ತೀರ್ಥಹಳ್ಳಿಯ ಗಿಫ್ಟ್ ಸೆಂಟರಿಗೆ ಬೆಂಕಿ: ಸುಟ್ಟು ಹೋದ ವಸ್ತುಗಳು!
– ನಾಲ್ಕು ಲಕ್ಷಕ್ಕೂ ಹೆಚ್ಚು ಮೊತ್ತದ ವಸ್ತು ಹಾನಿ
– ಖಂಡಿಲ್ ಮೋಟರ್ಸ್ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿ ಹರೇ ರಾಮ ಹರೇ ಕೃಷ್ಣ ಗಿಫ್ಟ್ & ಜ್ಯೂಸ್ ಸೆಂಟರ್ ನಲ್ಲಿ ಮಂಗಳವಾರ ರಾತ್ರಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 4 ಲಕ್ಷಕ್ಕೂ ಅಧಿಕ ಮೊತ್ತದ ವಸ್ತು ಹಾನಿಯಾಗಿವೆ. ಸಾಗರ ಬಸ್ ಸ್ಟ್ಯಾಂಡ್ ಸಮೀಪದ ಖಂಡಿಲ್ ಮೋಟರ್ಸ್ ಅಲ್ಲಿ ನಡೆದ ಘಟನೆ ಮಾಸುವ ಮುನ್ನ ಈ ಘಟನೆ ಸಂಭವಿಸಿದೆ. ಮಂಗಳವಾರ ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ನಂತರದಲ್ಲಿ ಶಾರ್ಟ್ ಸರ್ಕ್ಯುಟ್ ಆಗಿದ್ದು ಪಕ್ಕದಲ್ಲಿ ಇದ್ದ ಅಂಗಡಿಯವರು ಹೊಗೆ ಬರುವುದನ್ನು ಗಮನಿಸಿ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಅಕ್ಕ ಪಕ್ಕದ ಸ್ಥಳೀಯರು ಹಾಗೂ ಅಗ್ನಿಶಾಮಾಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಈ ನಡುವೆ ಎಲ್ಲೆಡೆ ಶಾರ್ಟ್ ಸರ್ಕ್ಯೂಟ್ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ತಾನೇ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಇದೇ ರೀತಿಯ ಒಂದು ಪ್ರಕರಣ ಸಂಭವಿಸಿತ್ತು, ಈ ರೀತಿಯ ಅನಾಹುತ ಆಗುವ ಮೊದಲು ಎಚ್ಚೆತ್ತುಕೊಂಡು ತಮ್ಮ ಅಂಗಡಿಗಳಲ್ಲಿ ವಿದ್ಯುತ್ ಸಂಪರ್ಕ ಸರಿಯಾಗಿ ಅಳವಡಿಸಿಕೊಳ್ಳಬೇಕೆಂದು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಈ ಮೂಲಕ ತಿಳಿಸಿದೆ.