Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹಲಸು ಮತ್ತು ಹಣ್ಣು ಮೇಳ

ತೀರ್ಥಹಳ್ಳಿಯಲ್ಲಿ ಹಲಸು ಮತ್ತು ಹಣ್ಣು ಮೇಳ
– ಮಾಧವ ಮಂಗಲ ಸಭಾಭವನದಲ್ಲಿ ಜುಲೈ 25 – 27 ರವರೆಗೆ ಮೇಳ
– ಹಲಸಿನ ಹಣ್ಣು, ಹಣ್ಣಿನ ವಿವಿಧ ತಿನಿಸುಗಳು, ಖಾದ್ಯಗಳು ಲಭ್ಯ
– ರಾಜ್ಯದ ವಿವಿಧ ಭಾಗದ ಹಲಸು, ಹಲಸಿನ ಗಿಡ ನೋಡಬಹುದು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ಜುಲೈ 25 ರಿಂದ 27 ರವರೆಗೆ ತುಂಗಾ ತೀರದ ಮಾಧವ ಮಂಗಲ ಸಭಾಭವನದಲ್ಲಿ 3 ದಿನಗಳ ಕಾಲ ಹಲಸು ಮೇಳ ನಡೆಯಲಿದೆ.
ಹಲಸು ಮೇಳದಲ್ಲಿ ಹಲಸಿನ ಹಣ್ಣು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡಲಾಗುತ್ತಿದೆ. ಹಣ್ಣುಗಳು, ವಿವಿಧ ತಳಿಗಳು, ಮತ್ತು ಹಲಸಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ.
ಟೀಂ ಕುಂದಾಪುರ ಇದರ ಆಯೋಜನೆ ಮಾಡಿದ್ದು, ರಾಜ್ಯ ಮಟ್ಟದ ಹಲಸು ಮೇಳ ಇದಾಗಿದ್ದು, ರಾಜ್ಯದ ವಿವಿಧ ಕಡೆಯಿಂದ ಹಲಸು ತಳಿಗಳ ವಿವಿಧ ಹಣ್ಣುಗಳು ಪ್ರದರ್ಶನಕ್ಕೆ ಬರಲಿವೆ.
ಹಲಸಿನ ಹಣ್ಣು ಮತ್ತು ಮಾವಿನ ವಿವಿಧ ತಿನಿಸುಗಳು, ಖಾದ್ಯಗಳು ಲಭ್ಯ ಇರಲಿವೆ. ಹಲಸಿನ ಹಣ್ಣಿನ ದೋಸೆ ಕೂಡ ಇರಲಿದೆ.
ಮಲೆನಾಡಲ್ಲಿ ಇದು ಮೊದಲ ಪ್ರದರ್ಶನವಾಗಿದ್ದು, ಹಲಸು ಮೇಳದಲ್ಲಿ ಹಲಸಿನಿಂದ ತಯಾರಿಸಿದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಾದ ಐಸ್ ಕ್ರೀಂ, ಚಿಪ್ಸ್, ಜಾಮ್, ಸ್ಕ್ವಾಷ್ ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ನೀವು ಕೂಡ ಒಮ್ಮೆ ಭೇಟಿ ಕೊಟ್ಟು ಹಲಸಿನ ಹಣ್ಣಿನ ವಿವಿಧ ಖಾದ್ಯಗಳನ್ನು ಸವಿಯಬಹುದು.

ಸ್ಟಾಲ್ ಹಾಕಲು ಮತ್ತು ಮೇಳದ ಮಾಹಿತಿಗಾಗಿ ಸಂಪರ್ಕಿಸಿ : +91 89708 26441

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.