Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ತಲೆ ಬುರುಡೆ ಅಸ್ತಿಪಂಜರ ಪತ್ತೆ.!

ತೀರ್ಥಹಳ್ಳಿಯಲ್ಲಿ ತಲೆ ಬುರುಡೆ ಅಸ್ತಿಪಂಜರ ಪತ್ತೆ.!
– ಬಿಸಿಲು ಮನೆ ಬಳಿ ಪತ್ತೆ: ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲು
– ಕೊಲೆಯೋ….ಆತ್ಮಹತ್ಯೆಯೋ… ಆಕಸ್ಮಿಕವೊ..!
– ವಿಧಿವಿಜ್ಞಾನ ಕೇಂದ್ರಕ್ಕೆ ತಲೆ ಬುರುಡೆ ರವಾನೆ!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಸಮೀಪದ ಬಿಸಿಲು ಮನೆ ಎಂಬಲ್ಲಿ ಬುಧವಾರ ಅನಾಮಧೇಯ ತಲೆಬುರುಡೆಯ ಅಸ್ತಿಪಂಜರ ಪತ್ತೆಯಾಗಿದೆ. ಕಾಡಿನಲ್ಲಿ ಸಿಕ್ಕ ಈ ಅಸ್ತಿ ಪಂಜರವನ್ನು ಮಾಳೂರು ಠಾಣೆ ಪೊಲೀಸರು ವಿಜ್ಞಾನ ಕೇಂದ್ರಕ್ಕೆ ತಲುಪಿಸಿದ್ದು, ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ. ಇದು ಅನಾಮಧೇಯವಾಗಿದ್ದು, ಗಂಡಸಿನದೊ ಹೆಂಗಸಿನದೊ ಎನ್ನುವುದು ತನಿಖೆ ನಂತರ ಹೊರ ಬರಬೇಕಿದೆ. ಸ್ಥಳೀಯರು ಕಾಡಿನಲ್ಲಿ ಪತ್ತೆಯಾದ ಈ ಬುರುಡೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ತಲೆ ಬುರುಡೆ ಯಾರದು ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಸ್ಥಳೀಯವಾಗಿ ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಅಂತ್ಯ ಕ್ರಿಯೆ ವೇಳೆ ಮಣ್ಣು ಮಾಡಿದ್ದ ಅಸ್ತಿ ಪಂಜರ ಇರಬಹುದು ಎಂದೂ ಶಂಕಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.