ಪುನೀತ್ ರಾಜಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಆಚರಣೆ
– ಬೆಟ್ಟಮಕ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆಚರಣೆ
– ಕ.ರ.ವೇ ತಾಲೂಕು ಅಧ್ಯಕ್ಷರಾದ ಸುರೇಂದ್ರ ಯಡೂರ್ ಹಾಗೂ ಹಲವು ಸಂಘದ ಪ್ರಮುಖರು ಭಾಗಿ
NAMMUR EXPRESS NEWS
ತೀರ್ಥಹಳ್ಳಿ : ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರತ್ನ ದಿವಂಗತ ಡಾ ಪುನೀತ್ ರಾಜಕುಮಾರ್ ಅವರ 50 ನೇ ವರ್ಷದ ಜನ್ಮದಿನಾಚರಣೆಯನ್ನು ಬೆಟ್ಟಮಕ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಯಶಸ್ವಿಯಾಗಿ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕ.ರ.ವೇ ತಾಲೂಕು ಅಧ್ಯಕ್ಷರಾದ ಸುರೇಂದ್ರ ಯಡೂರು, ಗೌರವ ಅಧ್ಯಕ್ಷರಾದ ಮಲ್ಲಕ್ಕಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾದ ವಿಕ್ರಂ ಶೆಟ್ಟಿ, ಯುವ ಘಟಕದ ಅಧ್ಯಕ್ಷರಾದ ಶ್ರೀಕಾಂತ್ ಬೆಟ್ಟಮಕ್ಕಿ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ದಿಲೀಪ್, ನಗರ ಮಹಿಳಾ ಘಟಕ ಅಧ್ಯಕ್ಷರಾದ ವಿಜಯ ಪದ್ಮನಾಬ್, ಸದಸ್ಯರಾದ ಗಗನ್ ದೇವಾಡಿಗ, ಪಟ್ಟಣ ಪಂಚಾಯತ್ ಸದಸ್ಯರುಗಳಾದ ರತ್ನಾಕರ್ ಶೆಟ್ಟಿ ದತ್ತಣ್ಣ, ಯತಿರಾಜ್ ಗೌಡ ಹಾಗೂ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
