ಮುತ್ತೂರು ಹೋಬಳಿ ಎಸ್.ಎನ್. ಜಿ.ವಿ ಅಧ್ಯಕ್ಷರಾಗಿ ಕುಪ್ಪಳಿ ಸುಧಾಕರ್
– ಜಿಲ್ಲಾ, ತಾಲೂಕು ಪ್ರಮುಖರ ನೇತೃತ್ವದಲ್ಲಿ ಸಂಘಟನೆಯ ನೂತನ ಸಮಿತಿ ಆಯ್ಕೆ
– ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸುಮಾ ಆಯ್ಕೆ
ಭರತ ನಾಟ್ಯದಲ್ಲಿ ವಿಶ್ವ ದಾಖಲೆ: ದೀಕ್ಷಾಗೆ ಗೌರವ ಸಮರ್ಪಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಮುಖ ಸಂಘಟನೆಯಲ್ಲಿ ಒಂದಾದ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಮುತ್ತೂರು ಹೋಬಳಿ ಸಂಘಟನೆಯ ಅಧ್ಯಕ್ಷರಾಗಿ ಕುಪ್ಪಳಿ ಸುಧಾಕರ್ ಆಯ್ಕೆ ಆಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಕೊಲ್ಗರ್, , ಸಂಘಟನಾ ಕಾರ್ಯದರ್ಶಿಯಾಗಿ ನಯನ ಕಟ್ಟೆ ಹಕ್ಕಲು, ಕೃಷ್ಣಪ್ಪ ಇಂಗ್ಲಾದಿ, ಪ್ರಮೋದ್ ಇವರು ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಚನ್ನಕೇಶವ ದೇವಂಗಿ, ಸಹ ಕಾರ್ಯದರ್ಶಿಯಾಗಿ ನಾಗರಾಜ್ ಹೆದ್ದೂರು, ಖಜಾಂಚಿಯಾಗಿ ರಾಘವೇಂದ್ರ ಹೆದ್ದೂರು, ಉಪಾಧ್ಯಕ್ಷರಾಗಿ ಸುಬ್ರಮಣ್ಯ ಹೆದ್ದೂರು, ಸುರೇಶ್ ಕಟ್ಟೆ ಹಕ್ಕಲು, ಪ್ರೀತಮ್ ದೇವಂಗಿ, ರಂಜಿತ್ ಬೆಂಡೆಕೊಪ್ಪ, ಕೃಷ್ಣಮೂರ್ತಿ ಹೊಳೆಕೊಪ್ಪ, ಸತ್ಯನಾರಾಯಣ್ ಹೆದ್ದೂರು ಇವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ನಿರ್ದೇಶಕರಾಗಿ ಉಮೇಶ್ ಮುಂಡುವಳ್ಳಿ, ಪ್ರಶಾಂತ್ , ಪ್ರಶಾಂತ್ ಬೆಂಡೆಕೊಪ್ಪ, ಚಂದ್ರಶೇಖರ್ ಬಿಸಿಲು ಮನೆ, ಸಂದೀಪ್ ಶಾಂತಿಕೆರೆ, ದೇವರಾಜ್ ಕೊಲ್ಗರ್, ಲೋಕೇಶ್ ಹೆದ್ದೂರು, ನಿತಿನ್ ಕೆರೆಕೇರಿ, ಪ್ರವೀಣ್ ಹಂಗರತಳ, ಸುರೇಶ್ ಹೆದ್ದೂರು, ಅವಿನಾಶ್ ಶಾಂತಿಕೆರೆ ಇವರು ಮುತ್ತೂರು ಹೋಬಳಿ ಸಂಘಟನೆಯ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷರಾದ ಅನಿಲ್ ನಡೆಸಿಕೊಟ್ಟರು. ರಾಜ್ಯ ಕಾರ್ಯದರ್ಶಿಯಾಗಿರುವ ಮುಡುಬ ರಾಘವೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಿವು ಹೊದಲ, ಜಿಲ್ಲಾ ಉಪಾಧ್ಯಕ್ಷರಾಗಿರುವ ತೆಂಕಬೈಲು ಲೊಕೇಶ, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿರುವ ಗೀತಾ ರಾಘವೇಂದ್ರ,, ತಾಲೂಕು ಅಧ್ಯಕ್ಷ ರಾಗಿರುವ ವಿಶಾಲ್ ಕುಮಾರ್,, ತಾಲೂಕು ಮಹಿಳಾ ಅಧ್ಯಕ್ಷರಾಗಿರುವ ಶಾಲಿನಿ ನಾಗರಾಜ್ ಹಾಗೂ ಕಟ್ಟೆ ಹಾಕ್ಲಿನ ಗಣಪತಿ ದೇವಸ್ಥಾನದ ನಿರ್ದೇಶಕರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಶಾರದಾ, ಸಹಕಾರ ನಾಯಕರಾದ ಕಬಸೆ ವಿಕ್ರಮ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲೋಕೇಶ್, , ಈಡಿಗ ಸಂಘದ ನಿರ್ದೇಶಕರಾದ ಸುರೇಶ, ಮುತ್ತೂರು ಹೋಬಳಿಯ ಗೌರವಧ್ಯಕ್ಷರಾದ ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುತ್ತೂರು ಹೋಬಳಿಯ ಮಹಿಳಾ ಅಧ್ಯಕ್ಷರಾಗಿ ಸುಮಾ ಆಯ್ಕೆಯಾದರು. ತಾಲೂಕಿನ ಪ್ರಧಾನ ಕಾರ್ಯದರ್ಶಿಯಾಗಿರುವ ದಿನೇಶ್ ಯಡೂರು ಸ್ವಾಗತಿಸಿ,ವಂದನಾರ್ಪಣೆಯನ್ನು ಬೆಂಡೆಕೊಪ್ಪ ಸುಬ್ರಹ್ಮಣ್ಯ ನೆರವೇರಿಸಿದರು.
ಭರತ ನಾಟ್ಯದಲ್ಲಿ ವಿಶ್ವ ದಾಖಲೆ: ದೀಕ್ಷಾಗೆ ಗೌರವ ಸಮರ್ಪಣೆ
– ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಸನ್ಮಾನ
ಭರತ ನಾಟ್ಯ ದಲ್ಲಿ ಸತತ 216 ಗಂಟೆ ನಾಟ್ಯ ಮಾಡಿ ವಿಶ್ವ ದಾಖಲೆ ಮಾಡಿರುವ ಸಾಧಕಿ ವಿದೂಷಿ ದೀಕ್ಷಾ ರಾಹುಲ್ ರವರ ಅಭೂತಪೂರ್ವ ಸಾಧನೆ ಗುರುತಿಸಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಂಘಟನೆ ವತಿಯಿಂದ ಬ್ರಹ್ಮಾವರ ನಾರಾಯಣ ಗುರು ಸಭಾ ಭವನದಲ್ಲಿ *
ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದಿಸಿ, ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ರಾಜ್ಯ ಉಪಾಧ್ಯಕ್ಷರಾದ ಅಚ್ಚುತ್ ಅಮೀನ್ ಕೋಟ್ಯನ್, ರಾಜ್ಯ ಕಾರ್ಯಧ್ಯಕ್ಷ ಮುಡುಬ ರಾಘವೇಂದ್ರ, ಉಡುಪಿ ಜಿಲ್ಲಾ ಅಧ್ಯಕ್ಷರಾದ ಜಗನಾಥ್ ಕೋಟ್ಯನ್, ಸಂದೀಪ್ ಪಂಪವೆಲ್,ತೀರ್ಥಹಳ್ಳಿ ತಾ ಅಧ್ಯಕ್ಷರು ವಿಶಾಲ್ ಕುಮಾರ್. ಹೊಸನಗರ ತಾ ಅಧ್ಯಕ್ಷರು ಲಯನ್ ಹೆಚ್ ವಾಸಪ್ಪ ಮಾಸ್ತಿಕಟ್ಟೆ, ದಿನೇಶ್ ಯಡೂರ್, ಪೂರ್ಣೇಶ್ ಪೂಜಾರಿ, ಶ್ರೀಕಾಂತ್, ಅರುಣ್ ಜಂಬಳ್ಳಿ, ಶ್ರೀಧರ್ ಮಕ್ಕಿಕೊಪ್ಪ, ಹೇಮರಾಜ್,ಸುಧಾಕರ್ ಕುಪ್ಪಳ್ಳಿ ಮುಂತಾದವರು ಇದ್ದರು.
