Categories
ರಾಜ್ಯ

ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದವ ಸಾವು!

ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದವ ಸಾವು!
– ಟ್ರ್ಯಾಕ್ಟರ್ ಪಲ್ಟಿಯಾಗಿ ಹೊಲದಲ್ಲೇ ರೈತ ಮರಣ
– ಮಂಗಳೂರಲ್ಲಿ ಅಪಘಾತ: ಜೀವಾಪಾಯದಿಂದ ಪಾರು
– ಕಾಡು ಹಂದಿಯನ್ನು ಬೇಟೆ: 7 ಮಂದಿ ಅರೆಸ್ಟ್!

NAMMUR EXPRESS NEWS
ಚಾಮರಾಜನಗರ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ನೀರೆಂದು ಆ್ಯಸಿಡ್ ಕುಡಿದು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸಿದ್ದರಾಜು (40)ಎಂಬಾತ ಜುಲೈ 23ರಂದು ರಾತ್ರಿ ಕುಡಿದ ಮತ್ತಿನಲ್ಲಿ ನೀರು ಎಂದು ಭಾವಿಸಿ ಟಾಯ್ಲೆಟ್ ಕ್ಲೀನಿಂಗ್‌ಗೆ ಬಳಸುವ ಆ್ಯಸಿಡ್ ಕುಡಿದಿದ್ದಾನೆ. ಬಳಿಕ ಬಿದ್ದು ಒದ್ದಾಡುತ್ತಿದ್ದ ಸಿದ್ದರಾಜುನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಜುಲೈ 24 ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಸಾವು!

ಮಾವು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಮಾವು ಮಾರುಕಟ್ಟೆಯಲ್ಲಿ ನಡೆದಿದೆ. ಇಂದಿರಾನಗರ ನಿವಾಸಿ ಶಫಿ(35) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರಿಗೆ ಗಾಯಗಳಾಗಿದ್ದು ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಲ್ಲಿ ಅಪಘಾತ: ಜೀವಾಪಾಯದಿಂದ ಪಾರು

ಮಂಗಳೂರು ಮುಡಿಪು ಜಂಕ್ಷನ್‌ನಲ್ಲಿ ಬಸ್ಸು ಮತು ಕಾರು ನಡುವೆ ಭೀಕರ ಅಪಘಾತ:
ಉಳ್ಳಾಲ: ಸೋಮವಾರ ರಾತ್ರಿ ವೇಳೆ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ ನಡೆದಿದ್ದು ಕಾರಿನಲ್ಲಿದ್ದ ಚಾಲಕನು ಪವಾಡವೆಂಬಂತೆ ಯಾವುದೇ ಪ್ರಾಣಪಾಯವಿಲ್ಲದೇ ಪಾರಾದ ಘಟನೆ ಸಂಭವಿಸಿದೆ. ಬಿಸಿರೋಡಿನತ್ತ ಬರುತ್ತಿದ್ದ ಟ್ರಾವೆಲ್ಸ್ ಬಸ್ಸು ಮುಡಿಪು ಜಂಕ್ಷನ್‌ನಲ್ಲಿ ತಿರುಗುವ ಸಂದರ್ಭ ಶಾಲೆ ಕಡೆಯಿಂದ ಬರುತ್ತಿದ್ದ ಝನ್ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಲ್ಲಿ ಚಾಲಕ ಕೂರುವ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಪವಾಡವೆಂಬಂತೆ ಚಾಲಕನಿಗೆ ತಿರುಚಿದ ಗಾಯ ಕೂಡವಾಗದೆ ಪಾರಾಗಿದ್ದಾರೆ.

ಕಾಡು ಹಂದಿಯನ್ನು ಬೇಟೆ: 7 ಮಂದಿ ಅರೆಸ್ಟ್!

ಕಾಡು ಹಂದಿಯನ್ನು ಬೇಟೆಯಾಡಿ ಅಕ್ರಮವಾಗಿ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ಪಟ್ಟಣದ ಶಿವಾನಂದ ಸ್ಮಾರಕದ ಬಳಿ ನಡೆದಿದೆ. ಅಕ್ಷಯ್, ಸುರೇಶ್‌, ಸುಧೀರ್ ಕುಮಾರ್, ಮಲ್ಲೇಶ್, ನಂದಕುಮಾರ್, ಗುರುಮೂರ್ತಿ, ವಿದ್ವಾನ್‌ ಬಂಧಿತ ಆರೋಪಿಗಳು, ಇವರು ಕೊತ್ತಲವಾಡಿ ಗ್ರಾಮದ ಎಲ್ಲೆ ಯಾನಗಹಳ್ಳಿ ರಸ್ತೆಯ ಜಮೀನಿನಲ್ಲಿ ಅಕ್ರಮವಾಗಿ ನಾಡ ಬ೦ದೂಕುಗಳಿಂದ ಗುಂಡು ಹಾರಿಸಿ ಕಾಡುಹಂದಿಯನ್ನು ಬೇಟೆಯಾಡಿ ಕೊಂಡು ಮಾಂಸವನ್ನು ಕತ್ತರಿಸಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಇನ್ಸ್ ಪೆಕ್ಟರ್ ಮಂಜುನಾಥ್ ನಾಯಕ ನೀಡಿದ ಮೇರೆಗೆ ಗುಂಡ್ಲು ಪೇಟೆ ಶಿವಾನಂದ ಸ್ಮಾರಕದ ಬಳಿ ಗುಂಡ್ಲು ಪೇಟೆ ಸಬ್ ಇನ್ಸ್ ಪೆಕ್ಟರ್ ಕಿರಣ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಾಡು ಹಂದಿ ಮಾಂಸ, ಮೂರು ನಾಡ ಬಂದೂಕು, ಎರಡು ಕಬ್ಬಿಣದ ಮಚ್ಚುಗಳ ಸಮೇತ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಟ್ರ್ಯಾಕ್ಟರ್ ಮಗುಚಿ ರೈತ ಸಾವು!

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿ ಪಾಂಡುರಂಗ ಲಾಡಗಾವ್ಕಾರ್ (68) ಎಂದು ತಿಳಿದುಬಂದಿದೆ. ರೈತ ಪಾಂಡುರಂಗ ಭತ್ತದ ನಾಟಿ ಮಾಡಲು ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆಗೆ ಮುಂದಾಗಿದ್ದರು. ಈ ವೇಳೆ ಏಕಾಏಕಿ ಟ್ರ್ಯಾಕ್ಟರ್‌ ಮಗುಚಿಬಿದ್ದಿದ್ದು, ರೈತ ಪಾಂಡುರಂಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.