Categories
ವಿಶೇಷ ಸುದ್ದಿ

ಶುರುವಾಯಿತು ಹೆದರಿಸುವ ಖತರ್ನಾಕ್ ದಂಧೆ!

ಶುರುವಾಯಿತು ಹೆದರಿಸುವ ಖತರ್ನಾಕ್ ದಂಧೆ!
* ಲಾಡ್ಜ್ ಗಳಿಗೆ ಎಂಟ್ರಿ ಆಗಿ 4 ಲಾಡ್ಜ್ ಗಳ ಲೆಡ್ಜರ್ ಕದ್ದ ಕಳ್ಳರು
* ಮೊಬೈಲ್ ನಂಬರ್ ಪಡೆದು ಬ್ಲಾಕ್ ಮೇಲ್
* ದಾವಣಗೆರೆ ಭಾಗದ ಖತರ್ನಾಕ್ ತಂಡ!

NAMMUR EXPRESS NEWS
ತೀರ್ಥಹಳ್ಳಿ/ಶೃಂಗೇರಿ/ಕೊಪ್ಪ: ಲಾಡ್ಜ್ ಹೋಗುವ ಮುನ್ನ ಹುಷಾರ್..!.
ಇತ್ತೀಚಿಗೆ ಗ್ಯಾಂಗ್ ಒಂದು ಲಾಡ್ಜ್ ಅಲ್ಲಿ ರಿಜಿಸ್ಟರ್ ಬುಕ್ ಕದ್ದು ಅದರಲ್ಲಿರುವ ನಂಬರ್ ಫೋನ್ ಮಾಡಿ ಬ್ಲಾಕ್ ಮೆಲ್ ಮಾಡಿ ಹಣ ಮಾಡುವುದನ್ನೇ ಕಸುಬು ಆಗಿಸಿಕೊಂಡಿದೆ. ಈ ಬಗ್ಗೆ ಈಗಾಗಲೇ ಮಲೆನಾಡು, ಮಧ್ಯ ಕರ್ನಾಟಕ ಸೇರಿ ಹಲವೆಡೆ ದೂರು ದಾಖಲಾಗಿದೆ.
ಇತ್ತೀಚಿಗೆ ತೀರ್ಥಹಳ್ಳಿ ಪಟ್ಟಣದಲ್ಲಿ ಜುಲೈ 9-10 ರಂದು ಖದೀಮರು 4 ಲಾಡ್ಜ್ ತೆರಳಿ ಲಾಡ್ಜ್ ಗಳಲ್ಲಿ ಇದುವರೆಗೂ ರೂಮ್ ಪಡೆದ ವರ ಮಾಹಿತಿಯನ್ನು ಬರೆದಿರುವ ಲೆಡ್ಜರ್ ಬುಕ್ ಖದೀಮರು ಕನ್ನ ಹಾಕಿದ್ದಾರೆ. ಈ ಹಿಂದೆ ಕೊಪ್ಪ, ಶೃಂಗೇರಿ, ಶಿವಮೊಗ್ಗ ಸೇರಿ ಅನೇಕ ಕಡೆ ಈ ದಂಧೆ ನಡೆದಿದ್ದು ಅನೇಕರು ಈ ಸಮಸ್ಯೆಗೆ ಒಳಗಾಗಿದ್ದಾರೆ.
ಲಾಡ್ಜ್ ಗಳಿಗೆ ಬರುವ ಜನರೇ ಇವರ ನೇರ ಟಾರ್ಗೆಟ್. ಅವರ ಹೆಸರು ಮೊಬೈಲ್ ನಂಬರ್ ಹಾಗೂ ಅಡ್ರೆಸ್ ನಮೂದಿಸಿರುವ ಬುಕ್ ನಿಂದ ಖದೀಮರು ಅಪರಿಚಿತ ವ್ಯಕ್ತಿಯ ಹಾಗೆ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿ ಹಣ ವಂಚಿಸುವ ಹಾಗೂ ಅವರಿಗೆ ಬ್ಲಾಕ್ ಮೇಲ್ ಮಾಡುವ ಸಲುವಾಗಿ ಈ ಕಾರ್ಯವನ್ನು ಎಸಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ದಾವಣಗೆರೆ ಭಾಗದ ಖತರ್ನಾಕ್ ತಂಡ!

ದಾವಣಗೆರೆ ಭಾಗದ ಬ್ಲಾಕ್ ಮೇಲ್ ಮಾಡುವ ದುಷ್ಕರ್ಮಿಗಳೆ ಈ ಕಾರ್ಯವನ್ನು ಮಾಡಿರುವ ಸಾಧ್ಯತೆ ಇದೆ. ಯಾವುದೇ ಲಾಡ್ಜ್ ಗಳು,ಹೋಂ ಸ್ಟೇ,ರೆಸಾರ್ಟ್, ಪ್ರವಾಸಿ ಮಂದಿರಗಳಲ್ಲಿ ಗ್ರಾಹಕರ ಮಾಹಿತಿಯ ಗೌಪ್ಯತೆ ಅತ್ಯವಶ್ಯಕ. ಮಾಲೀಕರುಗಳು ಹಾಗೂ ಸಿಬ್ಬಂದಿಗಳು ಇದರ ಬಗ್ಗೆ ಹೆಚ್ಚಿನ ನಿಗವಹಿಸಬೇಕು ವಹಿಸಬೇಕಾಗಿದೆ ಎಂಬ ಅಗ್ರಹ ವ್ಯಕ್ತವಾಗಿದೆ.
ಬ್ಲಾಕ್ ಮೇಲ್ ಮಾಡುವ ಸಲುವಾಗಿ ಯಾವುದೇ ಅಪರಿಚಿತ ಕರೆಗಳು ಬಂದರೆ ಹೆದರಬೇಡಿ. ತಕ್ಷಣ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ. ಈ ಬಗ್ಗೆ ಮಾಲೀಕರು ಗಮನ ವಹಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.