Categories
ತೀರ್ಥಹಳ್ಳಿ

ಅಣ್ಣಪ್ಪ ಅರಬಗಟ್ಟೆ ಅವರಿಗೆ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಅಣ್ಣಪ್ಪ ಅರಬಗಟ್ಟೆ ಅವರಿಗೆ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ
– ಶಿಕ್ಷಕ, ಸಾಹಿತಿ, ವಾಗ್ಮಿಯಾಗಿ ಅಪಾರ ಸೇವೆ

NAMMUR EXPRESS NEWS
ಪ್ರಶಸ್ತಿಗಳು ಸಾಧಕರ ಸಾಧನೆಗೆ ನೀಡುವ ಗರಿಮೆಗಳಾದರೆ ಕೆಲವೊಂದು ಸಾಧಕರಿಗೆ ನೀಡುವ ಪ್ರಶಸ್ತಿಗಳಿಂದ ಪ್ರಶಸ್ತಿಯ ಗರಿಮೆ ಹೆಚ್ಚಾಗುತ್ತದೆ. ಅಂತದ್ದೇ ವ್ಯಕ್ತಿತ್ವದ ಶಿಕ್ಷಕರಾದ ಶ್ರೀಯುತ ಅಣ್ಣಪ್ಪ ಅರಬಗಟ್ಟೆ ಇವರಿಗೆ ತೀರ್ಥಹಳ್ಳಿ ತಾಲೂಕಿನ ಉತ್ತಮ ಪ್ರಶಸ್ತಿ ಮುಡಿಗೇರಿದೆ. ದೇವಂಗಿ ಕ್ಲಸ್ಟರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸತೋಟ ಶಾಲೆಯಲ್ಲಿ ಸತತವಾಗಿ 16 ವರ್ಷಗಳಿಂದ ಸೇವೆ ಸಲ್ಲಿಸಿದ್ದು ಪರಿಶಿಷ್ಟ ಗಾಮದ ಮೂಲೆಯಲ್ಲಿರುವ ಒಂದು ಶಾಲೆಯನ್ನು ಜೀವಂತಿಕೆ ಚಿಲುಮೆನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಾಲಾ ವಲಯ ನಿಸರ್ಗದ ಮಡಿಲಿನಲ್ಲಿ ಭೌತಿಕ ಸೌಲಭ್ಯಗಳು ಬಣ್ಣ ಬಣ್ಣದ ಚಿತ್ತಾರದ ಗೋಡೆ, ತಾಂತ್ರಿಕ ಪರಿಕರ, ಲಕ್ಷಾಂತರ ರೂಪಾಯಿಗಳ ದಾನ ಸಂಗ್ರಹದೊಂದಿಗೆ ಶಾಲೆಯನ್ನು ಸ್ವರ್ಗವನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರ ಶಾಲೆಯ ಮಕ್ಕಳು ಬಾಲ್ಯದ ಮುಗ್ಧತೆ ಕಳೆದುಕೊಳ್ಳದೆ ಸ್ವಚ್ಛದಿಂದ ಹಕ್ಕಿಗಳಂತೆ ಇದ್ದಾರೆ. ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿದ್ದು ಅದಕ್ಕೆ ಪ್ರೇರಕ ಶಕ್ತಿಯಾಗಿ ಇರುವುದು ಅಣ್ಣಪ್ಪ ಅವರ ಬೋಧನಾ ವಿಧಾನ ಎಂದರೆ ಅತಿಶಯೋಕ್ತಿಯಲ್ಲ.

ಅಣ್ಣಪ್ಪ ಅವರು ಕೇವಲ ಶಿಕ್ಷಕರಾಗಿರಲಿಲ್ಲ ಕವಿ, ಸಾಹಿತಿ, ಉತ್ತಮ ವಾಗ್ಮಿ, ಅಂಕಣಕಾರ ಸದಾ ಚಟುವಟಿಕೆಯ ಚಿಲುಮೆ. ತಮ್ಮ ಅದ್ಭುತ ಪದಗಳ ಭಂಡಾರದಿಂದ ಅಕ್ಷರ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ, ಅವರ ಜಾತ್ರೆಗೆ ನುಗ್ಗಿದ ಮಗು ಕವನ ಸಂಕಲನ ಲೋಕಾರ್ಪಣೆಗೊಂಡಿದ್ದಲ್ಲದೆ ಅವರ ಸಾಹಿತ್ಯ ರಚನೆಗಳು ಪ್ರಕಟಗೊಂಡು ಜನ ಮನ್ನಣೆಗಳಿವೆ.
ಶ್ರೀಯುತ ರು ಜಿಲ್ಲಾ, ರಾಜ್ಯದ ಸಾಂಸ್ಕೃತಿಕ ಸಾಹಿತ್ಯದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಸಮ ಚಿತ್ತದಿ ಸದಾ ಇತರರಿಗೆ ಆದರ್ಶವಾಗಿ ನಿಲ್ಲುವ ಹೃದಯದ ವ್ಯಕ್ತಿತ್ವ ಹೊಸ ತೋಟ ಊರಿನ ಜನರ ಮನೆಯ ಪ್ರೀತಿಯ ಮೇಷ್ಟ್ರಿಗೆ ತೀರ್ಥಹಳ್ಳಿ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದರಿಂದ ಪ್ರಶಸ್ತಿಗೆ ಗರಿಮೆ ಹೆಚ್ಚಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಅಣ್ಣಪ್ಪ ಅರಬಗಟ್ಟೆ ಅವರಿಗೆ ಶುಭಾಶಯಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.