಿಯರು ವೀಕೆಂಡ್ ಹಿನ್ನೆಲೆ 40ಕ್ಕೂ ಹೆಚ್ಚು ಜನ ಟ್ರಕ್ಕಿಂಗ್ ಗಾಗಿ ಬೆಂಗಳೂರಿಂದ ಬರುತ್ತಿದ್ದರು ಚಾಲಕನ ನಿಯಂತ್ರಣ ತಪ್ಪಿ, ತಿರುವಿನಲ್ಲಿ ಬಸ್ ಪಟ್ಟಿ 25ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ ಗಾಯಾಳುಗಳು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲು ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

– ಶಿವಮೊಗ್ಗ : ಗಾಂಜಾ ಅಮಲಿ ನಿಂದ ಮೂವರ ವಿರುದ್ದ ಕೇಸ್ ದಾಖಲು.!

ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇರೆಗೆ, ಮೂವರ ವಿರುದ್ದ ಶಿವಮೊಗ್ಗ ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಜು. 17 ರ ರಾತ್ರಿ ನಡೆದಿದೆ. ತುಂಗಾನಗರ ಹಾಗೂ ಟಿಪ್ಪು ನಗರ ಕಡೆ ತೆರಳುವ ರಸ್ತೆಗಳಲ್ಲಿ, ಅನುಮಾನಾಸ್ಪದವಾಗಿ ಹಾಗೂ ಅಮಲಿನಲ್ಲಿ ಓಡಾಡುತ್ತಿದ್ದ ಆರೋಪಿಗಳನ್ನು ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಗಾಂಜಾ ಸೇವೆನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.