Categories
ತೀರ್ಥಹಳ್ಳಿ

ಮಾರಿ ಜಾತ್ರೆಗೆ 1 ಲಕ್ಷ ಭಕ್ತರ ಭೇಟಿ!

ಮಾರಿ ಜಾತ್ರೆಗೆ 1 ಲಕ್ಷ ಭಕ್ತರ ಭೇಟಿ!
– ತೀರ್ಥಹಳ್ಳಿ ಜಾತ್ರೆ ಈಗ ಮಲೆನಾಡಲ್ಲೇ ಫೇಮಸ್
– ಸಾವಿರಾರು ಮಂದಿಗೆ ಪ್ರತಿ ದಿನ ಊಟ
– ದೇವರ ದರ್ಶನ ಪಡೆದು ಪುನೀತರಾದ ಭಕ್ತರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಗೆ ಈ ವರ್ಷ ಸುಮಾರು 1 ಲಕ್ಷ ಮಂದಿ ಭಕ್ತರು ತೀರ್ಥಹಳ್ಳಿ ತಾಲೂಕು ಸೇರಿ ಮಲೆನಾಡಿನ ವಿವಿಧ ಕಡೆಯಿಂದ ಆಗಮಿಸಿ ಮಾರಿಕಾಂಬೆಯ ದರ್ಶನ ಪಡೆದಿದ್ದಾರೆ. ಪ್ರತಿ ದಿನ 10 ಸಾವಿರ ಮಂದಿ ಭೇಟಿ ನೀಡಿದ್ದು, ಸುಮಾರು 1 ಲಕ್ಷ ಭಕ್ತರು ಮಾರಿಕಾಂಬಾ ದರ್ಶನ ಪಡೆದಿದ್ದಾರೆ.

ಅದ್ದೂರಿ ಮಾರಿ ಜಾತ್ರೆಗೆ ತೆರೆ..!

ತೀರ್ಥಹಳ್ಳಿಯ ಮಾರಿಕಾಂಬಾ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 12 ರಿಂದ ಆರಂಭವಾಗಿ ಮಾರ್ಚ್ 20ರವರೆಗೆ 9 ದಿನಗಳ ಕಾಲ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಪ್ರತಿದಿನವೂ ಟಿಎಪಿಸಿ ಎಮ್ ಎಸ್ ಸಭಾಂಗಣದಲ್ಲಿ ಭಕ್ತರಿಗೆ ವಿವಿಧ ದಾನಿಗಳ ಸಹಯೋಗದಲ್ಲಿ ಅನ್ನಸಂತರ್ಪಣೆ ನಡೆದಿದೆ. ಹಾಗೂ ಗುರುವಾರ ಸಂಜೆಯ ಮಾಂಸದ ಊಟಕ್ಕೆ ತಾಲೂಕಿನ 13 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಭೋಜನ ಪ್ರಸಾದ ಸ್ವೀಕರಿಸಿದ್ದಾರೆ.

ಪ್ರತಿ ದಿನವೂ ಸಾಂಸ್ಕೃತಿಕ ಕಲರವ: ಖೋ ಖೋ ರಂಗು

9 ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅದ್ದೂರಿಯಾಗಿ ನಡೆದಿದೆ. ಈ ಬಾರಿಯ ವಿಶೇಷ ಎಂಬಂತೆ ತೀರ್ಥಹಳ್ಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಖೋ ಖೋ ಟೂರ್ನಮೆಂಟ್ ಆಯೋಜಿಸಿದ್ದು, ಹೊರ ತಾಲೂಕು ಹಾಗೂ ಹೊರ ಜಿಲ್ಲೆಗಳ ಜನರನ್ನು ತೀರ್ಥಹಳ್ಳಿಯತ್ತ ಆಕರ್ಷಿಸಿತು. ಹಾಗೂ ತೀರ್ಥಹಳ್ಳಿಯ ಹೆಸರು ರಾಜ್ಯದಲ್ಲೇ ರಾರಾಜಿಸುವಂತೆ ಮಾಡಿತು.

ಸಂಭ್ರಮದಿಂದ ಕುಣಿದು ಕುಪ್ಪಳಿಸಿದ ಯುವ ಜನತೆ!

ಇನ್ನು ಮಾರ್ಚ್ 19ರ ರಾತ್ರಿ ನಾಡ್ತಿಯಿಂದ ಮಾರಿಗೊಂಬೆಯನ್ನು ಸಂಪ್ರದಾಯಿಕ ರೀತಿಯಲ್ಲಿ ಮೆರವಣಿಗೆಯೊಂದಿಗೆ ತಂದು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ಸಾವಿರಾರು ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ಅಮ್ಮನವರಿಗೆ ಹಣ್ಣು ಕಾಯಿ ನೈವೇದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿದರು. ಮಾರ್ಚ್ 20ರ ಮಧ್ಯಾಹ್ನ ನಾಲ್ಕು ಗಂಟೆಗೆ ವಿವಿಧ ವೇಷ ಭೂಷಣಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಮೂಲಕ ಕರೆದು ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಯುವ ಜನತೆ ಹೆಚ್ಚಾಗಿ ಆಗಮಿಸಿದ್ದು ಕುಣಿದು ಕುಪ್ಪಳಿಸಿದರು. ರಾತ್ರಿ ತುಂಗಾ ನದಿಯಲ್ಲಿ ಗೊಂಬೆಯ ವಿಸರ್ಜನೆ ನಡೆಯಿತು. ಸಾವಿರಾರು ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

13 ಸಾವಿರ ಮಂದಿಗೆ ಮಾಂಸದೂಟ!

ನಾಡ್ತಿ ಮಾರಿಕಾಂಬಾ ಸಭಾಭವನದಲ್ಲಿ ಭೋಜನ ಪ್ರಸಾದ ವಿತರಣೆ ನಡೆಯಿತು. 13 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ತೀರ್ಥಹಳ್ಳಿ ಪ್ರವೀಣ್ ಮತ್ತು ತಂಡ ಅಡುಗೆ ಮಾಡಿತ್ತು. ಎಲ್ಲೂ ಏನು ತೊಂದರೆ ಆಗದಂತೆ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ವೈಭವದಿಂದ ಜಾತ್ರೆಯನ್ನು ನಡೆಸಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿಗೆ ಸಾರ್ವಜನಿಕರು, ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಪಟ್ಟಣ ಬೆಳಕಿನ ಅಲಂಕಾರದಲ್ಲಿ ಮಿಂದೆದ್ದಿತು.

ಮಾರಿಕಾಂಬಾ ಮಹಾತ್ಮೆ ವಿಶೇಷ ಅಂಕಣ ನಿರೀಕ್ಷಿಸಿ..!

[embedyt] https://www.youtube.com/watch?v=S-8l-PTISZk%5B/embedyt%5D

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.