ಅರೇಹಳ್ಳಿ ಗ್ರಾಪಂನಲ್ಲಿ ಸಂವಿಧಾನ ಜಾಥಾ ಸಂಭ್ರಮ!
– ಸಂವಿಧಾನ ಜಾಗೃತಿ ಜಾಥಾ ವಾಹನ ಸ್ವಾಗತ
– ಜನರಿಗೆ ಸಂವಿಧಾನ ಜಾಗೃತಿ: ಗಣ್ಯರ ಮಾತು
NAMMUR EXPRESS NEWS
ತೀರ್ಥಹಳ್ಳಿ: ಭಾರತದ ಸಂವಿಧಾನ ಅಳವಡಿಸಿಕೊಂಡು 75 ವರ್ಷಗಳ ವಿಶೇಷ ಸಂಭ್ರಮಾಚರಣೆ ಪ್ರಯುಕ್ತ ಶಿವಮೊಗ್ಗ ಜಿಲ್ಲಾದಾದ್ಯಂತ ಹಮ್ಮಿಕೊಂಡಿರುವಂತಹ ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ಗುರುವಾರ ಬೆಳಿಗ್ಗೆ ಅರೇಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಪೂರ್ಣ ಕುಂಭದೊಂದಿಗೆ ಸ್ವಾಗತವನ್ನು ಕೋರಲಾಯಿತು. ಸಂವಿಧಾನ ಜಾಗೃತಿ ವಾಹನವನ್ನು ಸಾರ್ವಜನಿಕರ ಬೈಕ್ ರ್ಯಾಲಿ ಹಾಗೂ ಶಾಲಾ ಮಕ್ಕಳ ತ್ರಿವರ್ಣ ಧ್ವಜ, ಬಲೂನುಗಳಿಂದ ಜಾಥಾದ ಮೂಲಕ ಅರೆಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ವೇದಿಕೆಗೆ ಆಹ್ವಾನ ಮಾಡಲಾಯಿತು. ಸಂವಿಧಾನ ಜಾಥಾ ಕಾರ್ಯಕ್ರಮವನ್ನು ಅರೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ ಸುರೇಂದ್ರ ರವರ ಉದ್ಘಾಟನೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಾಡಗೀತೆ ಮತ್ತು ರಾಷ್ಟ್ರಗೀತೆ ಹೇಳಿದರು, ಸಂಜೀವಿನ ಮಹಿಳಾ ಒಕ್ಕೂಟ ಕಾರ್ಯಕರ್ತರು ಪ್ರಾರ್ಥನೆಯನ್ನು ಹೇಳಿದರು, ವಿಶ್ವ ತೀರ್ಥ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಪ್ರಸ್ತಾವಿಕ ಮಾತನಾಡಿ, ಸಂವಿಧಾನ ಮತ್ತು ಸಂವಿಧಾನ ಅರಿವು ಜಾಥಾದ ಮಹತ್ವದ ಉದ್ದೇಶ ತಿಳಿಸಿದರು. ಹೊರಣೆಬೈಲು ಶಾಲಾ ಮುಖೋಪಾಧ್ಯರಾದ ಅನ್ವರ್ ಅವರು ಸಂವಿಧಾನದ ಪೀಠಿಕೆಯನ್ನು ಸರ್ವರಿಗೂ ಪ್ರಮಾಣವಚನ ಬೋಧಿಸಿದರು. ಅರೇಹಳ್ಳಿ ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್, ಅಂಬೇಡ್ಕರ್ ಅವರ ರಚಿತವಾದ ಸಂವಿಧಾನದ ಕುರಿತು ಅದರ ಧ್ಯೇಯೋದ್ದೇಶಗಳ ಕುರಿತು ಸಭೆಗೆ ವಿವರವಾದ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಗಿರಿರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರಾದ ಸತೀಶ್ ಭಾಗವಹಿಸಿದ್ದರು, ಸಭೆಯಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮಹಿಳಾ ಸ್ವಸ್ಥಾಯ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯಕರ್ತರು, ಶಾಲಾ ಮಕ್ಕಳು, ಸಾರ್ವಜನಿಕರು ಶಾಲಾ ಮುಖ್ಯೋಪಾಧ್ಯಯರು ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು. ಸಹಶಿಕ್ಷಕಿಯಾದ ವಿಜಯಲಕ್ಷ್ಮಿ ಕಡ್ತೂರು ಅವರು ಪೂರ್ತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಪಿಡಿಒ ಯುವರಾಜ್ ಕುಮಾರ್ ಅವರು ಸರ್ವರಿಗೂ ವಂದನಾರ್ಪಣೆ ಹೇಳಿ, ಕಾರ್ಯಕ್ರಮ ಮುಕ್ತಾಯ ಮಾಡಿದರು.
