ತೀರ್ಥಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕ,ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಉದ್ಘಾಟನೆ
– ಅರ್ಚಕರ ನಿವೃತ್ತಿ ವಯೋಮಿತಿ ಏರಿಕೆಗೆ ಒತ್ತಾಯ
– ತೀರ್ಥಹಳ್ಳಿ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟ (ರಿ)., ಬೆಂಗಳೂರು, ತೀರ್ಥಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕ -ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಉದ್ಘಾಟನೆ ಮತ್ತು ಗುರುತಿನ ಪತ್ರ ವಿತರಣಾ ಸಮಾರಂಭವನ್ನು 18-06-2025, ಗಾಯತ್ರೀ ಮಂದಿರ ತೀರ್ಥಹಳ್ಳಿಯಲ್ಲಿ ನೆರವೇರಿತು.
– ಮುಜರಾಯಿ ದೇವಾಲಯಗಳ ಅರ್ಚಕರ ಬೇಡಿಕೆ ಏನೇನು?
ಮುಜರಾಯಿ ದೇವಾಲಯಗಳ ಅರ್ಚಕರನ್ನು 60 ವರ್ಷಕ್ಕೆ ನಿವೃತ್ತಿ ಮಾಡುವ ಇಲಾಖೆ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿರುವ ಪರಿಣಾಮ ಮುಜರಾಯಿ ದೇವಾಲಯಗಳ ಪೂಜಾ ಕೈಂಕರ್ಯಗಳು ಸಾರಗವಾಗಿ ನಡೆಯುತ್ತಿವೆ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕರ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಹೇಳಿದರು. ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾದಿವಂತರ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಇಲ್ಲದ ಈ ನಿಯಮವನ್ನು ಸಡಿಲಿಸಿ ಅರ್ಚಕರ ನಿವೃತ್ತಿ ವಯೋಮಿತಿಯನ್ನು 90 ವರ್ಷಗಳಿಗೆ ಏರಿಸಬೇಕು ಹಾಗೂ ತಂದೆಯ ವೃತ್ತಿಯನ್ನು ಮಗನಿಗೇ ನೀಡಬೇಕು ಎಂದು ಒತ್ತಾಯಿಸಿದರು. ದೇವಸ್ಥಾನಗಳ ನಿರ್ವಹಣೆಯನ್ನು ಸಾರ್ವಜನಿಕರಿಗೆ ನೀಡಬೇಕು ಎನ್ನುವುದು ಅರ್ಥಹೀನ ಮಠಾಧೀಶರೊಬ್ಬರು 36 ಸಾವಿರ ದೇವಸ್ಥಾನಗಳನ್ನು ತಮ್ಮ ಮಠಕ್ಕೆ ವಹಿಸಿಕೊಡುವಂತೆ ಕೇಳುತ್ತಿರುವುದು ಆಶ್ಚರ್ಯದ ಸಂಗತಿ. ಅಂತಹ ಸ್ಥಿತಿ ಬಂದರೆ ಹೋರಾಟ ಅನಿವಾರ್ಯವಾಗಲಿದೆ. ಅರ್ಚಕರಲ್ಲಿ ಒಗ್ಗಟ್ಟು ಅಗತ್ಯ. ಯಾವ ಕಾರಣಕ್ಕೂ ವ್ಯಾಜ್ಯವನ್ನು ನ್ಯಾಯಾಲಯಕ್ಕೆ ಒಯ್ಯಬೇಡಿ ಎಂದರು. ಹಾಲಿ ಸರ್ಕಾರ ಅರ್ಚಕ ಸಮುದಾಯದ ಹಿತದೃಷ್ಟಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಸೇರಿ ಹಲವು ಸವಲತ್ತು ನೀಡಿದೆ. ಇದಕ್ಕೆ ಈವರೆಗೂ ರಾಜ್ಯಪಾಲರ ಅನುಮತಿ ದೊರೆತಿಲ್ಲ. ಈ ಬಗ್ಗೆ ರಾಜ್ಯಪಾಲರ ಮನವೊಲಿಸುವಂತೆ ಪ್ರತಿಪಕ್ಷದ ಮುಖಂಡರಿಗೂ ಮನವಿ ಮಾಡಲಾಗಿದೆ. ಭೂ ಸುಧಾರಣೆ ಕಾಯ್ದೆ ಜಾರಿಯಾದ ನಂತರದಲ್ಲಿ ಅರ್ಚಕರ ಸಮುದಾಯದ ಜೀವನ ನಿರ್ವಹಣೆ ಸಂಕಷ್ಟದಲ್ಲಿದೆ. ಕಳೆದುಕೊಂಡಿರುವ ಭೂಮಿ ಬಗ್ಗೆ ಪರಿಹಾರ ದೊರಕಿಸಿಕೊಡುವಂತೆ ಪ್ರಧಾನಿ ಅವರ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದರು. ಗುರುತಿನ ಚೀಟಿ ಮುದ್ರಿಸಿಕೊಟ್ಟ ಶಂಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪ್ರಾಸ್ತಾವಿಕ ನುಡಿಯನ್ನು ಕೆ ಎಲ್ ರಾಘವೇಂದ್ರ ಭಟ್,ಅಧ್ಯಕ್ಷರು, ತೀರ್ಥಹಳ್ಳಿ ತಾ। ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕರ ಒಕ್ಕೂಟ. ಮುಖ್ಯ ಅತಿಥಿಗಳಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ವೇ||ಬ್ರ|| ಕೆ.ಎಸ್.ಎನ್. ದೀಕ್ಷಿತರು. ಕಾರ್ಯದರ್ಶಿಗಳು, ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕರ ಒಕ್ಕೂಟ, ಬೆಂಗಳೂರು. ಹಾಗೂ ವೇ|ಬ್ರ|| ಶ್ಯಾಮಸುಂದರ ದೀಕ್ಷಿತರು, ಸಹ ಕಾರ್ಯದರ್ಶಿಗಳು, ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕರ ಒಕ್ಕೂಟ, ಬೆಂಗಳೂರು. ಸತ್ಯಮೂರ್ತಿ ತಾಲೂಕು ಆಫೀಸ್ ಉಪ ತಹಸೀಲ್ದಾರ್, ಮೃಗಾವಧೆ ದರ್ಶನ್ ಬಾಯರ್ ನಿರೂಪಣೆಯನ್ನು, ಸ್ವಾಗತವನ್ನು ವಿದ್ಯಾಶಂಕರ ಭಟ್, ವಂದನಾರ್ಪಣೆಯನ್ನು ಮುರಳೀಧರ ಭಟ್ ಇವರು ಈ ಕಾರ್ಯಕ್ರಮದಲ್ಲಿ ಆಗಮಿಸಿದ್ದರು.
