Categories
ಶೃಂಗೇರಿ

ಬೇರು – ಭೂಮಿ ತಂಡದಿಂದ ತುಂಗಾನದಿ ತೀರದ ಸ್ನಾನಘಟ್ಟ ಸ್ವಚ್ಛತೆ

ಬೇರು – ಭೂಮಿ ತಂಡದಿಂದ ತುಂಗಾನದಿ ತೀರದ ಸ್ನಾನಘಟ್ಟ ಸ್ವಚ್ಛತೆ

* ಬೆಂಗಳೂರಿನ ಮೂವತ್ತು ಜನರ ತಂಡದಿಂದ ಸ್ವಚ್ಛತಾ ಕಾರ್ಯ
* ಕೈಜೋಡಿಸಿದ ತುಂಗಾನದಿ ಸ್ವಚ್ಛತಾ ಜನಾಂದೋಲನ ಸಮಿತಿ

NAMMUR EXPRESS NEWS
ಶೃಂಗೇರಿ:ಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣ ಶೃಂಗೇರಿ ಸದಾ ಪ್ರವಾಸಿಗರಿಂದ ತುಂಬಿರುತ್ತದೆ.ದಿನವೂ ಸಾವಿರಾರು ಭಕ್ತರು ಭೇಟಿ ನೀಡುವ ಇಲ್ಲಿನ ತುಂಗಾ ನದಿ ತೀರದ ಸ್ನಾನಘಟ್ಟದ ಬಳಿ ಪಟ್ಟಣ ಪಂಚಾಯ್ತಿಯ ದೈನಂದಿನ ಸ್ವಚ್ಛತೆ ಹಾಗೂ ಪ್ರವಾಸಿಗರಿಗೆ ನಿರಂತರ ಮಾಹಿತಿಯ ನಂತರವು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸಗಳನ್ನು ರಾಶಿ ರಾಶಿ ಎಸೆದಿದ್ದರು.
ಇದನ್ನು ಮನಗಂಡ ಸ್ಥಳೀಯ ತುಂಗಾ ನದಿ ಸ್ವಚ್ಛತಾ ಜನಾಂದೋಲನ ಸಮಿತಿ ಬೆಂಗಳೂರಿನ ಬೇರು – ಭೂಮಿ ತಂಡ ನಡೆಸುತ್ತಿರುವ ನದಿ ಮೂಲಗಳಲ್ಲಿ ಪ್ಲಾಸ್ಟಿಕ್ ಸ್ವಚ್ಛತೆಯ ತನ್ನ 6 ನೇ ಅಭಿಯಾದಲ್ಲಿ ಸುಮಾರು 30 ಜನರ ತಂಡದಿಂದ ಶೃಂಗೇರಿಯ ತುಂಗಾ ನದಿ ತೀರದ ಗಾಂಧಿಮೈದಾನದ ಸ್ನಾನಘಟ್ಟದ ಬಳಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶ್ರಮಾದಾನ ಮಾಡುವ ಮೂಲಕ ನದಿಯ ಸ್ವಚ್ಛತೆಗೆ ಸಹಕರಿಸುವಂತೆ ಪ್ರವಾಸಿಗರು,ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
” ನದಿಗಳಿಂದಲೇ ಸಕಲ ಜೀವಿಗಳಿಗೆ ಜಲ ದೊರೆಯುವುದರಿಂದ ನದಿಗಳ ಉಳಿವು ತುಂಬಾ ಮುಖ್ಯ ಎಂದು ಬೇರು – ಭೂಮಿ ಬೆಂಗಳೂರು ತಂಡದ ಮುಖ್ಯಸ್ಥರಾದ ಯಶಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಂದೋಲನದಲ್ಲಿ ಭಾಗವಹಿಸಿದ ತುಂಗಾನದಿ ಸ್ವಚ್ಛತಾ ಜನಾಂದೋಲನ ಸಮಿತಿಯ ಅಧ್ಯಕ್ಷರಾದ ರಜಿತ್ ಗೌಡ ಬೇಸೂರು ” ಗಂಗಾ ಸ್ನಾನ ತುಂಗಾಪಾನ ಎನ್ನುವುದು ಈಗ ತುಂಗಾಪಾನ ಸ್ವಲ್ಪ ಜೋಪಾನ ಎನ್ನುವಂತಾಗಿದ್ದು,ನದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಒಟ್ಟಾರೆ ಒಂದು ದಿನದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ಥಕ ಭಾವವನ್ನು ತಂಡ ಸದಸ್ಯರು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.