Categories
ರಾಜ್ಯ

ರಾಯಚೂರು : ಕಾರು-ಬೈಕ್ ಡಿಕ್ಕಿಯಿಂದ ಇಬ್ಬರ ಸಾವು..!!

ಟಾಪ್ 3 ನ್ಯೂಸ್ ಕರ್ನಾಟಕ

ರಾಯಚೂರು : ಕಾರು-ಬೈಕ್ ಡಿಕ್ಕಿಯಿಂದ ಇಬ್ಬರ ಸಾವು..!!
– ಬೆಂಗಳೂರು : ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಓರ್ವ ಸಾವು..!
– ಬೆಂಗಳೂರು: ಮನೆಯ ಟೆರೇಸ್ ಮೇಲಿಂದ ಬಿದ್ದು ಖಾಸಗಿ ಕಂಪನಿಯ ನೌಕರ ಸಾವು..!!

NAMMUR EXPRESS NEWS
ರಾಯಚೂರು: ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಯರಗೇರಾ ಸಮೀಪದ ವಿಶ್ವವಿದ್ಯಾಲಯದ ಬಳಿ ಭಾನುವಾರ ನಡೆದಿದೆ. ಉರುಕುಂದ (42), ಲಕ್ಷ್ಮಣ (45) ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಬೈಕ್ ಸವಾರರು ಯರಗೇರಾ ಕಡೆ ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಉರುಕುಂದ ಸ್ಥಳದಲ್ಲಿ ಮೃತಪಟ್ಟರೆ, ಲಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡರೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಬೆಂಗಳೂರು : ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಓರ್ವ ಸಾವು..!

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಪ್ರೈಓವರ್ ಬಳಿ ನಡೆದಿದೆ. ಮೊಹಮ್ಮದ್ ಜಮಿರ್ (40) ಮೃತ ದುರ್ದೈವಿ. ಜಮ್ಮಿರ್ ಪತ್ನಿ ಆಯಿಷಾ, ಮಕ್ಕಳಾದ ಆಲೀಜಾ, ಆಫಿಯಾಗೆ ಗಾಯವಾಗಿದೆ. ಆಯಿಷಾ ಅವರ ಕಾಲು ಮತ್ತು ಬಲಗೈಗೆ ಗಾಯವಾಗಿದೆ. ಒಂದೂವರೆ ವರ್ಷದ ಮಗು ಆಫಿಯಾ ತಲೆ ಮೂಳೆ ಮರಿದಿದೆ. ನಾಲ್ಕು ವರ್ಷದ ಬಾಲಕಿ ಆಲೀಜಾ ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಳುಗಳಿಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಣ್ಣೂರು ಡಿಪೋ 10ಕ್ಕೆ ಸೇರಿದ ಬಿಎಂಟಿಸಿ ಎಲೆಕ್ಟಿಕ್ ಬಸ್ ಡಿಕ್ಕಿಯಾಗಿದೆ.

– ಬೆಂಗಳೂರು: ಮನೆಯ ಟೆರೇಸ್ ಮೇಲಿಂದ ಬಿದ್ದು ಖಾಸಗಿ ಕಂಪನಿಯ ನೌಕರ ಸಾವು..!!

ಬೆಂಗಳೂರು: ಖಾಸಗಿ ಕಂಪನಿಯ ನೌಕರರೊಬ್ಬರು ತಮ್ಮ ಮನೆಯ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲತ್ತಹಳ್ಳಿಯ ಕದಂಬ ಲೇಔಟ್‌ನ ನಿವಾಸಿ, ಖಾಸಗಿ ಕಂಪನಿಯ ನೌಕರ ಮಂಜುನಾಥ್ (36) ಮೃತಪಟ್ಟವರು. ಮೊನ್ನೆ ರಾತ್ರಿ 11.30ರ ಸಮಯದಲ್ಲಿ ಮಂಜುನಾಥ್ ಅವರು ಎರಡಂತಸ್ತಿನ ತಮ್ಮ ಮನೆಯ ಟೆರೇಸ್ ಮೇಲೆ ಮದ್ಯ ಸೇವಿಸುತ್ತಾ ಕುಳಿತಿದ್ದರು. ಆ ನಡುವೆ ಎದ್ದು ಬಂದಾಗ ಆಯತಪ್ಪಿ ಕೆಳಗೆ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.