Categories
ತೀರ್ಥಹಳ್ಳಿ

ವಿದ್ಯುತ್ ಮೀಟರ್ ಸಮಸ್ಯೆ ಮಾಡಿದ್ದೆ ಬಿಜೆಪಿ!

ವಿದ್ಯುತ್ ಮೀಟರ್ ಸಮಸ್ಯೆ ಮಾಡಿದ್ದೆ ಬಿಜೆಪಿ!
– ಅಡಿಕೆ ಸುಲಿಯುವ ಯಂತ್ರಗಳಿಗೆ ವಿದ್ಯುತ್ ಕನೆಕ್ಷನ್ ಪಡೆಯಬೇಕು ಎಂದು ಕಾನೂನು ಮಾಡಿದ ಆರಗ
– ಈಗ ಪ್ರತಿಭಟನೆ ಮಾಡ್ತಾರಂತೆ: ಹುಂಚದಕಟ್ಟೆ ಆದರ್ಶ

NAMMUR EXPRESS NEWS
ತೀರ್ಥಹಳ್ಳಿ : ಮಾಜಿ ಸಚಿವರೇ ನಿಮಗಿದು ಓಪನ್ ಚಾಲೆಂಜ್, ಅಡಿಕೆ ಸುಲಿಯುವ ಯಂತ್ರಗಳಿಗೆ ಕಮರ್ಷಿಯಲ್ ಕನೆಕ್ಷನ್ ಪಡೆಯಲೇ ಬೇಕು ಎಂದು ಕಾನೂನು ಮಾಡಿದ್ದ ಈಗಿನ ಕಾಂಗ್ರೆಸ್ ಸರ್ಕಾರವಾದರೆ ನಾನು ಕಾಂಗ್ರೆಸ್ ಮಾತ್ರ ಅಲ್ಲ ನಾನು ಸೋಗಲಾಡಿ ಅಂತ ಒಪ್ಪಿಕೊಂಡು ರಾಜಕೀಯ ನಿವೃತ್ತಿ ಪಡೆಯುವೆ, ನೀವು ನಿಮ್ಮ ಸರ್ಕಾರವಾಗಿದ್ದರೆ ಸೋಗಲಾಡಿತನ

ಒಪ್ಪಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಿರಾ?

ಈ ಪ್ರಶ್ನೆ ಇದೀಗ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಹಾಕಿದ್ದಾರೆ. ವಿದ್ಯುತ್ ದರ ಏರಿಸಿದ್ದು ನಿಮ್ಮದೇ ಸರ್ಕಾರ. ಕಮರ್ಷಿಯಲ್ ಕಲೆಕ್ಷನ್ ಪಡೆಯುವಂತೆ ರೈತರ ಮೇಲೆ ದಬ್ಬಾಳಿಕೆ ಮಾಡುವ ಕಾನೂನು ತಂದಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಎನ್ನುವುದು ಗೊತ್ತಿದ್ದು ಯಾವ ಮುಖ ಹೊತ್ತು ಪ್ರತಿಭಟನೆ ಮಾಡುವಿರಿ?. ಗೃಹಜೋತಿ ಯೋಜನೆ ಮನೆ ಮನೆಯನ್ನು ಹೇಗೆ ತಲುಪಿದೆ ಎಂಬುದನ್ನು ತೀರ್ಥಹಳ್ಳಿ ಕ್ಷೇತ್ರದ ಪ್ರತಿ ಮನೆಗೂ ಹೋಗಿ ತಿಳಿಸುವ ಕೆಲಸ ಮಾಡುತ್ತೇವೆ. ಸಾಧ್ಯವಾದರೆ ಸದನದಲ್ಲಿ ನಿಮ್ಮ ಸರ್ಕಾರದ ತಪ್ಪು ಒಪ್ಪಿಕೊಂಡು ಕಮರ್ಷಿಯಲ್ ಅಗತ್ಯವಿಲ್ಲ ಎಂದಾದರೂ ಧ್ವನಿ ಎತ್ತಿ ಅಥವಾ ಅಡಿಕೆ ಯಂತ್ರಗಳಿಗೆ ಬಳಕೆಯಾಗುವ ಎರಡು ತಿಂಗಳಿಗೆ ಬಿಲ್ ಕಟ್ಟಿಸುವ ಯೋಜನೆಗೆ ಮನವಿ ಮಾಡಿ. ಸೋಗಲಾಡಿತನ ಬಿಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆಯ ನಿಲುವಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಪಂಚದ ಕಟ್ಟೆ ಆದರ್ಶ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ರೈತರ ಶೋಷಣೆಯ ಕಾನೂನು ಜಾರಿಗೆ ತಂದು ಈಗ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸುವುದು ಅವರ ಡೋಂಗಿತನಕ್ಕೆ ಸಾಕ್ಷಿ ಎಂದಿದ್ದಾರೆ.

ಏನಿದು ವಿವಾದ…?

ಮಲೆನಾಡ ಅಡಿಕೆ ಬೆಳೆಗಾರರು ಅನಿವಾರ್ಯವಾಗಿ ಕಾರ್ಮಿಕರ ಕೊರತೆಯಿಂದ ಅಡಿಕೆ ಮಿಷನ್ ಮೊರೆ ಹೋಗಿದ್ದಾರೆ. ಆದರೆ ಅಡಿಕೆ ಮಿಷನ್ ಹಾಕಲು ಕೆ ಇ ಬಿ ಯಿಂದ ತಾತ್ಕಾಲಿಕ ಮೀಟರ್ ಪಡೆಯಬೇಕೆಂಬ ಆದೇಶವನ್ನು ಸರ್ಕಾರ ಮಾಡಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆ ಈ ಆದೇಶ ವಾಪಾಸ್ ಪಡೆಯುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಳೆದ ವರ್ಷವೂ ಜಾರಿಯಲ್ಲಿತ್ತು. ಆದರೆ ಇಷ್ಟು ಕಠಿಣ ನಿಯಮ ಆಗಿರಲಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.