Categories
ತೀರ್ಥಹಳ್ಳಿ

ಮೇಗರವಳ್ಳಿ ಬಳಿ ಬಸ್-ಕಾರು ಆಫಘಾತ!

ಮೇಗರವಳ್ಳಿ ಬಳಿ ಬಸ್-ಕಾರು ಆಫಘಾತ!
– ಹಾಲಾಡಿ ಮೂಲದ ಓರ್ವನಿಗೆ ಗಾಯ
– ಕೌರಿ ಬೈಲು ಬಳಿ ಹುಲಿ ಪ್ರತ್ಯಕ್ಷ !: ಜನತೆಗೆ ಭಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಮೇಗರವಳ್ಳಿ ಸಮೀಪದ ಕೊಳಿಗೆ ಬಳಿ ಸೋಮವಾರ ಬೆಳಗ್ಗೆ ಬಸ್ ಮತ್ತು ಕಾರು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ. ಹಾಲಾಡಿ ಮೂಲ ಕುಟುಂಬ ಶಿವಮೊಗ್ಗ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿರುವಾಗ ತೀರ್ಥಹಳ್ಳಿಯಿಂದ ಬಿದಿರು ಗೋಡು ಕಡೆಗೆ ಹೋಗುತ್ತಿರುವ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಮಂಡಗದ್ದೆ ಬಳಿ ಬಸ್, ಕಾರು ಅಪಘಾತ ಆಗಿ ಇಬ್ಬರು ಕರಾವಳಿ ಮೂಲದವರು ಮೃತಪಟ್ಟಿದ್ದರು.

ಕೌರಿಬೈಲಿನಲ್ಲಿ ಹುಲಿ ಪ್ರತ್ಯಕ್ಷ!?

ಹೊಸನಗರ ಮತ್ತು ತೀರ್ಥಹಳ್ಳಿಯ ಗಡಿ ಭಾಗದ ಕೌರಿಬೈಲಿನಲ್ಲಿ ಸೋಮವಾರ ಬೆಳಗ್ಗೆ ಹುಲಿ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ಮಾಹಿತಿಯನ್ನು ಕೊಟ್ಟಿದ್ದಾರೆ. ಹುಲಿ ಅಥವಾ ಚಿರತೆ ಎಂಬುದು ಇನ್ನು ಸ್ಪಷ್ಟವಾಗಿ ಗೋಚರವಾಗಿಲ್ಲ. ಅರಣ್ಯ ಇಲಾಖೆಯವರು ಈ ಬಗ್ಗೆ ತಕ್ಷಣ ಕ್ರಮವನ್ನು ವಹಿಸಬೇಕು. ಈ ಭಾಗದಲ್ಲಿ ರೈತರು ಮತ್ತು ಮಕ್ಕಳು ಶಾಲಾ ವಿದ್ಯಾರ್ಥಿಗಳು ಓಡಾಡುತ್ತಿದ್ದು ಅವರಿಗೆ ಈಗ ಹುಲಿ ಭಯ ಸೃಷ್ಟಿ ಆಗಿದೆ.

ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.