Categories
ರಾಜ್ಯ

ಜಿಪಂ, ತಾಪಂ, ಗ್ರಾಪಂ ಚುನಾವಣೆ ಸಿದ್ಧ?

ಜಿಪಂ, ತಾಪಂ, ಗ್ರಾಪಂ ಚುನಾವಣೆ ಸಿದ್ಧ?
* ಸ್ಥಳೀಯ ಚುನಾವಣೆಗಳ ಮೀಸಲು ಪಟ್ಟಿ, ಕ್ಷೇತ್ರ ವಿಂಗಡಣೆ ಎಲ್ಲವನ್ನೂ ಸರ್ಕಾರ ನೀಡಬೇಕಿದೆ – ಸಂಗ್ರೇಶಿ
* ಅಂದಾಜು ದಿನಾಂಕ ಯಾವಾಗ ಇಲ್ಲಿದೆ ಡೀಟೇಲ್ಸ್ ?
* ಬ್ಯಾಲೆಟ್ ಪೇಪರ್ ಬಳಸಿದರೆ ಖರ್ಚು ಹೆಚ್ಚು !

NAMMMUR EXPRESS NEWS
ಬೆಂಗಳೂರು: ಸ್ಥಳೀಯ ಚುನಾವಣೆಗಳ ಮೀಸಲು ಪಟ್ಟಿ , ಕ್ಷೇತ್ರ ವಿಂಗಡಣೆ ಎಲ್ಲವನ್ನೂ ಸರ್ಕಾರ ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿಒಳಗೆ ನೀಡಿದರೆ ಸ್ಥಳೀಯ ಗ್ರಾ ಪಂ, ಜಿ ಪಂ, ತಾ ಪಂ, ನಗರಸಭೆ ಚುನಾವಣೆಗಳನ್ನು ನಡೆಸಲು ಚುನಾವಣೆ ಆಯೋಗ ಸಿದ್ಧವಿರುವುದಾಗಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್‌.ಸಂಗ್ರೇಶಿ ಹೇಳಿದ್ದಾರೆ.
ಸರ್ಕಾರ ಜನವರಿ ಅಥವಾ ಫೆಬ್ರವರಿ ಒಳಗೆ ಮೀಸಲು ಪಟ್ಟಿ ಮತ್ತು ಕ್ಷೇತ್ರ ವಿಂಗಡಣೆಯನ್ನು ನೀಡಿದರೆ, ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಯೋಗ ಸಿದ್ಧವಿದೆ. ಚುನಾವಣಾ ಆಯೋಗವು ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿದ್ದು, ಕ್ಷೇತ್ರ ಪುನರ್ ವಿಂಗಡನೆ ಕಾರ್ಯ ಬಾಕಿ ಇರುವುದರಿಂದ ಚುನಾವಣೆ ಮುಂದೂಡಿಕೆಯಾಗಿದೆ. ಜನವರಿ – ಫೆಬ್ರವರಿ ಒಳಗೆ ಎಲ್ಲ ಕಾರ್ಯ ಮುಗಿಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವಿಎಂ ಯಂತ್ರ ಮತ್ತು ಬ್ಯಾಲೆಟ್‌ ಪೇಪರ್‌ಗಳನ್ನು ಬಳಸಿಕೊಂಡು ಚುನಾವಣೆ ನಡೆಸಲು ಅವಕಾಶವಿದ್ದು, ಇವೆರಡರಲ್ಲಿ ಯಾವುದರ ಮೂಲಕ ಚುನಾವಣೆ ನಡೆಸಬೇಕೆಂಬುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ತಿಳಿಸಿದ್ದಾರೆ.

* ಬ್ಯಾಲೆಟ್ ಪೇಪರ್ ಬಳಸಿದರೆ ಖರ್ಚು ಜಾಸ್ತಿ
ನಮ್ಮ ದೇಶದಲ್ಲಿ ಪ್ರಸ್ತುತ ಚುನಾವಣೆ ನಡೆಸುವುದಕ್ಕೆ ಕೇವಲ ಎರಡು ಆಯ್ಕೆಗಳು ಮಾತ್ರ ಇರುವುದರಿಂದ, ಇವುಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆ ಮಾಡಿದರೆ ಖರ್ಚು ಹೆಚ್ಚಾಗುತ್ತದೆ. ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ,ಆದರೆ ಇದು ಮುಖ್ಯವಾಗುವುದಿಲ್ಲ. ಸರ್ಕಾರ ಯಾವ ವಿಧಾನದ ಮೂಲಕ ಚುನಾವಣೆ ನಡೆಸಲು ತೀರ್ಮಾನಿಸುತ್ತದೆಯೋ ಆ ವಿಧಾನವನ್ನು ಬಳಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ ಎಸ್ ಸಂಗ್ರೇಶಿ ತಿಳಿಸಿದ್ದಾರೆ.

