Categories
ಶಿವಮೊಗ್ಗ

ಟಾಪ್ 5 ನ್ಯೂಸ್ ಶಿವಮೊಗ್ಗ

ಟಾಪ್ 5 ನ್ಯೂಸ್ ಶಿವಮೊಗ್ಗ

ಕಲಬೆರಕೆ ಫುಡ್ ಮಾಫಿಯಾ..!
ಶಿವಮೊಗ್ಗ: ಹೋಟೆಲ್, ಫುಡ್ ಕೋರ್ಟ್ ಅಂಗಡಿಗಳಿಗೆ ನೋಟಿಸ್‌!

– ಭದ್ರಾವತಿ: ಬ್ರಿಡ್ಜ್ ಕೆಳಗೆ ಪತ್ತೆಯಾಯ್ತು ಗೋತ್ಯಾಜ್ಯ!
– ಶಿವಮೊಗ್ಗ: ನೇಣಿಗೆ ಶರಣಾದ ವೃದ್ಧ ಮಹಿಳೆ
– ಶಿಕಾರಿಪುರ: ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ
– ಶಿವಮೊಗ್ಗ : ನವಜಾತ ಮಗು ಎಸೆದು ಹೋದ ತಾಯಿ: ಮಗು ಸಾವು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿನ ಕೆಲವು ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರದ ಬಗ್ಗೆ ಸಾರ್ವಜನಿಕರಿಂದ ಈಗೀಗ ಹೆಚ್ಚಾಗಿ ದೂರು ಗಳು ಬರುತ್ತಿರುವುದರ ನಡುವೆಯೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳ ತಂಡವು ದಾಳಿ ನಡೆಸಿ ಅಲ್ಲಿನ ಅಂಗಡಿಗಳ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದೆ.
ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆಹಾರಕ್ಕೆ ಬೆರೆಸುವ ಕಲರ್ ಪ್ಯಾಕೆಟ್ ದೊರೆತಿದೆ. ಅಲ್ಲಿನ ಸಿಬ್ಬಂದಿಗಳ ಸ್ವಚ್ಛತೆ ಕಾಣದೆ ಇರುವುದು. ವೈದ್ಯಕೀಯ ತಪಾಸಣೆ ಇಲ್ಲದಿರುವುದು ಎಲ್ಲವೂ ಅಧಿಕಾರಿಗಳ ಗಮನಕ್ಕೆ ಬಂದಿತ್ತಲ್ಲದೆ, ಕಲಬೆರೆಕೆ ಪದಾರ್ಥ ತಯಾರಿಕೆ ಸಂಬಂಧ 15 ತಿನಿಸು ಅಂಗಡಿಗಳಿಗೆ ನೋಟೀಸ್ ನೀಡಿದ ಘಟನೆ ನೆಡೆದಿದೆ. ಆರೋಗ್ಯಕ್ಕೆ ಮಾರಕವಾಗುವ ಕಲಬೆರೆಕೆ ಬಣ್ಣವನ್ನು ಹಾಕಲಾಗುತ್ತಿದೆ ಎಂದು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಅಧಿಕಾರಿಗಳ ತಂಡವು ಅಲ್ಲಿಗೆ ದಾಳಿ ನಡೆಸಿತ್ತು. ಸುಮಾರು 15 ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ.

– ಭದ್ರಾವತಿ: ಬ್ರಿಡ್ಜ್ ಕೆಳಗೆ ಪತ್ತೆಯಾಯ್ತು ಗೋತ್ಯಾಜ್ಯ!

ಭದ್ರಾವತಿ: ಭದ್ರಾವತಿಯ ಕಾಗೆ ಕೋಡಮಗ್ಗೆಯ ಬ್ರಿಡ್ಜ್ ಕೆಳಗೆ ರಾಶಿ ರಾಶಿ ಗೋತ್ಯಾಜ್ಯಗಳು ಪತ್ತೆಯಾಗಿದ್ದು ಈ ಕುರಿತು ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಗೆ ಕೋಡ್ ಮಗ್ಗೆ ದಾರಿಯಲ್ಲಿ ಇರುವ ಕಾಗೆಹಳ್ಳ ಬ್ರಿಡ್ಜ್ ನ ಬಳಿಯಲ್ಲಿ ಕೆಟ್ಟ ದುರ್ವಾಸನೆ ಬರುತ್ತಿದ್ದ ಪರಿಣಾಮ ಹಿಂದೂ ಸಂಘಟನೆ ಯುವಕರು ಹೋಗಿ ನೋಡಿದಾಗ ಗೋವಿನ ತಲೆಯ ಕೊಂಬು, ಮೂಳೆ ಮತ್ತು ಗೋವಿನ ಬೋಟಿ ಖಲಿಜಗಳು ಪತ್ತೆಯಾಗಿವೆ. ಸುಮಾರು10 ರಿಂದ 15ಕ್ಕಿಂತ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ತಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತಾಗಿದೆ. ಹತ್ತರಿಂದ ಹದಿನೈದು ಚೀಲಗಳು ಗೋವುಗಳ ಖಲಿಜಗಳು ತಂದು ನೀರಿನಲ್ಲಿ ಎಸೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ .
ಗೋವಿನ ಖನಿಜಗಳನ್ನು ತಂದು ವ್ಯವಸಾಯಕ್ಕೆ ಉಪಯೋಗಿಸುವ ನೀರಿನಲ್ಲಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿರುವುದಾಗಿ ಹಿಂದೂ ಸಂಘಟನೆಗಳು ದೂರಿವೆ. ಈ ಮುಂಚೆ ಇದೇ ವಿಚಾರವಾಗಿ ಠಾಣೆಗೆ ದೂರು ನೀಡಿದರು ಗೋ ಹತ್ಯೆ ಮಾಡಿ ಗೋವುಗಳ ಖನಿಜವನ್ನು ತಂದು ನೀರಿಗೆ ಬಿಸಾಕುವ ಕೆಲಸ ಮುಂದುವರೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.

