ತೀರ್ಥಹಳ್ಳಿಗೆ ಅಮೃತ್-2 ಯೋಜನೆ ಭಾಗ್ಯ!
– ತೀರ್ಥಹಳ್ಳಿ ಪ.ಪಂ.ಗೆ 2.69 ಕೋಟಿ ಅನುದಾನ
– ಶುದ್ಧ ನೀರು ನೀಡುವ ಯೋಜನೆಗೆ ಹಣ
NAMMUR EXPRESS NEWS
ತೀರ್ಥಹಳ್ಳಿ: ಅಮೃತ್ ಯೋಜನೆ 2.0 ಅಡಿಯಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಗೆ ಅಂದಾಜು 400 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಹಾಗೂ 24/7 ನೀರು ಶುದ್ದೀಕರಣ ಘಟಕದ ಉನ್ನತೀಕರಣ ಕಾಮಗಾರಿಗೆ 2.69 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಅನುದಾನ ಮಂಜೂರಾಗಲು ಕಾರಣರಾದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರಿಗೆ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರಿಗೆ ಸಮಸ್ತ ಪಟ್ಟಣ ವಾಸಿಗಳು ಹಾಗೂ ಕೌನ್ಸಿಲ್ ಸದಸ್ಯರ ಪರವಾಗಿ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಅಭಿನಂದನೆ ಸಲ್ಲಿಸಿದ್ದಾರೆ.