ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದ ಜಗ್ಗಣ್ಣ!
– ಜನ್ಮ ದಿನದ ಸಂಭ್ರಮದಲ್ಲಿ ಶಿಷ್ಯ ವರ್ಗದ ಅಚ್ಚು ಮೆಚ್ಚಿನ ಮಾಸ್ಟರ್
– ತೀರ್ಥಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ರಾಜ್ಯಕ್ಕೆ ಅನೇಕ ರ್ಯಾಂಕ್ ಹೆಮ್ಮೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನಲ್ಲಿ ಸಾವಿರಾರು ಮಂದಿಗೆ ವಿದ್ಯಾ ದಾನ ಮಾಡಿರುವ ವಾಗ್ದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರೂ ಆದ ಜಗದೀಶ್ ( ಜಗ್ಗಣ್ಣ) ಅವರ ಜನ್ಮ ದಿನವನ್ನು ಅವರ ಸಾವಿರಾರು ಶಿಷ್ಯರು ಸಂಭ್ರಮದಿಂದ ಶುಭ ಕೋರಿ ಆಚರಣೆ ಮಾಡಿದರು.
ಮಲೆನಾಡ ಶಿಕ್ಷಣ ಕ್ಷೇತ್ರಕ್ಕೆ ಜಗದೀಶ್ ಅವರ ಕೊಡುಗೆ ಅಪಾರ.
ತೀರ್ಥಹಳ್ಳಿಯ ಸತ್ಪಥ ಎಜುಕೇಶನ್ ಫೌಂಡೇಶನ್ ಸಂಸ್ಥಾಪಕರಾಗಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆಗೆ ಬದುಕಿನ ಪಾಠವನ್ನು ಕಲಿಸಿರುವಂತಹ ಮೇಷ್ಟ್ರಿಗೆ ಅಭಿನಂದನೆಗಳು.ಜಗದೀಶ್ ಅವರು ತುಂಗಾ ಮಹಾವಿದ್ಯಾಲಯದಲ್ಲಿ ದೈಹಿಕ ನಿರ್ದೇಶಕರಾಗಿ ಬಳಿಕ ವಾಗ್ದೇವಿ ಸಂಸ್ಥೆಯನ್ನು ಶುರು ಮಾಡಿ, ಅತ್ಯುತ್ತಮ ಗುಣಮಟ್ಟದ ಕರಾವಳಿ ಹಾಗೂ ರಾಜ್ಯಮಟ್ಟದ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಮೂಲಕ ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣದಲ್ಲಿ ಪ್ರತಿಶತ ನೂರರ ಫಲಿತಾಂಶವನ್ನು ದಾಖಲು ಮಾಡುವ ಜೊತೆಗೆ ರಾಜ್ಯಕ್ಕೆ ಅನೇಕ ರ್ಯಾಂಕ್ ಗಳನ್ನು ಪ್ರತಿ ವರ್ಷ ನೀಡುತ್ತಿದೆ.ತೀರ್ಥಹಳ್ಳಿಯ ಶಿಕ್ಷಣ ಕ್ಷೇತ್ರದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಆಧುನಿಕ ಶಿಕ್ಷಣ, ಗುಣಮಟ್ಟದ ಶಿಕ್ಷಣ ಹಾಗೂ ಶಿಸ್ತು, ಸಂಯಮಕ್ಕೆ ಜಗದೀಶ್ ಇನ್ನೊಂದು ಹೆಸರು. ಇವರ ಜೀವನ ಪಾಠ ಇವರ ಶಕ್ತಿಯುತ ನಿಲುವಿನ ಕಾರಣ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಅದೇ ರೀತಿಯಾದ ಕಟ್ಟುನಿಟ್ಟಿನ ಜೀವನ ಶೈಲಿ ಅಳವಡಿಸಿಕೊಂಡು ಸಾಧನೆ ಪಥದಲ್ಲಿ ಮುನ್ನಡೆಯುತ್ತಿದ್ದಾರೆ.
ತೀರ್ಥಹಳ್ಳಿಯಲ್ಲಿ ಎಲ್ ಕೆಜಿ, ಯುಕೆಜಿಯಿಂದ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಪಿಯು ಶಿಕ್ಷಣದ ಜೊತೆಗೆ ಬಿ ಎಡ್ ಶಿಕ್ಷಣವನ್ನು ಶುರು ಮಾಡಿರುವ ಹೆಗ್ಗಳಿಕೆ ಇವರದು. ಹೀಗಾಗಿ ತೀರ್ಥಹಳ್ಳಿ ಶಿಕ್ಷಣ ಕ್ಷೇತ್ರದಲ್ಲಿ ಇವರ ಸಾಧನೆ ಅಮೂಲ್ಯವಾದುದು.ಜಗ್ಗಣ್ಣ ಅವರ ಮಾರ್ಗದರ್ಶನದಲ್ಲಿ ಓದಿದ ನೂರಾರು ಮಕ್ಕಳು ಇಂದು ರಾಜ್ಯ, ದೇಶ, ವಿದೇಶದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ. ಸಾಧಕರಾಗಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಅನೇಕರಿಗೆ ಗುರು!
ಮಲೆನಾಡ ಹೆಮ್ಮೆಯ ಕಾಲೇಜು ತುಂಗಾ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳನ್ನು ರಾಜ್ಯ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನಾಗಿ ಮಾಡಿರುವ ಹೆಮ್ಮೆ ಕೂಡ ಇವರದು. ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
– ನಮ್ಮೂರ್ ಎಕ್ಸ್ ಪ್ರೆಸ್
ಮಲೆನಾಡು
