Categories
Uncategorized

ಎನ್.ಆರ್ ಪುರದಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಸಿಬ್ಬಂದಿಗಳಿಂದ ಸರ್ವೇ ಕಾರ್ಯ !!

ಎನ್.ಆರ್ ಪುರದಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ಸಿಬ್ಬಂದಿಗಳಿಂದ ಸರ್ವೇ ಕಾರ್ಯ !!

* ಸ್ಥಳೀಯ ಅರಣ್ಯ ಇಲಾಖೆಗೂ ಮಾಹಿತಿ ನೀಡದೇ ಸರ್ವೇ
* ಇಲಾಖೆಯ ಅನುಮಾನಾಸ್ಪದ ಸರ್ವೇಗೆ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಆಕ್ರೋಶ
* ವಿವಿಧೆಡೆ ಸೆರೆ ಹಿಡಿದ ಕಾಡಾನೆ ಬಿಡಲು ಅರಣ್ಯ ಜಾಗ ಬಳಕೆ ಆರೋಪ

ಎನ್.ಆರ್ ಪುರ: ತಾಲೂಕಿನ ಗ್ರಾಮದ ದೊಡ್ಡ ತಿರುವಿನ ಬಳಿ ಭದ್ರಾ ವನ್ಯಜೀವಿ ಅಭಯಾರಣ್ಯದ ಸಿಬ್ಬಂದಿಗಳಿಂದ ಸರ್ವೇ ಕಾರ್ಯ ನಡೆಯುತ್ತಿತ್ತು, ಸರ್ವೇಯಿಂದ ಅನುಮಾನಗೊಂಡ ಸ್ಥಳೀಯರು ಹಾಗೂ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾ ಮ ನಾಗೇಶ್ ಸೇರಿದಂತೆ ಹಲವರು ಸ್ಥಳಕ್ಕಾಗಮಿಸಿ ಇಲಾಖೆ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಅರಣ್ಯ ಇಲಾಖೆಗೂ ಮಾಹಿತಿ ನೀಡದೇ ಸರ್ವೇ ನಡೆಸುತ್ತಿರುವುದನ್ನು ತಿಳಿದು ಅಧಿಕಾರಿಗಳನ್ನು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮಿತಿಯ ಆರೋಪವೇನು ??
ಭದ್ರಾ ವನ್ಯಜೀವಿ ಅಭಯಾರಣ್ಯ ಸಿಬ್ಬಂದಿಗಳು ಸರ್ವೇ ನಡೆಸುತ್ತಿರು ಜನ ರಹಿತ ಪ್ರದೇಶದಲ್ಲಿ ಡ್ರೋನ್ ಮೂಲಕ ಸರ್ವೇ ನಡೆಸಿ ವಿವಿಧೆಡೆ ಸೆರೆ ಹಿಡಿದ ಕಾಡಾನೆಗಳನ್ನು ತಂದು ಬಿಡುವ ಹಾಗೂ ಬಫರ್ ಝೋ಼ನ್ ಸೃಷ್ಠಿಸುವ ಹುನ್ನಾರ ಎದ್ದು ಕಾಣುತ್ತಿದೆ,ಈ ಯೋಜನೆಯಿಂದ ಈಗಾಗಲೇ ಕಾಡಾನೆಗಳ ಉಪಟಳಕ್ಕೆ ತುತ್ತಾಗಿ ತಾಲೂಕಿನಲ್ಲಿ ಇಬ್ಬರು ರೈತರು ಮೃತರಾಗಿದ್ದಾರೆ,ಅನೇಕರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ ಹೀಗಿರುವಾಗ ಮತ್ತೆ ಆನೆಗಳನ್ನು ಈ ಭಾಗದಲ್ಲಿ ಬಿಟ್ಟರೆ ಇಲ್ಲಿನ ಜನಜೀವನ ಸಂಪೂರ್ಣ ಸರ್ವನಾಶವಾಗುತ್ತದೆ ಎಂದು ಆರೋಪ ಮಾಡಿದ್ದದಾರೆ.
ಇದು ಹೀಗೆ ಮುಂದುವರೆದರೆ ಇದರ ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂಬ ಎಚ್ಚರಿಕೆಯನ್ನು ಮಲೆನಾಡು ರೈತ ಹಿತರಕ್ಷಣಾ ಸಮಿತಿ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.