ಶೃಂಗೇರಿಯಲ್ಲಿ ವಜ್ರೋತ್ಸವ ಭಾರತೀ ಮಹೋತ್ಸವ
* ಜಗದ್ಗುರು ಶ್ರೀಶ್ರೀಭಾರತೀ ತೀರ್ಥ ಮಹಾಸ್ವಾಮಿಗಳ 75 ನೇ ವರ್ಧಂತಿ ಪ್ರಯುಕ್ತ ಅದ್ದೂರಿ ಕಾರ್ಯಕ್ರಮ
* ಶ್ರೀಮಠದಲ್ಲಿ ನಡೆದ ಅನೇಕ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ: ಆದಿಶಂಕರಾಚಾರ್ಯ ಪ್ರತಿಷ್ಠಾಪಿಸಿದ ದಕ್ಷಿಣಾನ್ಮಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀಶ್ರೀಚಂದ್ರಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳವರ 75 ನೇ ವರ್ಧಂತಿ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ.
ಕಾರ್ಯಕ್ರಮದ ನಿಮಿತ್ತ ಶ್ರೀಮಠದಲ್ಲಿ ಅನೇಕ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕರಮಗಳು ನಡೆಯುತ್ತಿದೆ.
ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ವಿವರ
ದಿನಾಂಕ 30:03:2025 ರಿಂದ 11:04:2025 ರ ವರೆಗೆ ಪಂಚಾಯತನಾ ದೇವತಾ ಆರಾಧನೆಗಳು ಶ್ರೀ ಭಾರತೀ ತೀರ್ಥ ನಗರ ನರಸಿಂಹವನದಲ್ಲಿ ನಡೆಯಲಿದೆ.
* ಶ್ರೀ ಮಹಾಗಣಪತಿ ಆರಾಧನ
ಲಕ್ಷ ಮೋದಕ ಗಣಪತಿ ಹೋಮ ಅಥರ್ವಶೀರ್ಷ ಪಾರಾಯಣ
* ಶ್ರೀ ಶಿವ ಆರಾಧನ
ಅತಿರುದ್ರ ಮಹಾಯಾಗ 75 ಲಕ್ಷ ಪಂಚಾಕ್ಷರೀ ಮಹಾಮಂತ್ರ ಜಪ
* ಶ್ರೀ ಅಂಬಿಕಾ ಆರಾಧನ
ಸಹಸ್ರ ಚಂಡೀ ಮಹಾಯಾಗ
ಅಯುತ ಶ್ರೀ ಸೂಕ್ತ ಜಪ
ಸರಸ್ವತಿ ಮಂತ್ರ ಅನುಷ್ಠಾನ ದೇವಿ ಮಹಾಮಂತ್ರ ಜಪ
ಅಕ್ಷರ ಲಕ್ಷ ಶ್ರೀ ವಿದ್ಯಾ ಜಪ ಅನುಷ್ಠಾನ
ಅಷ್ಟೋತ್ತರ ಶತ ಲಲಿತೋಪಾಖ್ಯಾನ ಪಾರಾಯಣ
* ಶ್ರೀ ಮಹಾವಿಷ್ಣು ಆರಾಧನ
ಶ್ರೀ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಶ್ರೀ ನರಸಿಂಹ, ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಹಯಗ್ರೀವ ಇತರೆ ಮೂಲ ಮಂತ್ರ ಜಪ ಮತ್ತು ಹೋಮ.
* ಶ್ರೀ ಸೂರ್ಯ ಆರಾಧನ
ಅರುಣ ಪ್ರಶ್ನೆ ದ್ವಾದಶ ಶತ ಪಾರಾಯಣ, ಸೂರ್ಯ ನಮಸ್ಕಾರ ಆದಿತ್ಯ ಹೃದಯ ಮತ್ತು ಸೂರ್ಯ ಕವಚ ದ್ವಾದತ ಸಹಸ್ರ ಪಾರಾಯಣ
* ವೇದ ಹವನ
ಋಗ್‌ವೇದ ಸಂಹಿತಾ ಹವನ
ಕೃಷ್ಣ ಯಜುರ್ವೇದ ಹವನ
ಶುಕ್ಲ ಯಜುರ್ವೇದ ಹವನ
ಸಾಮವೇದ ಸಂಹಿತಾ ಹವನ
ಸಂಪೂರ್ಣ ಅಥರ್ವಣ ವೇದ ಪಾರಾಯಣ
ಶ್ರೀ ಸುಂದರಕಾಂಡ ಪಾರಾಯಣ
ಅಕ್ಷರ ಲಕ್ಷ ಗಾಯತ್ರಿ ಜಪ
ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು,
* 30.03.2025 ಭಾನುವಾರ
ಹಾಡುಗಾರಿಕೆ
ವಿದ್ವಾನ್ ಶ್ರೀ ರಾಮನಾಥ ವೆಂಕಟ ಭಾಗವತ್ ಮತ್ತು ವೃಂದ, ಚೆನ್ನೈ
* 31.03.2025 ಸೋಮವಾರ
ಶಾಂಕರ ಸ್ತೋತ್ರ ಗಾಯನ – ಭಕ್ತಿ ಗಾನ ಸುಧಾ
ವಿದ್ವಾನ್ ಶ್ರೀ ಎಂ.ಆರ್. ಶ್ರೀಹರ್ಷ ಮತ್ತು ವೃಂದ, ಮೈಸೂರು
* 01.04.2025 ಮಂಗಳವಾರ
ವೀಣಾ ವಾದನ
ವಿದ್ವಾನ್ ಶ್ರೀ ರಾಜೇಶ್ ವೈದ್ಯ ಮತ್ತು ವೃಂದ ಚೆನ್ನೈ
* 02.04.2025 ಬುಧವಾರ
ಹಾಡುಗಾರಿಕೆ-ನಾಮ ವೈಭವಮ್
ವಿದುಷಿ ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದ್ ತೇಜಸ್ವಿಸೂರ್ಯ ಮತ್ತು ವೃಂದ, ಬೆಂಗಳೂರು
* 03.04.2025 ಗುರುವಾರ
ಜಗದ್ಗುರು ಶ್ರೀ ಶ್ರೀ ಮಹಾಸನ್ನಿಧಾನಂಗಳವರ 75ನೇ ವರ್ಧಂತಿ ಮಹೋತ್ಸವ ಗುರುವಂದನಾ ಕಾರ್ಯಕ್ರಮ ನರಸಿಂಹವನದ ಗುರುನಿವಾಸದಲ್ಲಿ (ಸಂಜೆ)
* 04.04.2025 ಶುಕ್ರವಾರ
ಯಕ್ಷಗಾನ ಬಯಲಾಟ ಮಾರುತೀ ಪ್ರತಾಪ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಪೆರ್ಡೂರು
ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ದಿನ ಶ್ರೀಮಠದ ಆವರಣದಲ್ಲಿ ಸಮಯ ಸಂಜೆ 6.30 ರಿಂದ 8.30ರವರೆಗೆ ನಡೆಯುತ್ತಿದೆ.
ಈ ಮೂಲಕ ಶೃಂಗೇರಿ ಮತ್ತೊಂದು ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ.
