Categories
ತೀರ್ಥಹಳ್ಳಿ

ಮಲೆನಾಡಲ್ಲಿ ಮೊದಲ ಮಳೆಯ ಸಿಂಚನ!

ಮಲೆನಾಡಲ್ಲಿ ಮೊದಲ ಮಳೆಯ ಸಿಂಚನ!
– ಬಿಸಿಲಿನ ಧಗೆಗೆ ತಂಪೆರೆದ ಮಳೆ
– ಮಲೆನಾಡಿನ ಕೆಲವು ಕಡೆ ಮಳೆ ದರ್ಶನ

NAMMUR EXPRESS NEWS
ತೀರ್ಥಹಳ್ಳಿ: ಬಿಸಿಲಿನ ಬೇಗೆಗೆ ಕಂಗಾಲಾಗಿದ್ದ ಜನರಿಗೆ ಮಳೆರಾಯನ ಆಗಮನದಿಂದ ಕೊಂಚ ತಣ್ಣಗಾಗಿದೆ.
ಮಲೆನಾಡಿನ ಕೆಲವು ಭಾಗಗಳಲ್ಲಿ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಸಾಗರ, ಹೊಸನಗರ ಈ ಭಾಗದ ಎಲ್ಲಾ ಕಡೆಯೂ ಕೂಡ ಈ ವರ್ಷದ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮೊದಲ ಮಳೆ ಸಂಭ್ರಮ ನೀಡಿದ್ದು, ಕೆಲವೆಡೆ ಗುಡುಗು – ಸಿಡಿಲಿನ ಆರ್ಭಟದಿಂದ ಮಳೆಯಾಗಿದೆ, ರೈತರಿಗೆ ಸಾಕಷ್ಟು ನಿರಾಳ ಎನಿಸಿದೆ. ಬೇಸಿಗೆಯ ಬಿಸಿಲು ತಾಳಲಾರದೆ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿರುವ ಅಂತಹ ಎಲ್ಲರಿಗೂ ಮಳೆರಾಯ ತಂಪೆರೆದಿದ್ದಾನೆ. ಕರಾವಳಿ ಸೇರಿ ಮಲೆನಾಡಲ್ಲಿ ಯುಗಾದಿ ವರೆಗೂ ಮಳೆ ಇರಲಿದೆ ಎನ್ನಲಾಗಿದೆ.
ಕಿಗ್ಗಾ ಋಷ್ಯ ಶೃಂಗ ದೇವಾಲಯದಲ್ಲಿ ಮಹಾರುದ್ರಹೋಮದ ಪೂರ್ಣಾಹುತಿ ಬಳಿಕ ಶೃಂಗೇರಿಯಲ್ಲಿ ಅಬ್ಬರಿಸಿದ ಮಳೆ ಬಂದಿತ್ತು. ಬುಧವಾರ ಶೃಂಗೇರಿ ತಾಲೂಕಿನಾದ್ಯಂತ ವರ್ಷದ ಮೊದಲ ಮಳೆಯಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.