ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅತಿ ಹೆಚ್ಚು ಅಂಗಡಿ!
– ರಥಬೀದಿ ತುಂಬಾ ಅಂಗಡಿಗಳ ಸಾಲು ಸಾಲು
– ಜನರಿಂದ ಖರೀದಿ ಶುರು: ಜಾತ್ರೆ ಸಡಗರ ಜೋರು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಎಳ್ಳಮಾವಾಸ್ಯೆ ಸಂಭ್ರಮ ಶುರುವಾಗಿದ್ದು, ಈಗ ಜಾತ್ರೆಯಲ್ಲಿ ಅಂಗಡಿಗಳ ಸಾಲು ಸಾಲು ಈ ಬಾರಿ ಹೆಚ್ಚಾಗಿದೆ. ಅಂಗಡಿಗಳಲ್ಲಿ ಜನ ಖರೀದಿಗೆ ಬೆಳ್ಳಂಬೆಳಗ್ಗೆ ಶುರು ಮಾಡಿದ್ದಾರೆ. ಇನ್ನು ಜಾತ್ರೆಯ ರಂಗು ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದ್ದು ಜಾತ್ರೆಗೆ ತೀರ್ಥಹಳ್ಳಿ ತಾಲೂಕು ಮಾತ್ರವಲ್ಲದೆ ಮಲೆನಾಡು ರಾಜ್ಯದ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದಾರೆ. ಇನ್ನು ಜಾತ್ರೆಯಲ್ಲಿ ವಿಶೇಷವಾಗಿ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.