ಚಿಕ್ಕಮಗಳೂರು to ತಿರುಪತಿ ರೈಲಿಗೆ ಚಾಲನೆ
* ರೈಲಿಗೆ ಹಸಿರು ನಿಶಾನೆ ತೋರಿದ ಕೇಂದ್ರ ಸಚಿವ ವಿ.ಸೋಮಣ್ಣ
* ರೈಲಿನ ವೇಳಾಪಟ್ಟಿ ಹಾಗೂ ನಿಲ್ದಾಣಗಳ ಮಾಹಿತಿ ಇಲ್ಲಿದೆ
NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡಿನ ಜನರ ಬಹುದಿನದ ಬೇಡಿಕೆಯಾಗಿದ್ದ ಚಿಕ್ಕಮಗಳೂರು ಹಾಗೂ ತಿರುಪತಿ ನಡುವಿನ ರೈಲಿಗೆ ಇಂದು ಚಾಲನೆ ದೊರಕಿದೆ. ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರ ಪ್ರಯತ್ನದ ಫಲವಾಗಿ ಜಿಲ್ಲೆಗೆ ದೊರಕಿದ ಈ ನೂತನ ರೈಲ್ವೇ ಸಾಪ್ತಾಹಿಕ ಸೇವೆಯನ್ನು ಇಂದು ಕೇಂದ್ರ ಸಚಿವ ವಿ.ಸೋಮಣ್ಣ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮಲೆನಾಡಿನಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಹೊಂದಿದ ಈ ರೈಲು ಆನೇಕ ಸ್ಥಳಗಳಲ್ಲಿ ನಿಲುಗಡೆ ಇರುವುದರಿಂದ ಜನತೆಗೆ ತುಂಬಾ ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ರವಿ,ಉಪಸಭಾಪತಿ ಎಂ.ಕೆ ಪ್ರಾಣೇಶ್, ಮಾಜಿ ಶಾಸಸಕ ಸುರೇಶ್ ಸೇರಿದಂತೆ ಹಲವು ಪ್ರಮುಖರು,ಸಾರ್ವಜನಿಕರು ಉಪಸ್ಥಿತರಿದ್ದರು.
* ನೂತನ ರೈಲಿಗೆ ದತ್ತ ಪೀಠ ಎಕ್ಸ್ಪ್ರೆಸ್ ಎಂದು ಹೆಸರು?
ನೂತನ ರೈಲಿಗೆ ದತ್ತಪೀಠ ಎಕ್ಸ್ ಪ್ರೆಸ್ ಎಂದು ಹೆಸರಿಡಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು, ಈ ಬಗ್ಗೆ ಕೇಂದ್ರ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಆದರೆ ಈ ಹೆಸರು ಇನ್ನೂ ಅಂಗೀಕೃತವಾಗಿಲ್ಲ ಇಂದಿನ ಸಭೆಯಲ್ಲಿ ವಿ.ಸೋಮಣ್ಣ ಈ ಹೆಸರಿಡುವ ಬಗ್ಗೆ ಭರವಸೆ ಮೂಡಿಸಿದ್ದಾರೆ.
* ನೂತನ ರೈಲಿನ ವೇಳಾಪಟ್ಟಿ ಹಾಗೂ ನಿಲುಗಡೆಯ ಮಾಹಿತಿ
ಚಿಕ್ಕಮಗಳೂರಿನಿಂದ ತೆರಳುವ ರೈಲು ಸುಮಾರು 18 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ರೈಲು (17424) ಬೆಳಗ್ಗೆ ಸಂಚಾರ ಆರಂಭಿಸಲಿದೆ. ಸಂಜೆ 5.30ಕ್ಕೆ ಚಿಕ್ಕಮಗಳೂರಿನಿಂದ ಹೊರಡುವ ರೈಲು ಶನಿವಾರ ಬೆಳಗ್ಗೆ (7.40) ತಿರುಪತಿ ನಿಲ್ದಾಣ ತಲುಪಲಿದೆ. ಮರಳಿ ತಿರುಪತಿ -ಚಿಕ್ಕಮಗಳೂರು ಸಾಪ್ತಾಹಿಕ ರೈಲು (17423) ಗುರುವಾರ ರಾತ್ರಿ 09 ಗಂಟೆಗೆ ಹೊರಟು ಶುಕ್ರವಾರ ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರು ನಿಲ್ದಾಣಕ್ಕೆ ಬರಲಿದೆ.
ಈ ರೈಲು ಬೀರೂರು, ಕಡೂರು, ತಿಪಟೂರು, ಅರಸೀಕರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಕೆ.ಆರ್.ಪುರಂ, ವೈಟ್ಫಿಲ್ಡ್, ಬಂಗಾರಪೇಟೆ, ಚಿತ್ತೂರು, ಕಟ್ಟಾಡಿ, ಕುಪ್ಪಂ, ಚಿನ್ನಬಾಣಾವರ, ದೇವನೂರು, ಬಿಸಲೇಹಳ್ಳಿ ಸೇರಿದಂತೆ ಒಟ್ಟು ಹದಿನೆಂಟು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
