Categories
ತೀರ್ಥಹಳ್ಳಿ

ರೋಟರಿ ಕ್ಲಬ್ ಅಧ್ಯಕ್ಷರಾಗಿ ಅನಿಲ್ ಪದವಿ ಸ್ವೀಕಾರ

ರೋಟರಿ ಕ್ಲಬ್ ಅಧ್ಯಕ್ಷರಾಗಿ ಅನಿಲ್ ಪದವಿ ಸ್ವೀಕಾರ

– ತೀರ್ಥಹಳ್ಳಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮ
– ಶಾಸಕರಿಂದಲೂ ರೋಟರಿ ಸಂಸ್ಥೆ ಕೆಲಸಕ್ಕೆ ಮೆಚ್ಚುಗೆ

NAMMUR EXPRESS NEWS

ತೀರ್ಥಹಳ್ಳಿ: ರೋಟರಿ ಕ್ಲಬ್ ತೀರ್ಥಹಳ್ಳಿ ಮತ್ತು ಇನ್ನರ್ವೀಲ್ ಕ್ಲಬ್ ತೀರ್ಥಹಳ್ಳಿ ಇದರ 2024 25 ನೇ ಸಾಲಿಗೆ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ತೀರ್ಥಹಳ್ಳಿಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ನೂತನ ಅಧ್ಯಕ್ಷರಾಗಿ ಅನಿಲ್, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಅಧಿಕಾರ ಸ್ವೀಕಾರ ಮಾಡಿದರು.

ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ.ಅಭಿನಂದ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಆತ್ಮಸಾಕ್ಷಿಗೆ ಸರಿಯಾಗಿ ನಾವು ಸರಿದಾರಿಯಲ್ಲಿರಬೇಕು ಮತ್ತು ಸಮುದಾಯದಲ್ಲಿ ಉತ್ತಮ ಬೆಳವಣಿಗೆಯನ್ನು ತರುವಲ್ಲಿ ರೋಟರಿ ಸದಸ್ಯರು ಭಾಗಿಯಾಗಬೇಕೆಂದರು. ಮನುಕುಲದ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ . ಪ್ರಪಂಚದಾದ್ಯಂತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಅದಕ್ಕೆ ಉದಾಹರಣೆಯಾಗಿ ತೀರ್ಥ‌ಹಳ್ಳಿಯ ರಕ್ತನಿಧಿ ಕೇಂದ್ರವು ಸಹ ಒಂದು, ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಮಾಡಿದೆ. ಮತ್ತು ತೀರ್ಥಹಳ್ಳಿ ರೋಟರಿ ಕ್ಲಬ್ ಕಳೆದ 56 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದರು.

