10 ಸಾವಿರ ಭಕ್ತರಿಗೆ ಅನ್ನದಾನ!
– ಶ್ರೀ ರಾಮೇಶ್ವರ ಅನ್ನದಾನ ಮಿತ್ರ ವೃಂದದ ಅನ್ನ ಸೇವೆ
– ಕ್ಯೂ ಅಲ್ಲಿ ನಿಂತು ಅನ್ನ ಪ್ರಸಾದ ಪಡೆದ ಭಕ್ತರು
– ಜಾತ್ರೆ ಅನ್ನದಾನಕ್ಕೆ ಭಕ್ತರ ಸಹಕಾರ ಬೇಕು
NAMMUR EXPRESS NEWS
ತೀರ್ಥಹಳ್ಳಿ: ಜಾತ್ರೆಯ ಮೊದಲ ದಿನವೇ ಸುಮಾರು 10,000ಕ್ಕೂ ಹೆಚ್ಚು ಮಂದಿ ಅನ್ನದಾನವನ್ನು ಸ್ವೀಕರಿಸಿದ್ದಾರೆ. ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಶ್ರೀ ರಾಮೇಶ್ವರ ಅನ್ನದಾನ ಮಿತ್ರ ವೃಂದ ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಅಡುಗೆಯ ತಯಾರಿ ಹಿಂದಿನ ರಾತ್ರಿಯಿಂದಲೇ ಶುರುವಾಗಿದ್ದು ನೆರೆದ ಅಷ್ಟೂ ಜನರಿಗೆ ಅನ್ನ ಪ್ರಸಾದ ವಿನಿಮಯ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಹೊರೆಕಾಣಿಕೆಯ ಮೂಲಕ ಗ್ರಾಮಸ್ಥರಿಂದ ಬಂದ ಕಾಣಿಕೆಯ ರೂಪದ ಬೇಳು, ಕಾಳು, ತರಕಾರಿ ಅಕ್ಕಿ ಎಲ್ಲವನ್ನೂ ಉಪಯೋಗಿಸುವ ಜೊತೆಗೆ ಉಳಿದ ವ್ಯವಸ್ಥೆಯನ್ನು ಹೊಂದಾಣಿಕೆಯೊಂದಿಗೆ ಯಾವುದೇ ಕುಂದು ಕೊರತೆಗಳಾಗದಂತೆ ನಡೆಸಿ ಕೊಡಲಾಗಿದೆ. ಅನ್ನದಾನಕ್ಕೆ ದಾನಿಗಳು, ಭಕ್ತರು ಸಹಕಾರ ನೀಡಬೇಕಿದೆ. ಹತ್ತಾರು ಮಂದಿ ಶ್ರೀ ರಾಮೇಶ್ವರ ಅನ್ನದಾನ ಮಿತ್ರರು ಕಳೆದ 14 ವರ್ಷದಿಂದ ಈ ಸೇವೆ ನಡೆಸಿಕೊಂಡು ಬಂದಿದ್ದಾರೆ.