ಮಂದಾರ್ತಿಯಲ್ಲಿ ಏಪ್ರಿಲ್ 12ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ!
– ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಕಾಠ್ಯಕ್ರಮಗಳು!
– ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ: ಸರ್ವರಿಗೂ ಸ್ವಾಗತ!
NAMMUR EXPRESS NEWS
ಉಡುಪಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ 12 ಏಪ್ರಿಲ್ 2025ನೇ ಶನಿವಾರದಂದು ಅಷ್ಟಪವಿತ್ರ ನಾಗಮಂಡಲೋತ್ಸವ ಅದ್ದೂರಿಯಾಗಿ ಜರುಗಲಿದೆ.
ಮದ್ಯಾಹ್ನ 12.00ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ರಾತ್ರಿ 11.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ನಂತರ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ.
ಏ. 12ನೇ ಶನಿವಾರ ಸಂಜೆ ಗಂಟೆ 6.00ರಿಂದ ಸಾಂಸ್ಕೃತಿಕ ಕಾಠ್ಯಕ್ರಮಗಳು ವೈಭವದಿಂದ ಕಣ್ಮನ ಸೆಳೆಯಲಿದೆ.
ವಿಶ್ರಾಂತ ಪ್ರಾಂಶುಪಾಲರು, ಕಟೀಲು ಕಾಲೇಜು ಪ್ರೋ ಎಮ್. ಬಾಲಕೃಷ್ಣ ಶೆಟ್ಟಿ, ಅವರಿಂದ ಧಾರ್ಮಿಕ ಉಪನ್ಯಾಸ, ಶ್ರೀ ಆದಿ ಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಿ ಪುನರ್ ಪ್ರತಿಷ್ಠೆಯೊಂದಿಗೆ ಲೋಕಾರ್ಪಣೆಗೊಳಿಸಿದ ಶ್ರೀ ಕೃಷ್ಣಮೂರ್ತಿ ಮಂಜರು, ಮಾರಣಕಟ್ಟೆ ಇವರಿಗೆ
ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇವರನ್ನು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ ಇವರು ಸನ್ಮಾನಿಸಿ ಆಶೀರ್ವದಿಸಲಿದ್ದಾರೆ.
ಈ ದೇವತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನು ಮನ ಧನ ಸಹಾಯವನ್ನಿತ್ತು ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ
ಹೆಗ್ಗುಂಜೆ ನಾಲ್ಕು ಮನೆಯವರು ಹಾಗೂ ಭಕ್ತಾಭಿಮಾನಿಗಳು, ನಾಗಮಂಡಲ ಸಮಿತಿಯ ಸರ್ವ ಸದಸ್ಯರು, ದೇವಳದ ತಂತ್ರಿಗಳು, ಅರ್ಚಕವೃಂದ ಮತ್ತು ಸಿಬ್ಬಂದಿವರ್ಗ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿ ಈ ಮೂಲಕ ವಿನಂತಿಸಿಕೊಂಡಿದ್ದಾರೆ.
ಧನ ಸಹಾಯ ನೀಡುವವರು ಮಂದಾರ್ತಿ ಬ್ಯಾಂಕ್ ಬರೋಡಾದ ಉಳಿತಾಯ ಖಾತೆಗೆ ಜಮಾ ಮಾಡಬಹುದು.
ಖಾತೆ ಹೆಸರು: ASHTAPAVITHRA NAGAMANADALA S D P TEMPLE MANDARTHI, ಖಾತೆ ಸಂಖ್ಯೆ 81940100019253,
IFSC: BARBOVJMAMU (Fith digit is zero)
