Categories
ರಾಜ್ಯ

ಹೆಣ್ಣಿನ ಧ್ವನಿಯಲ್ಲಿ ಮಾತಾಡಿ 41 ಲಕ್ಷ ಕಿತ್ತಿದ್ದ ಯುವಕ!

ಹೆಣ್ಣಿನ ಧ್ವನಿಯಲ್ಲಿ ಮಾತಾಡಿ 41 ಲಕ್ಷ ಕಿತ್ತಿದ್ದ ಯುವಕ!
– ಪುರುಷರೇ ಟಾರ್ಗೆಟ್: ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಕೆ
– ರಾಮನಗರ ಪೊಲೀಸರ ಬಲೆಗೆ ಬಿದ್ದ ಕುಣಿಗಲ್ ಯುವಕ: ಏನಿದು ಸ್ಟೋರಿ…?!

NAMMUR EXPRESS NEWS
ರಾಮನಗರ: ಹುಡುಗಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ 41 ಲಕ್ಷ ವಂಚಿಸಿದ್ದ ಯುವಕನನ್ನು ರಾಮನಗರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ರವಿಕುಮಾರ್(24) ಬಂಧಿತ ಆರೋಪಿ. ಈತ ಮೂಲತಃ ಕುಣಿಗಲ್ ತಾಲೂಕಿನ ಕಗ್ಗೇರಿಯವನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿ ಖಾಸಗಿ ಡಾಟಾ ಬೇಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ತಂತ್ರಜ್ಞಾನದಲ್ಲೂ ನಿಪುಣನಾಗಿದ್ದು, ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಕರಗತ ಮಾಡಿಕೊಂಡಿದ್ದ. ತನ್ನ ಈ ಎರಡು ಕೌಶಲ್ಯಗಳನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಿಕೊಂಡು, ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ.

ಹಾಗೇ ಈತನ ಜಾಲಕ್ಕೆ ಬಿದ್ದ ರವಿಕುಮಾರ್ ಎಂಬುವವರಿಂದ ತಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ಬೇಡಿಕೆ ಇಟ್ಟು ಆಗಾಗ ಹಣ ಪಡೆಯುತ್ತಿದ್ದ.ಕಡೆಗೊಮ್ಮೆ ರಾಜೇಶ್ ನಿರಾಕರಿಸಿದಾಗ ಅವರ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸಪ್‌ಗೆ ಕಳುಹಿಸಿ, ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ಇದೇ ರೀತಿ ಆರೋಪಿ ಆರು ತಿಂಗಳಲ್ಲೇ 41 ಲಕ್ಷ ರು. ಸುಲಿದಿದ್ದ. ಕಡೆಗೆ ರವಿಕುಮಾರ್ ದೂರಿನ ಮೇರೆಗೆ ಆರೋಪಿಯನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.