Categories
ತೀರ್ಥಹಳ್ಳಿ

ತೀರ್ಥಹಳ್ಳಿಯಿಂದ ದತ್ತಪೀಠಕ್ಕೆ ಭಕ್ತರ ಭೇಟಿ

ತೀರ್ಥಹಳ್ಳಿಯಿಂದ ದತ್ತಪೀಠಕ್ಕೆ ಭಕ್ತರ ಭೇಟಿ
– 500ಕ್ಕೂ ಹೆಚ್ಚು ಮಂದಿ ದತ್ತ ಮಾಲೆ ಧಾರಣೆ
– ಮಾಲೆ ಧರಿಸಿದ ಹೆದ್ದೂರು ನವೀನ್
– ಕುಪ್ಪಳಿಯಲ್ಲಿ ಜ.3ಕ್ಕೆ ವಿವೇಕಯಾತ್ರೆ

NAMMUR EXPRESS NEWS
ತೀರ್ಥಹಳ್ಳಿ: ಚಿಕ್ಕಮಗಳೂರು ದತ್ತ ಪೀಠಕ್ಕೆ ಡಿ.26ರ ಮಂಗಳವಾರ ದತ್ತ ಮಾಲಾ ಅಭಿಯಾನ ನಿಮಿತ್ತ ರಾಜ್ಯದಾದ್ಯಂತ ಸಾವಿರಾರು ದತ್ತ ಭಕ್ತರು ದತ್ತ ಮಾಲೆ ಧರಿಸಿ ಭೇಟಿ ಕೊಡುತ್ತಿದ್ದು, ತೀರ್ಥಹಳ್ಳಿ ಕ್ಷೇತ್ರದ ಬೇರೆ ಬೇರೆ ಭಾಗದಿಂದ ಐನೂರು ಹೆಚ್ಚು ಸಂಖ್ಯೆಯಲ್ಲಿ ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ತೆರಳುತ್ತಿದ್ದಾರೆ. ತೀರ್ಥಹಳ್ಳಿಯ ಕುರುವಳ್ಳಿ ಕಾಶಿ ದೀಕ್ಷಿತರ ಸಮ್ಮುಖದಲ್ಲಿ, ಕುರುವಳ್ಳಿ ದೀಕ್ಷಿತರ ಮನೆಯ ಪಕ್ಕದ ಸೋಮೇಶ್ವರ ದೇವಸ್ಥಾನದಲ್ಲಿ, ಬಿಜೆಪಿ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ ಹೆದ್ದೂರು ನವೀನ್ ಭಕ್ತರೊಂದಿಗೆ ದತ್ತ ಮಾಲೆ ಧರಿಸಿ ದತ್ತ ಪೀಠಕ್ಕೆ ತೆರಳುತ್ತಿದ್ದಾರೆ. ನವೀನ್ ಜೊತೆ ಭಜರಂಗದಳದ ಮಹಾಂತ್, ತೂದೂರು ಪಂಚಾಯತ್ ಸದಸ್ಯ ಮಾಜಿ ಅಧ್ಯಕ್ಷ ಮದುರಾಜ್ ಹೆಗಡೆ, ಬಿಜೆಪಿ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಸ್ವಿ, ಕಡ್ತೂರು ಹಿರಿಯರಾದ ಶೇಷಾದ್ರಿ ದೀಕ್ಷಿತ್ ಕೂಡ ದತ್ತ ಪೀಠಕ್ಕೆ ತೆರಳುತ್ತಿದ್ದಾರೆ.

ಡಿ.26ರಂದು ವಿವೇಕಯಾತ್ರೆ!

ಸ್ವಾಮಿ ವಿವೇಕಾನಂದರು ಮತ್ತು ಅವರ ವಿಚಾರಧಾರೆಯನ್ನು ಕನ್ನಡನಾಡಿಗೆ ಪರಿಚಯಿಸಿದ ಕುವೆಂಪುರವರ ಕುರಿತಾದ “ವಿವೇಕಯಾತ್ರೆ”(ಕವಿಮನೆಯಲ್ಲಿ ಯುವ ಸಮಾಗಮ) ಯು 3 ಜನವರಿ 2024ರ ಬುಧವಾರ ಕುಪ್ಪಳ್ಳಿಯಲ್ಲಿ ಆಯೋಜನೆಗೊಂಡಿದೆ. ಇದರ ಪ್ರಯುಕ್ತ ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲಾ ಪದವಿ ಮತ್ತು ವೃತ್ತಿಪರ ಕಾಲೇಜುಗಳಲ್ಲಿ ೧.ಭಾಷಣ ೨.ಪ್ರಬಂಧ ೩.ರಸಪ್ರಶ್ನೆ ಸ್ಪರ್ಧೆಗಳು ನಡೆಯುತ್ತಿದೆ. ೪.ಪುಸ್ತಕ ಪರಿಚಯ ೫. ಚಾಗಿಯ ಹಾಡಿನ ಸಮೂಹ ಗಾಯನ ಸ್ಪರ್ಧೆಗಳು ಕುಪ್ಪಳ್ಳಿಯಲ್ಲಿ ನಡೆಯುತ್ತದೆ.

ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಂಗಾ ಕಾಲೇಜು, ವಾಗ್ಧೇವಿ ಬಿ.ಎಡ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಮತ್ತು ರಸಪ್ರಶ್ನೆ ಸ್ಪರ್ಧೆಗಳು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜನೆಗೊಂಡಿತ್ತು. ಮೂರೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ರಾಮಚಂದ್ರ ಹೊರಣೇಬೈಲುರವರು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯುತ ನುಡಿಗಳನ್ನಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದದವರಿಗೂ, ತೀರ್ಪುಗಾರರಿಗೂ, ಭಾಗವಹಿಸಿದ ವಿದ್ಯಾರ್ಥಿಗಳಿಗೂ ವಿವೇಕ ಯಾತ್ರೆ ಬಳಗವು ಧನ್ಯವಾದಗಳನ್ನು ತಿಳಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.