ಅಂತರಾಷ್ಟ್ರೀಯ ರೋಟರಿ ನಂಸ್ತೆಯ ಸಹಾಯಕ ರೋಟರಿ ಕೋಆರ್ಡಿನೇಟರ್ ಆಗಿ ನಿಯುಕ್ತ ಗೊಂಡಿರುವುದಕ್ಕೆ ಸನ್ಮಾನಿಸಲಾಯಿತು. ಈ ಸಾಲಿನ ರೋಟರಿ ಕಾರ್ಯಕ್ರಮಗಳನ್ನು ಹೇಗೆ ನಿರ್ವಹಿಸಬೇಕೆಂದು ರೊ ಹೆಚ್ ಎಂ ಸುರೇಶ್ ಸಹಾಯಕ ಮಾಹಿತಿಯನ್ನು ನೀಡಿದರು, ರೊ ರಾಧಾಕೃಷ್ಣ ರಿಪ್ಪನ್ ಪೇಟೆ ಇವರು ತೀರ್ಥಹಳ್ಳಿ ರೋಟರಿಯ ಸಂಬಂಧವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಮಾಜಿ ಜಿಲ್ಲಾ ಗವರ್ನರ್ ರೊ ಅಭಿನಂದನ್ ಶೆಟ್ಟಿ ಇವರು ರೊ ಭರತ್ ಕುಮಾರ್ ಕೋಡ್ಲು ಇವರಿಂದ ರೊ ಅನಿಲ್ ಕುಮಾರ್ ಇವರಿಗೆ ಮತ್ತು ಶ್ರೀಮತಿ ಶಬರೀ ಕಡಿದಾಳ್ ಇವರು ಶ್ರೀಮತಿ ವಾಣಿ ಗಣೇಶ್ ರಿಂದ ಶ್ರೀಮತಿ ಶ್ರೇಷ್ಠ ಮುರಳಿ ಇವರಿಗೆ ಅಧ್ಯಕ್ಷರಾಗಿ ಪದವಿಪ್ರದಾನ ಮಾಡಿದರು. ರೊ ಹೆಚ್ ಎಂ ಸುರೇಶ, ಸಹಾಯಕ ಗವರ್ನರ್ ಇವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು . 14 ಜನ ನೂತನ ಸದಸ್ಯರು ತೀರ್ಥಹಳ್ಳಿ ರೋಟರಿ ಸೇರ್ಪಡೆಗೊಂಡರು. ಕಳೆದ ಸಾರಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರೊ ಭರತ್ ಕುಮಾರ್ ಕೊಡ್ಲು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಹಾಗೂ ಹಿಂದಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಸನ್ಮಾನವನ್ನು ಮಾಡಿದರು ಮತ್ತು ರೋಟರಿಯ ಕಾರ್ಯಕ್ರಮದಲ್ಲಿ ಮುಂದೆಯೂ ಸಹ ಸಹಕಾರ ನೀಡುವುದಾಗಿ ತಿಳಿಸಿದರು ಹಾಗೂ ರೋಟರಿಯಿಂದ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಎಲ್ಲಾ ಮಾಜಿ ರೋಟರಿ ಅಧ್ಯಕ್ಷರುಗಳಿಗೆ ರೊ ಅನಿಲ್ ಕುಮಾರ್ ಇವರು ಗೌರವಿಸಿದರು.

ರೊ ನಾಗರಾಜ್ , ರೊ ಶ್ರೀಕಾಂತ್ ಯಡಗರೆ ಮತ್ತುರೊ ಕೆ ಟಿ ಚಂದ್ರಪ್ಪ ಇವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ರೊ ಮನೋಜ್ ಕುಮಾರ್ ಆಚಾರ್ಯ, ರೊ ಸಂಜಯ್, ರೊ ಶರಶ್ಚಂದ್ರ, ರೊ ಭರತ್ ಕುಮಾರ್, ರೊ ಉಮಾ ಸ್ವಾಮಿ ಮತ್ತು ರೊ ವಾಣಿ ಗಣೇಶ್ ಇವರು ನೂತನ ಸದಸ್ಯರ ಪರಿಚಯವನ್ನು ಮಾಡಿದರು. ರೊ ಮಂಜುನಾಥ ಎಂ ಆರ್, ಕಾರ್ಯದರ್ಶಿ ವರದಿ ವಾಚಿಸಿದರು.ರೊ ಅಂಬಳಿಕೆ ಗಿರೀಶ್, ರೊ ವಾಸದೇವಾಚಾರ್ಯ ಮತ್ತು ಸಾರ್ಜೆಂಟ್ ಅಟ್ ಆರಮ್ಸ್ , ರೊ ರಮೇಶ್,ಇವರು ಸಹಕರಿಸಿದರು. ರೊ ಕೆಪಿಎಸ್ ಸ್ವಾಮಿ ಮತ್ತು ರೊ ಡಾ. ಯು ಕೆ ನಂದ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು .ನೂತನ ಕಾರ್ಯದರ್ಶಿ ರೊ ಶಿವಪ್ರಸಾದ್ ವಂದನಾರ್ಪಣೆ ಮಾಡಿದರು. ನೂರಾರು ಮಂದಿ ರೋಟರಿ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.