Categories
ತೀರ್ಥಹಳ್ಳಿ

ಕುಡಿದ ನಶೆಯಲ್ಲಿ ಮಚ್ಚು ಬೀಸಿದವರು ಅರೆಸ್ಟ್!

ಕುಡಿದ ನಶೆಯಲ್ಲಿ ಮಚ್ಚು ಬೀಸಿದವರು ಅರೆಸ್ಟ್!
– ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದ್ದ ಘಟನೆ
– 5 ಮಂದಿ ಸೆರೆ: ಪ್ರಮುಖ ಆರೋಪಿ ನಾಪತ್ತೆ

NAMMUR EXPRESS NEWS
ತೀರ್ಥಹಳ್ಳಿ: ಕುಡಿದ ನಶೆಯಲ್ಲಿ ಪಟ್ಟಣದಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ತಲ್ವಾರ್ ಬೀಸಿ ಹಲ್ಲೆ ನಡೆಸಿದ್ದ ಘಟನೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರನ್ನು ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಚೋರ್ ಸಮೀರ್ ಇನ್ನು ಪತ್ತೆಯಾಗಿಲ್ಲ.

ಏನಿದು ಘಟನೆ?

ಜೀವಿತ್ , ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬ ಯುವಕರು ತಮ್ಮ ಸ್ನೇಹಿತನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದು, ಆತನನ್ನ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಮಧ್ಯಾಹ್ನ 1-30 ರ ವೇಳೆಯಲ್ಲಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾರಿಗೆ ಹೋಗಿದ್ದಾರೆ.ಬಾರ್ ನಿಂದ ಈ ನಾಲ್ವರು ಹೊರ ಬರುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಬಂದ ಸಮೀರ್ ಮತ್ತು ಆತನ ಸ್ನೇಹಿತರು ಅಫ್ರೋಜ್ ಗೆ ಅವ್ಯಾಚ್ಯ ಶಬ್ದಗಳೊಂದಿಗೆ ಬೈದು ಜಗಳವಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ವಾಪಾಸ್ ಕಳುಹಿಸಿದ್ದಾರೆ.

ಇದಾದ ಸ್ವಲ್ಪ ಸಮಯದ ನಂತರ ಮತ್ತೆ ಅಫ್ರೋಜ್ ಚೋರ್ ಸಮೀರ್ ಗೆ ಕರೆ ಮಾಡಿ ಮಧ್ಯಾಹ್ನ ಆಸ್ಪತ್ರೆಯ ಬಳಿಯಿದ್ದ ಬಾರಿನಲ್ಲಿ ನನ್ನನ್ನ ಬೈದಿದ್ದೇಕೆ ಎಂದು ಪ್ರಶ್ನಿಸಿದ್ದಾನೆ. ನಂತರ ಚೋರ್ ಸಮೀರ್ ಎಲ್ಲಿದೀಯ ಎಂದು ವಾಪಾಸ್ ಕೇಳಿದ್ದಾನೆ.
ಆಗುಂಬೆ ಬಸ್ ನಿಲ್ದಾಣದ ಬಾರ್ ಬಳಿ ಇದ್ದೇನೆ ಎಂದು ಅಫ್ರೋಜ್ ಹೇಳಿದ್ದಕ್ಕೆ ಏಕಾಏಕಿ ಚೋರ್ ಸಮೀರ್ ಬಾರ್ ಬಳಿ ಬಂದು ಅಫ್ರೋಜ್ ಗೆ ಆವಾಜ್ ಹಾಕಿದ್ದು, ನಂತರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಫ್ರೋಜ್ ಮತ್ತು ಆತನ ಸ್ನೇಹಿತರನ್ನು ಸಫನ್ ಮತ್ತು ಇತರೆ ನಾಲ್ವರ ಜೊತೆ ಬಂದ ಚೋರ್ ಸಮೀರ್ ರಸ್ತೆ ಉದ್ದಕ್ಕೂ ಅಟ್ಟಾಯಿಸಿಕೊಂಡು ಮಚ್ಚು ಬೀಸಿದ್ದಾನೆ.

ಈ ಸಮಯದಲ್ಲಿ ಅಪ್ರೋಜ್ ತಲೆಗೆ ಗಾಯವಾಗಿದೆ. ಈ ವೇಳೆ ಜೀವಿತ್ ಗೂ ಗಾಯವಾಗಿದೆ. ಅವರನ್ನು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ, ಹಲ್ಲೆ ನೆಡೆಸಿದ್ದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು ಗಲಾಟೆ ನಡೆಸಿದ 5 ಮಂದಿಯನ್ನು ಬಂಧಿಸಿದ್ದಾರೆ. ಇನ್ನುಳಿದವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.