Categories
ತೀರ್ಥಹಳ್ಳಿ

ಮೇ.13-14ರಂದು ಪಂಚ ದೇವರ ಕ್ಷೇತ್ರ ಆಲಬಳ್ಳಿಯಲ್ಲಿ ಜಾತ್ರೆ

ಮೇ.13-14ರಂದು ಪಂಚ ದೇವರ ಕ್ಷೇತ್ರ ಆಲಬಳ್ಳಿಯಲ್ಲಿ ಜಾತ್ರೆ
– 66ನೇ ವರ್ಷದ ವಾರ್ಷಿಕ ಜಾತ್ರೆ, ಕೆಂಡಸೇವೆ, ಧಾರ್ಮಿಕ ಕಾರ್ಯಕ್ರಮ
– ಸರ್ವರಿಗೂ ಸ್ವಾಗತ: ಮಲೆನಾಡ ಕಾರ್ಣಿಕ ದೇವಸ್ಥಾನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಆಲಬಳ್ಳಿ ಪಂಚ ದೇವರ ಕ್ಷೇತ್ರವಾದ ಶ್ರೀ ಪಂಚಮುಖಿ ಮಹಾಗಣಪತಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ, ಶ್ರೀ ನಾಗದೇವರು, ಶ್ರೀ ಚಾಮುಂಡೇಶ್ವರಿ ಶ್ರೀ ಹೊನ್ನವತ್ತಮ್ಮ ಮತ್ತು ಶ್ರೀ ಗುಳ್ಳೇಮಾರಿಯಮ್ಮ ದೇವಸ್ಥಾನದಲ್ಲಿ ಮೇ.13 ಮತ್ತು 14ರಂದು ಕ್ಷೇತ್ರದ 66ನೇ ವರ್ಷದ ವಾರ್ಷಿಕ ಜಾತ್ರೆ ಉತ್ಸವ ಮತ್ತು ಕೆಂಡಸೇವೆ ಜರುಗಲಿದೆ. ಮೇ.13ರ ಸೋಮವಾರ ಪಂಚಮುಖಿ ಗಣಪತಿಗೆ ಗಣಹೋಮ, ಪಂಚಮುಖ ಆಂಜನೇಯ ಸ್ವಾಮಿಗೆ ವಾಯುಸ್ತುತಿ, ಪುನಚರಣ ಹೋಮ, ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಹೋಮ, ಮತ್ತು ನಾಗದೇವರಿಗೆ ಪವಮಾನ ಅಭಿಷೇಕ, ಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಅಷ್ಟಬಂಧ ಲೇಪನ ಸಪ್ತಶತಿಪಾರಾಯಣ ಹಾಗೂ ಕಲಶಸ್ಥಾಪನೆ ನಡೆಯಲಿದೆ.
ಮೇ.14ರ ಮಂಗಳವಾರ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಚಂಡಿಕಾಹವನ, ಬ್ರಹ್ಮಕುಂಭಾಭಿಷೇಕ (ಪೂರ್ಣಾಹುತಿ 12.00 ಗಂಟೆಗೆ) ಮಹಾಮಂಗಳಾರತಿ, ಪ್ರಸಾದ ವಿನಿಯೋಗ ವಾರ್ಷಿಕ ಜಾತ್ರಾ ಉತ್ಸವ ರಾತ್ರಿ 10ಕ್ಕೆ ಕೆಂಡಸೇವೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

ಪಲ್ಲಕ್ಕಿ ಉತ್ಸವ ಸಡಗರ

ಮೇ.14ರ ಮಧ್ಯಾಹ್ನ 3 ಗಂಟೆಗೆ ಚಾಮುಂಡೇಶ್ವರಿ ಅಮ್ಮನವರ ಪಲ್ಲಕ್ಕಿ ಪಂಚಕ್ಷೇತ್ರದಿಂದ ಆಲಬಳ್ಳಿಯಿಂದ ಹೊರಟು ಸಂಜೆ 5 ಗಂಟೆಗೆ ಶ್ರೀ ರಾಮೇಶ್ವರ ದೇವಸ್ಥಾನ ತಲುಪಿ ಅಲ್ಲಿಂದ ಶ್ರೀ ಮಾರಿಕಾಂಬ ದೇವಸ್ಥಾನ ನಂತರ ಕೊಪ್ಪಸರ್ಕಲ್ ಕುರುವಳ್ಳಿ ಮಾರ್ಗವಾಗಿ ದೇವಸ್ಥಾನವನ್ನು ತಲುಪುವುದು. ಮೇ.14ರ ಮಂಗಳವಾರದಂದು ಶ್ರೀ ಆದಿಶಂಕರಾಚಾರ್ಯ ಶಾರದಾ ನೃಸಿಂಹ ಶ್ರೀಮಠ ಹರಿಹರಪುರ ವೀರಾಧೀಶ್ವರರಾದ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿ ಅನುಗ್ರಹಿಸಲಿದ್ದಾರೆ. ಬೆಳಿಗ್ಗೆ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, ಮಧ್ಯಾಹ್ನ 12ಕ್ಕೆ ಚಂಡಿಕಾಹವನದ ಪೂರ್ಣಾಹುತಿ, ಬ್ರಹ್ಮಕುಂಭಾಭಿಷೇಕ, ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಬಂಗಾರದ ಮುಖವಾಡ ಸಮರ್ಪಣೆ, ಶ್ರೀಗಳಿಗೆ ಪಾದಪೂಜೆ, ಶ್ರೀಗಳವರಿಂದ ಅನುಗ್ರಹ ನುಡಿಗಳು, ಫಲಮಂತ್ರಾಕ್ಷತೆ ಕಾರ್ಯಕ್ರಮಗಳು ಇರುತ್ತದೆ.

ವಿ. ಸೂ :ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನವು ಕುರುವಳ್ಳಿಯಿಂದ 5ಕಿಮೀ ದೂರದಲ್ಲಿದೆ. ಪ್ರತೀ ಮಂಗಳವಾರ ಹೇಳಿಕೆ, ಕೇಳಿಕೆ ಮತ್ತು ಅನ್ನಸಂತರ್ಪಣೆ ಇರುತ್ತದೆ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.