ತೀರ್ಥಹಳ್ಳಿಯಲ್ಲಿ ಹಲಸು ಮೇಳದ ಸಂಭ್ರಮ!
* ಭಾರಿ ಮಳೆಯಲ್ಲೂ ಹಲಸು ಖಾದ್ಯಗಳನ್ನು ಸವಿ ಮತ್ತು ಘಮ
* ಹಲಸಿನ ಹಣ್ಣಿನ ಜಿಲಾಭಿಗೆ ಬಾರಿ ಡಿಮ್ಯಾಂಡ್
– ಭಾನುವಾರ ಕೂಡ ಇದೆ.. ನೀವೂ ಭಾಗವಹಿಸಿ..
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾಧವ ಮಾಂಗಲ್ಯ ಮಂದಿರದಲ್ಲಿ ಬೃಹತ್ ಹಲಸು ಮೇಳ ನಡೆಯುತ್ತಿದೆ.
ಜುಲೈ 25,26,27ರಂದು ಟೀಮ್ ಕುಂದಾಪುರ ಪ್ರಸ್ತುತ ಪಡಿಸುತ್ತಿರುವ ಹಲಸು ಮೇಳ ಮತ್ತು ಹಣ್ಣು ಮೇಳ ರಾಜ್ಯದ ವಿವಿಧ ಮೂಲೆಗಳಿಂದ ರುಚಿಯಾದ ಮಾವು ಹಾಗೂ ಹಲಸಿನ ಇತರ ಉತ್ಪನ್ನಗಳು ಮತ್ತು ಶುಚಿ ರುಚಿಯಾದ ಹಣ್ಣಿನ ಖಾದ್ಯಗಳ ಈ ಮೇಳದಲ್ಲಿ ಹಲಸಿನಿಂದ ತಯಾರಿಸಲಾದ ಪಾಯಸ, ಚಿಪ್ಸ್, ಹಲಸಿನ ದೋಸೆ, ಹಲಸಿನ ಹಪ್ಪಳ, ಹಲಸಿನ ಬರ್ಫಿ, ಹಲಸಿನ ಜಾಮ್ ಮುಂತಾದವುಗಳು ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.
ರೈತರು ತಾವು ಬೆಳೆದ ಹಲಸು ಮಾದರಿಗಳನ್ನು ತಂದಿದ್ದಾರೆ. ನೂರಾರು ಹಲವಾರು ಭಕ್ಷಗಳು, ಬಟ್ಟೆ , ತಿನಿಸು, ಸ್ಟಾಲ್‌ಗಳು ಮೂರು ದಿನ ಒಂದೇ ಸೂರಿನಡಿಯಲ್ಲಿ ಸಿಗುತ್ತಿದೆ.
ಹಲಸು ಮೇಳದಲ್ಲಿ ಹಲಸಿನ ಹಣ್ಣು ಮತ್ತು ಹಲಸಿನ ಖಾದ್ಯಗಳಿಗೆ ಮಾತ್ರ ಸೀಮಿತವಾಗಿರದೆ ಹಲವು ರೀತಿಯ ವಸ್ತು ವಿನಿಯೋಗವು ಹಾಗೂ ವಸ್ತುಗಳ ಮಾಹಿತಿ ಮತ್ತು ವಿವಿಧ ಬಗೆಯ ಹೂ ಹಣ್ಣು ಗಳ ಸಸಿ ಗಳನ್ನು ಮಾರುವ ಹಾಗೂ ಕೊಳ್ಳುವ ಪ್ರಕ್ರಿಯೆ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ.
