ನಾಯಿ ಮರಿ ಬಿಡ್ತೀರಾ..? ನಿಮ್ಮ ಹೆಂಡ್ತಿ ಮಕ್ಕಳನ್ನು ಹಾಗೆ ಬಿಡಿ..?
– ನಾಯಿ ಮರಿಗಳನ್ನು ಬಿಡುವ ಜನರ ಕ್ರೂರಿತನಕ್ಕೆ ದಿಕ್ಕಾರ : ರಸ್ತೆ ಬದಿ ಬೋರ್ಡ್ ಹಾಕಿದ ಜನ
– ನಮ್ಮೂರ್ ಎಕ್ಸ್ ಪ್ರೆಸ್ ಈ ಬಗ್ಗೆ ವಿಶೇಷ ವರದಿ ಮಾಡಿತ್ತು!
NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಎಲ್ಲಾ ಕಡೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿವೆ. ಮನುಷ್ಯನು ನಾಯಿಗಳನ್ನು ಸಾಕಿ ಅದು ಮರಿ ಹಾಕಿದ ಮೇಲೆ ಸ್ವಲ್ಪವೂ ಯೋಚನೆ ಮಾಡದೆ ಬೇರೆ ಸ್ಥಳಕ್ಕೆ ತಂದು ಬಿಟ್ಟು ಹೋಗುತ್ತಾರೆ. ಒಂದು ಕಡೆ ಅವುಗಳು ಊಟ ಇಲ್ಲದೆ ಒದ್ದಾಡಿ ಸತ್ತರೆ, ಇನ್ನೊಂದೆಡೆ ಬೀದಿ ನಾಯಿಗಳ ಹಾವಳಿ ಎಂದು ಕಂಪ್ಲೇಂಟ್ ಕೊಡುತ್ತಿದ್ದಾರೆ. ನಾಯಿ ಮರಿಗಳು ಊಟ ಇಲ್ಲದೆ ರಸ್ತೆ ಮೇಲೆ ಪ್ರತಿ ದಿನ ಸಾಯುವ ದೃಶ್ಯಗಳು ಕಾಣುತ್ತಿವೆ. ಈ ಬಗ್ಗೆ ನಮ್ಮೂರ ಎಕ್ಸ್ಪ್ರೆಸ್ ಮಾಧ್ಯಮ ವಿಶೇಷ ವರದಿ ಮಾಡಿತ್ತು. ನಾಯಿ ಮರಿಗಳನ್ನು ರಸ್ತೆ ಮೇಲೆ ಬಿಡದಂತೆ ಮನವಿ ಮಾಡಿತ್ತು. ಅದು ಭಾರೀ ವೈರಲ್ ಆಗಿತ್ತು.
ಇದೀಗ ಹಲವು ಕಡೆ ಜನರು ನಾಯಿಗಳನ್ನು ನಮ್ಮ ಊರಿಗೆ ತಂದು ಬಿಡಬೇಡಿ, ನಿಮ್ಮ ಮಕ್ಕಳನ್ನು ಹೀಗೆ ತಂದು ಬಿಡುತ್ತೀರಾ ಎಂದು ಪ್ರಶ್ನಿಸಿ ಬ್ಯಾನರ್ ಗಳನ್ನು ಕೂಡ ಅಳವಡಿಸಿದ್ದಾರೆ. ಬೀದಿ ನಾಯಿಗಳನ್ನು ಉಳಿಸಿ ಎಂಬ ಅಭಿಯಾನವೂ ನಡೆಯುತ್ತಿದೆ ಆದರೂ ಕೂಡ ಕೆಲ ಕ್ರೂರಿ ಜನರು ಮತ್ತೆ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಮೇಲೆ ಬಿಟ್ಟು ಹೋಗುವಾಗ ನಾಯಿಯ ಬಗ್ಗೆ ಯಾಕೆ ಯೋಚಿಸಲಿಲ್ಲ? ಮನುಷ್ಯತ್ವ ಇಲ್ಲದ ಜನರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಮನೆಯನ್ನು ರಕ್ಷಿಸಿಕೊಳ್ಳಲು ನಾಯಿಯನ್ನು ಸಾಕಿ ಅದು ಮರಿ ಹಾಕಿದ ಮೇಲೆ ಮರಿಗಳನ್ನು ರಸ್ತೆಯಲ್ಲಿ ತಂದುಬಿಡುತ್ತಾರೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶು ಇಲಾಖೆ ಕೂಡ ಕರ್ತವ್ಯ ಮರೆಯಿತು!
ಮನುಷ್ಯನು ನಾಯಿಗಳನ್ನು ರಸ್ತೆಯ ಮೇಲೆ ತಂದು ಬಿಡುವುದು ಕಾನೂನಿಗೆ ಅಪರಾಧ. ರಸ್ತೆಯ ಮೇಲೆ ಯಾರು ನಾಯಿ ಮರಿಗಳನ್ನು ತಂದು ಬಿಡದಂತೆ ಎಚ್ಚರಿಕೆ ನೀಡಬೇಕು. ಪ್ರಾಣಿಗಳ ದೌರ್ಜನ್ಯ ಪ್ರತಿಬಂದಿತ ಕಾಯಿದೆ ಅಡಿಯಲ್ಲಿ ಶಿಕ್ಷೆ ಒದಗಿಸಬೇಕು. ಪಶು ಇಲಾಖೆಯು ನಿರ್ಲಕ್ಷ್ಯ ವಹಿಸದೆ ನಾಯಿ ಗರ್ಭಧಾರಣೆ ನಿರೋಧಕ ಔಷಧಿ ವಿತರಿಸಿ ಸಮಸ್ಯೆ ಬಗೆ ಹರಿಸಬೇಕು. ಪಶು ಇಲಾಖೆಯ ನಿರ್ಲಕ್ಷದಿಂದ ಯಾವುದೇ ಮೂಕ ಪ್ರಾಣಿಗೂ ತೊಂದರೆಯಾಗದಂತೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಮತ್ತೊಮ್ಮೆ ಜನರಲ್ಲಿ ಮನವಿ ಮಾಡಿದೆ.
ರಸ್ತೆ ಮೇಲೆ 5 ಮರಿ ಸತ್ತಿದ್ದ ಸ್ಥಳದಲ್ಲಿ ಬೋರ್ಡ್!
ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಡಗಿನ ಮಕ್ಕಿ ಎಂಬಲ್ಲಿ ಇತ್ತೀಚಿಗೆ 5 ಮರಿಗಳನ್ನು ಯಾರೋ ಬಿಟ್ಟಿದ್ದು ಅವು ರಸ್ತೆ ಪಕ್ಕವೇ ವಾಹನಗಳಡಿ ಸಿಲುಕಿ ಸಾವು ಕಂಡಿದ್ದವು. ಇದೀಗ ಅಲ್ಲೇ ಫ್ಲೆಕ್ಸ್ ಬೋರ್ಡ್ ಹಾಕಿ ಈ ಭಾಗದ ಯುವಕರು ಜಾಗೃತಿ ಮೂಡಿಸಿದ್ದಾರೆ. ನಾಯಿ ಮರಿ ತಂದು ಬಿಡುವವರು ತಮ್ಮ ಹೆಂಡತಿ ಮಕ್ಕಳನ್ನು ಹೀಗೆ ತಂದು ಬಿಡಿ ಯಾರಾದರೂ ಸಾಕುತ್ತಾರೆ ಎಂಬ ಬರಹ ಇಂತಹ ಜನರಿಗೆ ಚುಚ್ಚಿದಂತಿದೆ.