– ಶಿವಮೊಗ್ಗ : ನೇಣಿಗೆ ಶರಣಾದ ವೃದ್ಧ ಮಹಿಳೆ

ಶಿವಮೊಗ್ಗ : ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ವಿಜಯ ಎಂಬ 65 ವರ್ಷದ ವೃದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲೇ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಮೂವರು ಮಕ್ಕಳಿರುವುದಾಗಿ ತಿಳಿದು ಬಂದಿದೆ. ಸಂಜೆ ಮನೆಯಲ್ಲಿ ಮಹಡಿ ಮೇಲೆ ಹೋಗಲು ಇರುವ ಕಬ್ಬಿಣದ ಮೆಟ್ಟಿಲಿಗೆ ಸೀರೆ ಬಿಗಿದುಕೊಂಡು ಮಹಿಳೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನ ಮರಣೋತ್ತರ ಕೇಂದ್ರಕ್ಕೆ ರವಾನಿಸಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾವಧಿ ಕಠಿಣ ಜೈಲು

ಶಿವಮೊಗ್ಗ :- ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 23 ವರ್ಷದ ಶಿಕಾರಿಪುರ ತಾಲೂಕಿನ ಯುವಕನೊಬ್ಬನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಕಟ್ಟಲು ವಿಫಲವಾದರೆ 4 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಬಾಲಕಿಗೆ ಪರಿಹಾರವಾಗಿ ದಂಡದ ಮೊತ್ತದಲ್ಲಿ 45 ಸಾವಿರ ರೂ. ಹಾಗೂ ಸರ್ಕಾರದ ವತಿಯಿಂದ 7 ಲಕ್ಷ ರೂ. ನೀಡುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಹರಿಪ್ರಸಾದ್ ವಾದ ಮಂಡಿಸಿದ್ದರು.

– ಶಿವಮೊಗ್ಗ : ನವಜಾತ ಮಗು ಬಿಟ್ಟು ತಾಯಿ ನಾಪತ್ತೆ, ಮಗು ಸಾವು

ಶಿವಮೊಗ್ಗ : ಜನಿಸಿದ ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಪರಾರಿಯಾಗಿರುವುದು ಹಾಗೂ ಮಗು ಸಾವು ಕಂಡಿರುವ ದುರಂತದ ರಾ ಘಟನೆ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ರಸ್ತೆಯ ಹೊಳಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. ಹೊಳಲೂರಿನಿಂದ ಹೊಳೆಹೊಟ್ಟಿಗೆ ಹೋಗುವ ಮಾರ್ಗದಲ್ಲಿ ಇರುವಂತಹ ವೆಲ್ಡಿಂಗ್ ಶಾಪ್ ಎದುರು ಬಯಲಿನ ಜಾಗದಲ್ಲಿ ರಾತ್ರಿ ಮಗುವೊಂದಕ್ಕೆ ತಾಯಿ ಇಲ್ಲಿ ಜನ್ಮ ನೀಡಿದ್ದಾಳೆ. ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಹಾಗೂ ಆಕೆಯ ಜೊತೆ ಬಂದವರು ನಾಪತ್ತೆಯಾಗಿದ್ದು, ಮಗು ಸಾವು ಕಂಡಿದೆ. ಇದು ಗಂಡು ಮಗುವಾಗಿದ್ದು 9 ತಿಂಗಳು ಮುಗಿಯುವ ಮುನ್ನವೇ ಜನಿಸಿದೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಮಗುವಿನ ಅಂತ್ಯ ಸಂಸ್ಕಾರವನ್ನು ಮುಗಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.