Categories
ತೀರ್ಥಹಳ್ಳಿ

ಹಾರೋಗೊಳಿಗೆಯಲ್ಲಿ ಸಂವಿಧಾನ ಜಾಗೃತಿ

ಹಾರೋಗೊಳಿಗೆಯಲ್ಲಿ ಸಂವಿಧಾನ ಜಾಗೃತಿ
– ಜಾಗೃತಿ ಜಾಥಾ ವಾಹನವನ್ನು ಬೈಕ್ ರ್‍ಯಾಲಿಯಲ್ಲಿ ಸ್ವಾಗತ
– ಗ್ರಾಮ ಪಂಚಾಯತ್ ಆಡಳಿತ, ಸ್ಥಳೀಯರು ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷದ ನಿಮಿತ್ತ ಶನಿವಾರ ಸಂವಿಧಾನ ಜಾಗೃತಿ ಜಾಥಾ ಹಾರೋಗೊಳಿಗೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದು, ಜಾಗೃತಿ ಜಾಥಾ ವಾಹನವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಮುಂಭಾಗದಿಂದ ಬೈಕ್ ರ್‍ಯಾಲಿ ಹಾಗೂ ಬ್ಯಾಂಡ್ ಸೆಟ್ ಮುಖಾಂತರ ಶಾಲಾ ಮಕ್ಕಳ ವೇಶ ಭೂಷಣ ಹಾಗೂ ಬಲೂನ್ ಒಳಗೊಂಡಂತೆ ಗ್ರಾಮ ಪಂಚಾಯಿತಿ ಆವರಣದವರೆಗೆ ಜಾಥದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಮಹತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪ ನಮನವನ್ನು ಸಲ್ಲಿಸಿ, ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಮೌನೇಶ್ ಉದ್ಘಾಟಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಾರಾಧ್ಯ ಬಿ ಎಮ್ ಸರ್ವರನ್ನು ಸ್ವಾಗತಿಸಿದರು. ಮತ್ತು ಶಾಲಾ ಮಕ್ಕಳು ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಸ.ಹಿ.ಪ್ರಾಥಮಿಕ ಶಾಲಾ ಶಿಕ್ಷಕರಾದ ರಾಘವೇಂದ್ರ ಸಂವಿಧಾನದ ಬಗ್ಗೆ, ಉಪನ್ಯಾಸ ನೀಡಿದರು. ಹಾರೋಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ ಸಸಿತೋಟ ಹಾಗೂ ಮತ್ತೊಬ್ಬ ಸದಸ್ಯರಾದ ಪ್ರಸನ್ನ ಎಂ ಟಿ ಉಪಸ್ಥಿತರಿದ್ದರು ಹಾಗೂ ಶ್ರೀಮತಿ ನರ್ಮದ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು, ಹಾಗೂ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಎನ್ ಆರ್ ಎಲ್ ಎಂ ಒಕ್ಕೂಟದ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.