Categories
ಚಿಕ್ಕಮಗಳೂರು

ಬಾಳೆಹೊನ್ನೂರು ವಿದ್ಯತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ

ಬಾಳೆಹೊನ್ನೂರು ವಿದ್ಯತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಕರೆಂಟ್ ಇರಲ್ಲ

* ಮೆಸ್ಕಾಂನಿಂದ 2025-26 ನೇ ಸಾಲಿನ ಮೊದಲನೇ ತ್ರೈಮಾಸಿಕ ನಿರ್ವಹಣೆ
* ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಕರೆಂಟ್ ಇರಲ್ಲ
* ಎಲ್ಲೆಲ್ಲಿ ಕರೆಂಟ್ ಇರಲ್ಲ ಇಲ್ಲಿದೆ ಮಾಹಿತಿ

NAMMMUR EXPRESS NEWS 
ಬಾಳೆಹೊನ್ನೂರು: ನಾಳೆ ಅಂದರೆ ದಿನಾಂಕ 29:04:2025 ರ ಮಂಗಳವಾರ 66/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಬಾಳೆಹೊನ್ನೂರಿನಲ್ಲಿ 2025-26 ನೇ ಸಾಲಿನ ಮೊದಲನೇ ತ್ರೈಮಾಸಿಕ ನಿರ್ವಹಣೆಯನ್ನು ಮೆಸ್ಕಾಂ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಕರೆಂಟ್ ಇರುವುದಿಲ್ಲ.ಮೆಸ್ಕಾಂ ಹಮ್ಮಿಕೊಂಡಿರುವ ತ್ರೈಮಾಸಿಕ ನಿರ್ವಹಣೆಯಿಂದ 66/33/11 ಕೆ.ವಿ ವಿದ್ಯತ್ ವಿತರಣಾ ಕೇಂದ್ರ ಬಾಳೆಹೊನ್ನೂರಿನ ಮೂಲಕ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್‌ಗಳಲ್ಲಿ ಕರೆಂಟ್ ಇರುವುದಿಲ್ಲ. ಆದ್ದರಿಂದ ಬಾಳೆಹೊನ್ನೂರು,ರಂಭಾಪುರಿ ಮಠ,ಕಳಸ,ಜಯಪುರ,ಶೃಂಗೇರಿ,ಕುಂಚೇಬೈಲ್,ಬಸರಿಕಟ್ಟೆ,ಮಾಗುಂಡಿ,ಗಡಿಗೇಶ್ವರ ಮತ್ತು ಕಡಬಗೆರೆ ಭಾಗದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.