Categories
ತೀರ್ಥಹಳ್ಳಿ

ಆಂಬುಲೆನ್ಸ್ ಡ್ರೈವರ್ ಮನೆಯಲ್ಲೇ ಆತ್ಮಹತ್ಯೆ!

ಆಂಬುಲೆನ್ಸ್ ಡ್ರೈವರ್ ಮನೆಯಲ್ಲೇ ಆತ್ಮಹತ್ಯೆ!
– ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿ ನಡೆದ ಘಟನೆ
– ನೂರಾರು ಜೀವ ಉಳಿಸಿದವನ ದುರಂತ ಅಂತ್ಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ನಗುಮಗು ಆಂಬುಲೆನ್ಸ್ ವಾಹನದ ಸೇವೆಯ ಚಾಲಕ ವೃತಿ ಮಾಡಿಕೊಂಡು ಬೆಟ್ಟಮಕ್ಕಿಯಲ್ಲಿ ವಾಸವಾಗಿದ್ದ ರಮೇಶ್ ನೇಣುಬಿಗಿದುಕೊಂಡು ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ.
ಬೆಟ್ಟಮಕ್ಕಿಯ ತನ್ನ ಬಾಡಿಗೆ ಮನೆಯಲ್ಲಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಮೇಶ್‌ ಅನೇಕ ಸಂದರ್ಭದಲ್ಲಿ ಜೀವದ ಹಂಗು ತೊರೆದು ನೂರಾರು ಜನರ ಜೀವ ಉಳಿಸಿದ್ದು ,ಕೋವಿಡ್ ಸಮಯದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ರಮೇಶ್ ಸಾವಿನಿಂದ ಜೆಸಿ ಆಸ್ಪತ್ರೆಯ ಸಿಬ್ಬಂದಿಗಳು ದುಃಖದಿಂದ ತಮ್ಮ ಸಹೋದ್ಯೋಗಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಸುಮಾರು 10 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶವವನ್ನು ಜೆಸಿ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇಡಲಾಗಿದೆ. ವೈದ್ಯಕೀಯ ಮತ್ತು ಪೋಲಿಸ್ ಕ್ರಮದ ನಂತರ ಮೃತ ದೇಹವನ್ನು ಅವರ ಸ್ವಂತ ಊರಾದ ಹೊಸನಗರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿದು ಬಂದಿದೆ. ಹೊಸನಗರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.