Categories
ತೀರ್ಥಹಳ್ಳಿ

ಉತ್ತಮ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಏಕೆ?

ಉತ್ತಮ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಏಕೆ?
– ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿಯನ್ನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಂತೆ ಮಾಡಿದ ಉತ್ತಮ ಅಧಿಕಾರಿ ವಿರುದ್ಧ ಪ್ರತಿಭಟನೆ, ಕ್ರಮ ಸಮಂಜಸವಲ್ಲ
– ರಾಜಕೀಯ ಪ್ರೇರಿತ ಪ್ರತಿಭಟನೆಗೆ ಇಲಾಖೆ ಕ್ರಮ ಸರಿಯಲ್ಲ
– ಈಡಿಗ ಸಂಘದ ನಿರ್ದೇಶಕ ಹೊಸಮನೆ ಉಮೇಶ್ ಹೇಳಿಕೆ

NAMMUR EXPRESS NEWS
ಮಲೆನಾಡಿನವರಾಗಿ ಹಿಂದುಳಿದ ಸಮಾಜದಿಂದ ಬಂದು ತೀರ್ಥಹಳ್ಳಿಯಲ್ಲಿ ಶಿಕ್ಷಕರಾಗಿ ತಮ್ಮ ಉತ್ತಮ ಕಾರ್ಯ ನಿರ್ವಹಣೆಯಿಂದಲೇ ಪದೋನ್ನತಿ ಹೊಂದಿ,ಮೂಡಬಿದ್ರೆಯಲ್ಲಿ ಶಿಕ್ಷಣಧಿಕಾರಿಯಾಗಿ ಅಲ್ಲಿ ಎಲ್ಲರಿಂದಲೂ ಪ್ರಶಂಸೆ ಪಡೆದು, ಕಳೆದ 2 ವರ್ಷದ ಹಿಂದೆ ತೀರ್ಥಹಳ್ಳಿಗೆ ವರ್ಗಾವಣೆಗೊಂಡು ಕಳೆದ ವರ್ಷ ಜಿಲ್ಲೆಗೆ ಪ್ರಥಮ, ಈ ವರ್ಷ ತೀರ್ಥಹಳ್ಳಿಯನ್ನು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವಲ್ಲಿ ನಿರಂತರ ಶ್ರಮಿಸಿದ ಕ್ಷೇತ್ರ ಶಿಕ್ಷಣಧಿಕಾರಿ ಗಣೇಶ್ ವಿರುದ್ಧ ಪ್ರತಿಭಟನೆ ಹಾಗೂ ಅವರ ಮೇಲಿನ ಶಿಸ್ತು ಕ್ರಮ ಕ್ಷೇತ್ರದ ಶೈಕ್ಷಣಿಕ ಪ್ರಗತಿಗೆ ಅಡ್ಡಗಾಲು ಹಾಕಿದಂತೆ ಎಂದುಈಡಿಗ ಸಂಘದ ನಿರ್ದೇಶಕರು, ಯುವ ಮುಖಂಡರು ಆದ ಹೊಸಮನೆ ಉಮೇಶ್ ಆರೋಪಿಸಿದ್ದಾರೆ.
ಎಲ್ಲಾ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ರಷ್ಟಚಾರದ ಲವಶೇಷವೂ ಇಲ್ಲದೇ ಆಡಳಿತ ನಡೆಸುತ್ತಿರುವ ಗಣೇಶ್ ಅವರು ಸರ್ಕಾರಿ ವಾಹನ ಇರಲಿ ಇಲ್ಲದೇ ಇರಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಸಮಯದ ಮಿತಿ ಇಲ್ಲದೇ ನಿರಂತರ ಪ್ರವಾಸ ಮಾಡುತ್ತಾ ತಾಲೂಕನ್ನು ರಾಜ್ಯದಲ್ಲೇ ಮುಂದಿರುವಂತೆ ಮಾಡಿದ್ದಾರೆ ಎನ್ನುವುದು ಎಲ್ಲಾ ಶಿಕ್ಷಕರ ಶಾಲಾಭಿವೃದ್ಧಿ ಸಮಿತಿಯವರ ಅಭಿಪ್ರಾಯವಾಗಿದೆ,
ಸ್ಥಳೀಯ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು ಸಂಸದರು ಮಾತ್ರ ಇದ್ದ ಪಕ್ಷಾತೀತ ವೇದಿಕೆಯಲ್ಲಿ, ಶಿಕ್ಷಣಾಧಿಕಾರಿಯಾಗಿ ಕ್ಷೆತ್ರದ ಶಾಸಕರ ಸಂಸದರ ಸೂಚನೆ ಪಾಲಿಸುವ ಕರ್ತವ್ಯ ಮಾಡಿದ ಅಧಿಕಾರಿಗೂ ಬ್ಯಾಗ್ ವಿತರಣೆ ಕಾರ್ಯಕ್ರಮದ ಶಿಷ್ಟಚಾರಕ್ಕೂ ಏನೂ ಸಂಬದವಿಲ್ಲದೇ ಇದ್ದರೂ ರಾಜಕೀಯ ಕಾರಣಕ್ಕೆ ಒಬ್ಬ ಜನಸ್ನೇಹಿ, ಶಿಕ್ಷಕ ಸ್ನೇಹಿ,ಶಿಕ್ಷಣ ಪ್ರೇಮಿ ಅಧಿಕಾರಿಯ ವಿರುದ್ಧ ಪ್ರತಿಭಟಿಸುವುದು ಅವರ ವಿರುದ್ಧ ಕ್ರಮಕ್ಕೆ ಮುಂದಾಗುವುದು ಗಣೇಶರವರ ಸ್ನೇಹಿತರು, ಅಭಿಮಾನಿಗಳು,, ಅವರನ್ನು ಅಭಿಮಾನಿಸುವ ನೂರಾರು ಜನ ಶಿಕ್ಷಕ ಶಿಕ್ಷಕಿಯರ ಭಾವನೆಗಳಿಗೆ ನೋವು ಮಾಡಿದoತಾಗುತ್ತದೆ,
ಸರ್ಕಾರಿ ಶಾಲೆಯ ಬಡವರ ಮಕ್ಕಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಿಸುವುದರಲ್ಲೂ ರಾಜಕಾರಣ ಬೆರೆಸುವುದು,ಈ ಮೂಲಕ ಜನಪರವಾದ ಅಧಿಕಾರಿಯನ್ನು ಅವಮಾನಿಸುವುದು ಇಲಾಖೆಗೆ, ಸರ್ಕಾರಕ್ಕೆ,ರಾಜಕೀಯ ಪಕ್ಷಗಳಿಗೆ ಶೋಭೆ ತರುವ ವಿಚಾರ ಅಲ್ಲ ಎಂದು ಈಡಿಗ ಸಂಘದ ನಿರ್ದೇಶಕರಾದ ಹೊಸಮನೆ ಉಮೇಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ತಪ್ಪು ಮಾಡಿಲ್ಲವೇ..? ಸಣ್ಣ ಸಮುದಾಯದ ಅಧಿಕಾರಿಯ ಮೇಲೆ ರಾಜಕೀಯ ಪ್ರೇರಿತ ದಾಳಿ ಸರಿ ಅಲ್ಲ. ಇಂತಹ ಪ್ರಕರಣಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಉಮೇಶ್ ಹಾಗೂ ನೂರಾರು ಅಭಿಮಾನಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.