Categories
ತೀರ್ಥಹಳ್ಳಿ

ದೇವಂಗಿ ಬಳಿ ಅಂದಗೆರೆಯಲ್ಲಿ ಕಾಡುಕೋಣದ ಹಿಂಡು!

ದೇವಂಗಿ ಬಳಿ ಅಂದಗೆರೆಯಲ್ಲಿ ಕಾಡುಕೋಣದ ಹಿಂಡು!
– 9ಕ್ಕೂ ಹೆಚ್ಚು ಕಾಡು ಕೋಣಗಳು ರಸ್ತೆಯಲ್ಲಿ
– ಬೈಕ್ ಸವಾರರು ಗಾಬರಿಯಾಗಿ ಕೂಗು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಇತ್ತೀಚಿಗೆ ಕಾಡುಕೋಣಗಳ ಸಂಖ್ಯೆ ಹೆಚ್ಚಾಗಿದೆ. ಊರಿಗೆ ನುಗ್ಗುತ್ತಿರುವ ಕಾಡುಕೋಣಗಳಿಂದ ಕೃಷಿಗೆ ತೊಂದರೆ ಆಗಿದೆ. ಆದರೆ ಕಾಡು ನಾಶದಿಂದ ಅವು ಆಹಾರ ಅರಸಿ ಊರಿಗೆ ನುಗ್ಗಲು ಶುರು ಮಾಡಿವೆ ಎಂಬುದು ಕೂಡ ಸತ್ಯ. ಈ ನಡುವೆ ದೇವಂಗಿ ಬಸವಾನಿ ರಸ್ತೆಯ ಅಂದಗೆರೆ ಬಳಿ ಕಾಡು ಕೋಣಗಳ ಗುಂಪು ಸ್ಥಳೀಯರು ಬೈಕಲ್ಲಿ ಹೋಗುವಾಗ ಸಿಕ್ಕಿದೆ.

9ಕ್ಕೂ ಹೆಚ್ಚು ಕಾಡುಕೋಣಗಳು ರಸ್ತೆ ದಾಟುತ್ತಿವ ವಿಡಿಯೋವನ್ನು ಹಾರೋಗೊಳಿಗೆ ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಉಪಾಧ್ಯಕ್ಷ ಪ್ರಸನ್ನ ಅಂದಗೆರೆ ನಮ್ಮೂರ್ ಎಕ್ಸ್ ಪ್ರೆಸ್ ಜತೆ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಕುಂದಾದ್ರಿ ಬಳಿ ಕಾಡು ಕೋಣವೊಂದು ಬೈಕ್ ಮೇಲೆ ದಾಳಿ ಮಾಡಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.