Categories
ತೀರ್ಥಹಳ್ಳಿ

ಮನೆ ಮಂದಿಯೆಲ್ಲರಿಗೂ ದೀಪಾವಳಿ ಸಂತಸ!

ಮನೆ ಮಂದಿಯೆಲ್ಲರಿಗೂ ದೀಪಾವಳಿ ಸಂತಸ!
– ಲಕ್ಷ್ಮಿ ಪೂಜೆ, ಗೋ ಪೂಜೆ, ಅಂಗಡಿ ಪೂಜೆ ಸಂಭ್ರಮ
– ಇಡೀ ಪಟ್ಟಣದ ಅಂಗಡಿಗಳಿಗೆ ವಿದ್ಯುತ್ ಅಲಂಕಾರ
– ಪಟಾಕಿ ಖರೀದಿಗೆ ಮುಗಿಬಿದ್ದ ಜನ: ಹಲವೆಡೆ ಗಾಯ

NAMMUR EXPRESS NEWS
ಬೆಳಕಿನ ಹಬ್ಬ ದೀಪಾವಳಿ ತೀರ್ಥಹಳ್ಳಿ ತಾಲೂಕಿನಲ್ಲಿ ಸಂಭ್ರಮ ತಂದಿದ್ದು, ಎಲ್ಲೆಡೆ ಕಳೆದ ಎರಡು ದಿನಗಳಿಂದ ಲಕ್ಷ್ಮಿ ಪೂಜೆ, ಗೋ ಪೂಜೆ, ವಾಹನ, ಕಚೇರಿ ಪೂಜೆಯೊಂದಿಗೆ ಆಚರಣೆ ಮಾಡಲಾಯಿತು. ಬಲಿ ಪಾಡ್ಯಮಿ ಅಂದ್ರೆ ಗೋ ಪೂಜೆಯನ್ನು ಸೋಮವಾರ ಮತ್ತು ಮಂಗಳವಾರ ಎರಡೂ ದಿನ ಆಚರಣೆ ಮಾಡಲಾಯಿತು. ಮನೆ ಮನೆಯಲ್ಲೂ ಮಕ್ಕಳು ಪಟಾಕಿ ಹೊಡೆಯುತ್ತಿರುವ ದೃಶ್ಯ ಕಂಡು ಬಂತು. ತೀರ್ಥಹಳ್ಳಿ ತಾಲೂಕು ಸೇರಿ ಮಲೆನಾಡಲ್ಲಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.

ಮಲೆನಾಡಿನಲ್ಲಿ ದೀಪಾವಳಿ ಗೋ ಪೂಜೆ ಗಮನ ಸೆಳೆದಿದೆ. ಗೋವುಗಳಿಗೆ ಹೂವಿನ ಹಾರ ಹಾಕಿ ರೈತ ಕುಟುಂಬ ಆರತಿ ಬೆಳಗಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗೋವುಗಳಿಗೆ ಅಕ್ಕಿ ಬೆಲ್ಲ ಹಣ್ಣು ನೀಡಿ ಪೂಜೆ ಸಲ್ಲಿಸಲಾಗುತ್ತಿದೆ. ಹಸುಗಳನ್ನು ತೊಳೆದು, ಮೈ ಮೇಲೆ ಬಣ್ಣ ಹಚ್ಚಿಯೂ ಸಹ ಸಂಭ್ರಮ ಪಡಲಾಗುತ್ತಿದೆ. ಹಸುಗಳಿಗೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.