Categories
ರಾಜ್ಯ

ಹೊಸ ಬಿಪಿಎಲ್ ಕಾರ್ಡ್ ಸಧ್ಯಕ್ಕಿಲ್ಲ!?

ಹೊಸ ಬಿಪಿಎಲ್ ಕಾರ್ಡ್ ಸಧ್ಯಕ್ಕಿಲ್ಲ!?
– ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ದಾರರು : ಕೆ.ಹೆಚ್‌.ಮುನಿಯಪ್ಪ
– ಆರೋಗ್ಯ ಉದ್ದೇಶಕ್ಕಾಗಿ ಅಗತ್ಯವಾದ ಬಿಪಿಎಲ್ ಕಾರ್ಡ್‌ 24 ಗಂಟೆಯಲ್ಲಿ ಸಿಗುವಂತೆ ಪ್ರತ್ಯೇಕ ಪೋರ್ಟಲ್

NAMMUR EXPRESS NEWS
ವಿಧಾನಸಭೆ: ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳಿದ್ದು, ಇವನ್ನು ರದ್ದು ಮಾಡದೇ ಹೊಸ ಕಾರ್ಡುಗಳನ್ನು ಕೊಡುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ತಿಳಿಸಿದರು.

ಆರೋಗ್ಯ ಉದ್ದೇಶಕ್ಕಾಗಿ ಅಗತ್ಯವಾದ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ವಿತರಿಸಲಾಗುತ್ತಿದ್ದು, ಇವು ಅರ್ಜಿ ಸಲ್ಲಿಸಿದ 24 ಗಂಟೆಯಲ್ಲಿ ಸಿಗುವಂತೆ ಪ್ರತ್ಯೇಕ ಪೋರ್ಟಲ್ ಮಾಡಿದ್ದೇವೆ ಎಂದು ಹೇಳಿದರು. ಅನರ್ಹರು ತಮ್ಮ ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿಸಿ, ಎಪಿಎಲ್‌ಗೆ ಪರಿವರ್ತನೆ ಹೊಂದಲು ಅವಕಾಶವನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರ ಇದಕ್ಕಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಿದ ನಂತರ, ಜನತೆ ಸಹಕರಿಸಬೇಕು. ವಿರೋಧ ಪಕ್ಷದ ನಾಯಕರೂ ಕೂಡ ಜನತೆಗೆ ಈ ಸಂಬಂಧ ಮನವೊಲಿಸಿ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು. ಅನರ್ಹ ಕಾರ್ಡ್‌ಗಳು ರದ್ದಾಗದೇ ಹೊಸದನ್ನು ಕೊಡಲಾಗದು. ಅನರ್ಹರ ಬಿಪಿಎಲ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ ಪ್ರಕ್ರಿಯೆ ಒಂದು ತಿಂಗಳಲ್ಲಿ ಮುಗಿಯಬೇಕು ಎಂಬುದು ನಮ್ಮ ಉದ್ದೇಶ. ನಂತರ ಹೊಸ ಬಿಪಿಎಲ್‌ ಗಳಿಗೆ ಅರ್ಜಿ ಕರೆಯಲಾಗುತ್ತದೆ’ ಎಂದು ವಿವರಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.