Categories
ಅಪಘಾತ ತೀರ್ಥಹಳ್ಳಿ

ತೀರ್ಥಹಳ್ಳಿ ಹಿರೇಸರ ಬಳಿ ಹಿಟ್ ಅಂಡ್ ರನ್ನಿಗೆ ಮಹಿಳೆ ಬಲಿ!

ತೀರ್ಥಹಳ್ಳಿ ಹಿರೇಸರ ಬಳಿ ಹಿಟ್ ಅಂಡ್ ರನ್ನಿಗೆ ಮಹಿಳೆ ಬಲಿ!
– ಬೈಕಲ್ಲಿ ಹೋಗುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದ ಕಾರು
– ಸ್ಥಳದಲ್ಲಿ ಸಾವು, ಓರ್ವನಿಗೆ ಗಾಯ: ಚೇಸ್ ಮಾಡಿ ಕಾರು ಹಿಡಿದರು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಆರಗ ಹಿರೇಸರದ ಬಳಿ ಹಿಟ್ ಅಂಡ್ ರನ್ ಅಪಘಾತಕ್ಕೆ ಮಹಿಳೆ ಒಬ್ಬಳು ಬಲಿಯಾಗಿದ್ದಾಳೆ. ತೀರ್ಥಹಳ್ಳಿ ತಾಲ್ಲೂಕು ತನಿಕಲ್ ಗ್ರಾಮದ ಸ್ವಾಮಿ ಎಂಬವವರ ಪತ್ನಿ ಶುಭ ಎಂಬುವರ ಮೃತ ಮಹಿಳೆ. ತೀರ್ಥಹಳ್ಳಿಯಿಂದ ಕೋಣಂದೂರಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಾವೇರಿ ಮೂಲದ ಸ್ವಿಫ್ಟ್ ಕಾರ್ ಒಂದು ಏಕಾಏಕಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಈ ಸ್ಥಳದಲ್ಲಿ ಶುಭ ಗಂಭೀರ ಗಾಯಗೊಂಡು ಸಾವನಪ್ಪಿದ್ದಾರೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಪತಿ ಸ್ವಾಮಿ ಎಂಬುವವರಿಗೂ ಕೂಡ ಗಾಯಗೊಂಡಿದ್ದು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹಾವೇರಿ ಮೂಲದ ವ್ಯಕ್ತಿ ಸ್ವಿಫ್ಟ್ ಕಾರಲ್ಲಿ ಹಿಟ್ ಅಂಡ್ ರನ್ ಮಾಡಿದ್ದು ಈತ ಪರಾರಿಯಾಗಿದ್ದ ವೇಳೆ ಸಹ್ಯಾದ್ರಿ ಪಾಲಿಟೆಕ್ನಿಕ್ ಬಳಿ ಆತನನ್ನ ಸ್ಥಳೀಯರು ಹಿಡಿದಿದ್ದಾರೆ. ತೀರ್ಥಹಳ್ಳಿ ಪೊಲೀಸರು ರಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಶುಭ ಅವರಿಗೆ 47 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ, ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮಗನ ಬರ್ತ್ ಡೇ ಮಾಡಿ ಬಂದಿದ್ದರು!

ಮೂವರು ಮಕ್ಕಳು ಬೆಂಗಳೂರಿನಲ್ಲಿದ್ದು ಓರ್ವನ ಹುಟ್ಟು ಹಬ್ಬ ಆಚರಣೆ ಮಾಡಿ ಶುಕ್ರವಾರ ಊರಿಗೆ ವಾಪಾಸ್ ಆಗಿದ್ದರು. ಸ್ವಾಮಿ ಅವರು ಕಾಂಗ್ರೆಸ್ ಮುಖಂಡರಾಗಿದ್ದು ಉತ್ತಮ ಸೇವೆ ಸಲ್ಲಿಸುತ್ತಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.