Categories
ಅಪಘಾತ ತೀರ್ಥಹಳ್ಳಿ

ಖಾಸಗಿ ಬಸ್-ಬೈಕ್ ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ಸಾವು!

ಖಾಸಗಿ ಬಸ್-ಬೈಕ್ ಡಿಕ್ಕಿ: ಸ್ಥಳದಲ್ಲಿಯೇ ಇಬ್ಬರ ಸಾವು!
– ಮಂಡಗದ್ದೆ ಫಿಶ್ ಹೋಟೆಲ್ ಬಳಿ ಅಪಘಾತ
– ಮಿತಿ ಮೀರಿದ ವೇಗ: ಪ್ರತಿ ದಿನ ಸಾವಿನ ಸರಣಿ!

NAMMUR EXPRESS NEWS
ತೀರ್ಥಹಳ್ಳಿ: ಖಾಸಗಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಫಿಶ್ ಹೋಟೆಲ್ ಬಳಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು 16 ನೇ ಮೈಲಿಕಲ್ಲಿನ ಬಳಿ ಭೀಕರ ಅಪಘಾತ ಸಂಭವಿಸಿದೆ. ಸಂಜೆ ಬೈಕ್​ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದ್ದು ಮೃತರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಅವರ ಬಳಿ ಯಾವುದೇ ವಿವರ ಸ್ಥಳೀಯರಿಗೆ ಸಿಕ್ಕಿಲ್ಲ.

ಬೈಕ್​ನಲ್ಲಿದ್ದವರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಸಹ್ಯಾದ್ರಿ ಬಸ್ ಬರುತ್ತಿತ್ತು. ಎದುರು ಬದುರಾಗಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಅಪಘಾತಕ್ಕೊಳಗಾದ ಬೈಕ್​ನ ನಂಬರ್​ ದಾವಣಗೆರೆ ರಿಜಿಸ್ಟ್ರೇಷನ್ ತೋರಿಸುತ್ತಿದ್ದು, KA 17EC 2519 ರಿಜಿಸ್ಟ್ರೇಷನ್​ನ ಗಾಡಿಯ ಹಿಂಬದಿಯಲ್ಲಿ ದೊಡ್ಮನೆ ಎಂದು ಬರೆಯಲಾಗಿದೆ. ಮೃತರ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.