ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅದ್ದೂರಿಯಾಗಿ ಆಚರಣೆ!
– ವೀರೇಶ್ ವಿಕ್ಟರ್ ಮೊರಾಸ್ ರವರು ಹಾಗೂ ವೇದಿಕೆಯಲ್ಲಿರುವ ಗಣ್ಯರಿಂದ ಉದ್ಘಾಟನೆ!
– ಮಹಿಳಾ ಸಬಲೀಕರಣ ಹಾಗೂ ಮಹಿಳಾ ಅಭಿವೃದ್ಧಿಯ ಬಗ್ಗೆ ವಿಶೇಷ ಉಪನ್ಯಾಸ
NAMMUR EXPRESS NEWS
ತೀರ್ಥಹಳ್ಳಿ: ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಹಾಗೂ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತೀರ್ಥಹಳ್ಳಿ ಇವರ ಸಹಯೋಗದದಲ್ಲಿ ಯುನಿಟಿ ಹಾಲ್ ಚರ್ಚ್ ಆವರಣ, ತೀರ್ಥಹಳ್ಳಿಯಲ್ಲಿ ಗುರುವಾರದಂದು ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ವೀರೇಶ್ ವಿಕ್ಟರ್ ಮೊರಾಸ್ ರವರು ಹಾಗೂ ವೇದಿಕೆಯಲ್ಲಿರುವ ಗಣ್ಯರು ಉದ್ಘಾಟನೆ ಮಾಡಿದರು.
ಪ್ರಶಾಂತಿ ಚಿಕಿತ್ಸಾಲಯದ ಆಪ್ತ ಸಮಾಲೋಚಕಾರದ ವಿನುತ ಮುರಳೀಧರ ಅವರು ಮಹಿಳಾ ಸಬಲೀಕರಣ ಹಾಗೂ ಮಹಿಳಾ ಅಭಿವೃದ್ಧಿಯ ಬಗ್ಗೆ ವಿಶೇಷ ಉಪನ್ಯಾಸ ಮಾಡಿದರು. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್.ಎಮ್.ಎಸ್.ಎಸ್.ಎಸ್ ನ ನಿರ್ದೇಶಕರಾದ ಫಿಯೂಸ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು. ವೀರೇಶ್ ವಿಕ್ಟರ್ ಮೊರಾಸ್, ಮಿಲ್ಟನ್ ಸೋಜ, ವಿನುತ ಮುರುಳೀಧರ, ಸಿಸ್ಟರ್ ಅನ್ನಿ, ಮೋಕ್ಷಾರಾಕಿಣಿ, ರೇಣುಕಾ, ಸುರೇಖ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಿತಾ ನಿರೂಪಿಸಿದರು, ಚೈತ್ರ ಸ್ವಾಗತಿಸಿದರು ಹಾಗೂ ಆಶಾ ವಂದಿಸಿದರು.