* ಸರ್ಕಾರಕ್ಕೆ ಪತ್ರ ವ್ಯವಹಾರ,ಜನವರಿ-ಫೆಬ್ರವರಿ ಒಳಗೆ ಮುಗಿಯಬೇಕಿದೆ ಎಲೆಕ್ಷನ್
ಕ್ಷೇತ್ರ ಪುನರ್‌ ವಿಂಗಡಣಾ ಕಾರ್ಯ ಇನ್ನು ಸ್ವಲ್ಪ ಬಾಕಿಯಿದೆ. ಮೀಸಲು ಪಟ್ಟಿಯನ್ನು ತಯಾರಿಸಬೇಕಾಗಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರವನ್ನೂ ಸಹ ಚುನಾವಣಾ ಆಯೋಗದಿಂದ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸರ್ಕಾರ ಮೂರು ತಿಂಗಳ ಕಾಲಾವಧಿಯನ್ನು ತೆಗೆದುಕೊಂಡಿದೆ. ಕೆಲವು ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿವೆ. ನಗರಸಭೆ, ಪುರಸಭೆಗಳ ವ್ಯಾಪ್ತಿಗೆ ಒಂದಷ್ಟು ಹಳ್ಳಿಗಳು ಕೂಡಿಕೊಂಡಿದ್ದರಿಂದ ಮತ್ತೆ ಕ್ಷೇತ್ರ ಪುನರ್‌ ವಿಂಗಡಣಾ ಕಾರ್ಯವನ್ನು ಮಾಡಬೇಕಾಗಿದೆ. ರಾಜ್ಯದ ಸುಮಾರು 11 – 12 ಜಿಲ್ಲೆಗಳಲ್ಲಿ ಈ ಪ್ರಯೋಗವಾಗಬೇಕಾಗಿದೆ ಎಂದು ತಿಳಿಸಿದರು.
ಜಿಪಂ ಕ್ಷೇತ್ರಗಳು ಮತ್ತು ತಾಪಂ ಕ್ಷೇತ್ರಗಳು ಹೆಚ್ಚಾಗಿರುವುದರಿಂದ ಈಗಾಗಲೇ 2023 ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿರುವುದರಿಂದ ಈ ಎಲ್ಲ ಕ್ಷೇತ್ರಗಳಿಗೆ ಮೀಸಲು ಪಟ್ಟಿಯನ್ನು ಸರ್ಕಾರದ ವತಿಯಿಂದ ನೀಡಬೇಕಾಗಿದೆ. ಹೊಸದಾಗಿ ಸೃಷ್ಟಿಯಾಗಿರುವ ಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಹಳೆಯ ಮೀಸಲನ್ನು ಇಟ್ಟುಕೊಂಡು ಚುನಾವಣೆ ನಡೆಸಲಾಗುವುದಿಲ್ಲ. ಉಳಿದಂತೆ 192 ನಗರಸಭೆ ಮತ್ತು ಪುರಸಭೆಗಳಿಗೆ ಹೊಸ ಮೀಸಲು ಪಟ್ಟಿ ನೀಡದೇ ಇದ್ದಲ್ಲಿ ಹಳೆಯ ಮೀಸಲಿನಂತೆಯೇ ಚುನಾವಣೆ ನಡೆಸಲಾಗುತ್ತದೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗದ ವತಿಯಿಂದಲೂ ಸರ್ಕಾರದ ಮೇಲೆ ಒತ್ತಡವನ್ನು ಹಾಕಲಾಗುತ್ತಿದೆ. ಬೆಂಗಳೂರಿಗೆ ಮಾತ್ರ ಈಗ ಚುನಾವಣೆ ನಡೆಸಲಾಗುತ್ತಿದೆ. ನವೆಂಬರ್‌ ಒಂದನೇ ತಾರೀಖಿಗೆ ಅವರು ಕ್ಷೇತ್ರ ಪುನರ್‌ ವಿಂಗಡಣೆ ವರದಿಯನ್ನು ಸಲ್ಲಿಸಬೇಕು. ನವೆಂಬರ್‌ 30ಕ್ಕೆ ಮೀಸಲು ಪಟ್ಟಿಯನ್ನು ನೀಡಬೇಕು. ಆ ಬಳಿಕ ನಮಗೆ ಮೂರ್ನಾಲ್ಕು ತಿಂಗಳ ಕಾಲಾವಧಿ ಬೇಕೆಂದು ತಿಳಿಸಿದ್ದೇವೆ. ಸುಪ್ರೀಂ ಕೋರ್ಟ್‌ ಇದಕ್ಕೆ ಅನುಮತಿ ನೀಡಿದೆ. ಮುಂದಿನ ವರ್ಷದ ಜನವರಿ ಮತ್ತು ಫೆಬ್ರವರಿ ಒಳಗೆ ಇದೆಲ್ಲ ಕಾರ್ಯವನ್ನು ಮುಗಿಸಬೇಕಿದ್ದು, ಅಷ್ಟರೊಳಗೆ ನಾವು ನಮ್ಮ ಕೆಲಸವನ್ನು ಮುಗಿಸಬೇಕಿದೆ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.