Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮಾರಿಕಾಂಬ ಜಾತ್ರೆ 8 ನೇ ದಿನ..!

ತೀರ್ಥಹಳ್ಳಿ ಮಾರಿಕಾಂಬ ಜಾತ್ರೆ 8 ನೇ ದಿನ..!
– ಚಪ್ಪರ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಿದ ಮಾರಿಕಾಂಬ ದೇವಸ್ಥಾನ
– ದೇವಸ್ಥಾನದ ಆವರಣದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದ ಗೊಂಬೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ರಂಗೇರುತ್ತಿದ್ದು, 8 ನೇ ದಿನವಾದ ಇಂದು ದೇವಿ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿದೆ. ಇಂದು ಮಧ್ಯಾಹ್ನ ವಿಶೇಷ ಪೂಜೆಗಳು, ಮಂಗಳಾರತಿ ನಂತರ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ವಿವಿಧ ದಾನಿಗಳ ಸಹಯೋಗದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಸಿದ್ಧವಾಗಿದೆ ಸುಂದರ ಮಾರಿ ಗೊಂಬೆ :

ಇನ್ನು ಮಾರಿಕಾಂಬ ಜಾತ್ರೆ ಉತ್ಸವಕ್ಕೆ ಮಾರ್ಚ್ 20ರಂದು ತೆರೆ ಬೀಳಲಿದ್ದು ಮಾರ್ಚ್ 19ರ ಇಂದು ಮಾರಿ ಗೊಂಬೆ ಕೂರಿಸುವುದು ಹಾಗೂ ನಾಳೆ ಗೊಂಬೆ ಮೆರವಣಿಗೆ ಯೊಂದಿಗೆ ವಿಸರ್ಜನೆ ನಡೆಯಲಿದೆ. ಕಳೆದ ಮೂರು ಜಾತ್ರೆಗಳಿಂದ ತೀರ್ಥಹಳ್ಳಿ ಮಾರಿ ಜಾತ್ರೆಯ ಮಾರಿಗೊಂಬೆಯ ಕೆತ್ತನೆಯನ್ನು ಕುಶಲಕರ್ಮಿಗಳಾದ ಗರ್ತಿಕೆರೆ ರಾಗವಾಚಾರ್, ಮತ್ವಾನಿ ನಾಗರಾಜ್ ಆಚಾರ್, ರಾಮಕೃಷ್ಣಪುರದ ಪ್ರವೀಣ ಆಚಾರ್, ಹರಿಹರಪುರ ಮಂಜುನಾಥ ಆಚಾರ್ ಮಾಡುತ್ತಿದ್ದಾರೆ. ನಾಳೆಯ ಪೂಜೆಗೆ ಆಕರ್ಷಕ ಮಾರಿಗೊಂಬೆ ಸಿದ್ಧವಾಗಿದೆ. ಇಂದು ರಾತ್ರಿ 8ಕ್ಕೆ ಎಣ್ಣೆ ಬಂಡಾರ ಪೂಜೆ ಹಾಗೂ ಸಂಪ್ರದಾಯದಂತೆ ನಾಡ್ತಿ ಆಚಾರ್ ಕುಟುಂಬದವರು ಕೆತ್ತನೆ ಮಾಡಿದ ಗೊಂಬೆ ಪೂಜೆ, ನಂತರ ಮೆರವಣಿಗೆ ಮೂಲಕ ಹೊರಟು ದೇವಸ್ಥಾನದ ಆವರಣದಲ್ಲಿ ಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ಈ ಹಿನ್ನೆಲೆ ದೇವಸ್ಥಾನದಲ್ಲಿ ಸಡಗರ ಮನೆ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.