Categories
ತೀರ್ಥಹಳ್ಳಿ

ಬೆಜ್ಜವಳ್ಳಿ ಶ್ರೀ ಅಯ್ಯಪ್ಪಸ್ವಾಮಿ ಪವಾಡಕ್ಕೆ ಕ್ಷಣಗಣನೆ

ಬೆಜ್ಜವಳ್ಳಿ ಶ್ರೀ ಅಯ್ಯಪ್ಪಸ್ವಾಮಿ ಪವಾಡಕ್ಕೆ ಕ್ಷಣಗಣನೆ
– ದೇವರ ಸನ್ನಿಧಾನದಲ್ಲಿ ಮಕರ ಸಂಕ್ರಾಂತಿಯಂದು ಹಾರುತ್ತೆ ಗರುಡ
– ರಾಜ್ಯದ ವಿವಿಧ ಭಾಗದಿಂದ ಭಕ್ತರ ಆಗಮನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಜನವರಿ 14ರ ಮಂಗಳವಾರ ಮಕರ ಸಂಕ್ರಾಂತಿ ಪ್ರಸಿದ್ಧ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಅಯ್ಯಪ್ಪ ಸನ್ನಿಧಿಯ ಮೇಲೆ ಶುಭ ಗಳಿಗೆಯಲ್ಲಿ ಗರುಡ ಹಾರುವುದು ವರ್ಷ ಪ್ರತೀತಿ. ಈಗಾಗಲೇ ಅಲ್ಲಿ ಜಾತ್ರೆ ಸಿದ್ಧತೆ ನಡೆದಿದೆ. ನೂರಾರು ಅಂಗಡಿಗಳು ಬಂದಿವೆ. ದೇವಸ್ಥಾನವನ್ನು ಅಲಂಕಾರ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಪ್ರಾರ್ಥನೆ, ಧರ್ಮಶಾಸ್ತನ ಅನುಜ್ಞೆ, ಮಹಾಗಣಪತಿ ಪೂಜೆ, ಪುಣ್ಯಾಹಃ ದೇವ ನಾಂದಿ ಋತ್ವಿಗರಣೆ, ಮಹಾಗಣಪತಿ ಹೋಮ, ನವಗ್ರಹ ಸಹಿತ ದುರ್ಗಾ ಹೋಮ, ಅಷ್ಟೋತ್ತರ ಶತಕುಂಭ ಕಲಶ ಸ್ಥಾಪನೆ ಜರುಗಲಿದೆ. ಪೀಠಾರೋಹಣದ ವರ್ಧಮತೋತ್ಸವ ಸಮಾರಂಭ ಜರುಗಲಿದೆ. ಶ್ರೀ ಕ್ಷೇತ್ರ ನಿರ್ಮಾತೃ ಶ್ರೀ ಸೋಮೇಶ್ವರ ಕೃಷ್ಣಯ್ಯ ಗುರುಸ್ವಾಮಿಗಳ ಮಾರ್ಗದರ್ಶನ ದಲ್ಲಿ ಪ್ರಾತಃ ಕಾಲದಿಂದ ಶ್ರೀ ಸನ್ನಿಧಾನದಲ್ಲಿ ಶ್ರೀ ಗಣಪತಿ ಪೂಜೆ ಯೊಂದಿಗೆ ಹೋಮ, ಹವನ ಕಲಶ ಸ್ಥಾಪನೆಯೊಂದಿಗೆ ಮಕರ ಸಂಕ್ರಾಂತಿ ಉತ್ಸವ ನಡೆಯಲಿದೆ. ಡಾ. ವಿಶ್ವಸಂತೋಷ ಭಾರತಿ ಶ್ರೀಗಳ ಪೀಠಾರೋಹಣದ ವರ್ಧಂತ್ಯೋತ್ಸವ ಸಮಾರಂಭ. ಬೆಳಿಗ್ಗೆ 6 ಗಂಟೆಯಿಂದ ಪ್ರಾರ್ಥನೆ, ಧರ್ಮಶಾಸ್ತನ ಅನುಜ್ಞೆ, ಮಹಾಗಣಪತಿ ಪೂಜೆ, ಪುಣ್ಯಾಹಃ ದೇವ ನಾಂದಿ ಋತ್ವಿಗರಣೆ, ಮಹಾಗಣಪತಿ ಹೋಮ, ನವಗ್ರಹ ಸಹಿತ ದುರ್ಗಾ ಹೋಮ, ಅಷ್ಟೋತ್ತರ ಶತಕುಂಭ ಕಲಶ ಸ್ಥಾಪನೆ ಜರುಗಲಿದೆ. ಬೆಳಿಗ್ಗೆ 8-30ಕ್ಕೆ ಕದಲಿ ಮಂಟಪದಲ್ಲಿ ರಾಜಪಲ್ಲಕ್ಕಿಯ ಮಹಾ ಪೂಜೆ, 9ಕ್ಕೆ ಹರಕೆ ತುಲಾಭಾರ ಸೇವೆ, 10 ಗಂಟೆಗೆ ಬ್ರಹ್ಮಕಲಶ ಸ್ಥಾಪನೆ, 10-30ಕ್ಕೆ ಕ್ಷೇತ್ರ ಗಣಗಳ ದೈವದರ್ಶನ ದೇವರ ಬೀಡಿಗೆ ಆಗಮನ, 11ಕ್ಕೆ ಬೀಡಿನಲ್ಲಿ ಶ್ರೀ ಆಭರಣ ಮತ್ತು ಪಟ್ಟದ ಆಯುಧಗಳ ಮಹಾಪೂಜೆ, 11-15ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಗೆ ಮಹಾಮಂಗಳಾರತಿ, 11-30ಕ್ಕೆ ಶ್ರೀಗಳಿಂದ ರಾಜಪಲ್ಲಕ್ಕಿಯಲ್ಲಿ ಸ್ವಾಮಿಯ ಪಾದುಕೆ ಪೂಜೆ, 11-45ಕ್ಕೆ ಭವ್ಯಾಕರ್ಷಣೆಯ ಶ್ರೀ ಆಭರೋಣತ್ಸವ ಮತ್ತು ಪರಿಹಾರ ದೈವಗಳೊಂದಿಗೆ ರಾಜಪಲ್ಲಕ್ಕಿಯ ಬೀಡಿಯನಿಂದ ಸನ್ನಿಧಾನಕ್ಕೆ ಭವ್ಯ ಮೆರವಣಿಗೆ, ಮಧ್ಯಾಹ್ನ 1 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉಯ್ಯಾಲೆ ಸೇವೆ, 1-15ಕ್ಕೆ ಕನಕಾಭಿಷೇಕ, 1-30ಕ್ಕೆ ಮಹಾಕಲಶ ಕುಂಭಾಭಿಷೇಕ, 1-45ಕ್ಕೆ ಮಹಾಮಂಗ ಳಾರತಿ ಮಧ್ಯಾಹ್ನ 3ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ಡಾ.ವಿಶ್ವಸಂತೋಷ ಭಾರತಿ ದಿವ್ಯ ಸಾನಿಧ್ಯ ವಹಿಸುವರು. ರಾಜಕೀಯ ಝೆಡ್ ಧಾರ್ಮಿಕ, ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.