ತೀರ್ಥಹಳ್ಳಿಯಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ಭಾಗ್ಯ!
– ಆರಗ ಅವರ ಅವಧಿಯಲ್ಲಿ 20 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ: ಅಗ್ನಿ ಶಾಮಕ ದಳ ಕಚೇರಿ, ನೂತನ ಪೊಲೀಸ್ ವಸತಿ ಗೃಹ
– ಗೃಹ ಸಚಿವ ಪರಮೇಶ್ವರ್, ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ
NAMMUR EXPRESS NEWS
ಸಂದೀಪನಿ ಶಾಲೆ ಮಕ್ಕಳಿಗೆ ವೈದ್ಯಕೀಯ ಪಾಠ..!ತೀರ್ಥಹಳ್ಳಿ: ಶತಮಾನದ ಬಳಿಕ ತೀರ್ಥಹಳ್ಳಿಯ ಹೃದಯ ಭಾಗ ರಥ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ನೂತನ ಪೊಲೀಸ್ ಠಾಣೆ, ಪೊಲೀಸ್ ವಸತಿ ಗೃಹಗಳ ಉದ್ಘಾಟನೆಯನ್ನು ಗೃಹ ಸಚಿವರಾದ ಜಿ.ಪರಮೇಶ್ವರ್ ನೆರವೇರಿಸಲಿದ್ದಾರೆ. ಡಿವೈಎಸ್ಪಿ, ಸಬ್ ಇನ್ಸೆಕ್ಟರ್ ಗಳಿಗೆ ವಸತಿ ನಿರ್ಮಾಣ ಮಾಡಲಾಗಿದ್ದು ಪೊಲೀಸ್ ಠಾಣೆಯ ಜೊತೆಗೆ ವಸತಿ ಗೃಹಗಳ ಉದ್ಘಾಟನೆ ಕೂಡ ಶನಿವಾರ ಸಂಜೆ 4 ಗಂಟೆಗೆ ಮಾಡಲಿದ್ದಾರೆ. ವಸತಿ ಗೃಹಗಳಿಗೆ ಶುಕ್ರವಾರ ಸಂಜೆ ಹೋಮ ಹವನಗಳು ನಡೆಯಲಿದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ಭಾಗಿಯಾಗಲಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಅವರ ಶ್ರಮದ ಫಲ
ಜುಲೈ 13ರ ಶನಿವಾರ ರಾಜ್ಯ ಸರ್ಕಾರದ ಗೃಹಸಚಿವರಾದ ಜಿ. ಪರಮೇಶ್ವರ್ ಅವರು ತೀರ್ಥಹಳ್ಳಿಗೆ ಆಗಮಿಸಿ 14.5 ಕೋಟಿ ವೆಚ್ಚದ ಪೊಲೀಸ್ ಠಾಣೆ, ಅಗ್ನಿ ಶಾಮಕ ಠಾಣೆ ಹಾಗೂ ಪೊಲೀಸ್ ವಸತಿ ಗೃಹದ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು,ತೀರ್ಥಹಳ್ಳಿ ಹಾಗೂ ಕೋಣಂದೂರು, ಸೀಬಿನಕೆರೆ ಹತ್ತಿರ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದೆ. ಒಟ್ಟು 20 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಜು. 13ರ ಸಂಜೆ ಉದ್ಘಾಟನೆ ಆಗಲಿದೆ ಎಂದಿದ್ದಾರೆ.
ಯಾವ ಕಾಮಗಾರಿಗೆ ಎಷ್ಟು ಹಣ?!
ರಥಬೀದಿಯಲ್ಲಿ 1929ರಲ್ಲಿ ಪೊಲೀಸ್ ಠಾಣೆ ಕಟ್ಟಲಾಗಿತ್ತು. ಬ್ರಿಟಿಷ್ ಕಾಲದಿಂದ ಠಾಣೆ ಹಾಗೆಯೇ ಇತ್ತು. ಶತಮಾನದ ನಂತರದಲ್ಲಿ ಮತ್ತೆ ಕಟ್ಟಡ ಕಟ್ಟಿದ್ದೇವೆ. ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಭಾಗದಲ್ಲಿ 48 ಪೊಲೀಸ್ ಸಿಬ್ಬಂದಿಗಳಿಗೆ ವಸತಿ ವಿಜಯ ಗೃಹ ನಿರ್ಮಾಣ ಮಾಡಲಾಗಿದೆ. 3 ಕೋಟಿ ರೂ. ವೆಚ್ಚದಲ್ಲಿ ರಥಬೀದಿಯಲ್ಲಿ ಪೊಲೀಸ್ ಠಾಣೆ ಹಾಗೂ 3 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಪೊಲೀಸ್ ಠಾಣೆ ನೀಡಲು ತೀರ್ಮಾನಿಸಿ ಅನುದಾನ ಬಿಡುಗಡೆ ಮಾಡಿದ್ದರು. ವಸತಿ ಗೃಹ ಮತ್ತು ಕಚೇರಿ ಇದೆರಡು ಚೆನ್ನಾಗಿದ್ದರೆ ಪೊಲೀಸ್ ಅಧಿಕಾರಿಗಳು ಉತ್ಸಾಹದಿಂದ ಕೆಲಸ ಮಾಡಬಹುದು ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥ್ ಗೌಡ ಸೇರಿ ರಾಜ್ಯಮಟ್ಟದ ಅಧಿಕಾರಿಗಳು ಇರಲಿದ್ದಾರೆ.ತಹಶೀಲ್ದಾರ್ ಜಕ್ಕಣ್ಣ ಗೌಡರ್, ಡಿವೈಎಸ್ಪಿ ಗಜಾನನ ವಾಮನ ಸುತಾರ, ಸರ್ಕಲ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ, ಆಗುಂಬೆ ಇನ್ಸ್ಪೆಕ್ಟರ್ ಶ್ರೀಧರ್, ಅಗ್ನಿಶಾಮಕ ದಳದ ಮಹಾಲಿಂಗಪ್ಪ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಶೈಲಾ ಸೇರಿದಂತೆ ಪೊಲೀಸ್, ಅಗ್ನಿ ಶಾಮಕ ದಳ, ತಾಲೂಕು ಆಡಳಿತದ ಸಿಬ್ಬಂದಿ ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ್ದಾರೆ.
ಎಸಿಸಿ ಸಂಸ್ಥೆಯಿಂದ ಗುಣ ಮಟ್ಟದ ಕಾಮಗಾರಿ
ತೀರ್ಥಹಳ್ಳಿ ಸೇರಿ ಮಲೆನಾಡಿನ ಪ್ರಸಿದ್ಧ ಗುತ್ತಿಗೆದಾರರು ಹಾಗೂ ಕನ್ಸ್ಟ್ರಕ್ಷನ್ ಸಂಸ್ಥೆ ಎಸಿಸಿ ಕನ್ಸ್ಟ್ರಕ್ಷನ್ ಸಂಸ್ಥೆ ಈ ಎಲ್ಲಾ ಕಟ್ಟಡ ನಿರ್ಮಾಣ ಮಾಡಿದೆ. ಎಸಿಸಿ ಕೃಷ್ಣಮೂರ್ತಿ ಇದರ ಉಸ್ತುವಾರಿ ಹೊತ್ತಿದ್ದಾರೆ.
